Asianet Suvarna News Asianet Suvarna News

ನಿನಗೆ ತಾಕತ್ತಿದ್ರೆ ಬಂದ್ ಮಾಡು: ವಾಟಾಳ್‌ಗೆ ಸಿಎಂ ರಾಜಕೀಯ ಕಾರ್ಯದರ್ಶಿ ವಾರ್ನ್

ಮರಾಠ ಪ್ರಾಧಿಕಾರ ರಚನೆಗೆ ಸಿಎಂ ಬಿಎಸ್ ಯಡಿಯೂಪ್ಪ ಆದೇಶ ಹೊರಡಿಸಿರುವುದನ್ನು ವಿರೋಧಿದಕ್ಕೆ ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ಕೊಟ್ಟಿದ್ದು ಹೀಗೆ....

BJP MLA mp Renukacharya Warns vatal-nagaraj For Karnataka Bandh On Dec 5 rbj
Author
Bengaluru, First Published Nov 24, 2020, 3:37 PM IST

ದಾವಣಗೆರೆ, (ನ.24): ಡೊಂಬರಾಟದ ವಾಟಾಳ್ ನಾಗರಾಜ್ ನಿನಗೆ ತಾಕತ್ತಿದ್ದರೆ ಈ ರಾಜ್ಯ ಬಂದ್ ಮಾಡು ನೋಡೋಣ. ಮುಖ್ಯಮಂತ್ರಿಗಳ ಬಗ್ಗೆ ಕೇವಲವಾಗಿ ಮಾತಾಡುತ್ತೀರಾ. ಹುಷಾರ್ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ ಕೊಟ್ಟಿದ್ದಾರೆ.

ಮರಾಠ ಪ್ರಾಧಿಕಾರ ರಚನೆಗೆ ಸಿಎಂ ಬಿಎಸ್ ಯಡಿಯೂಪ್ಪ ಆದೇಶ ಹೊರಡಿಸಿರುವುದನ್ನು ವಿರೋಧಿ ಕೆಲ ಕನ್ನಡ ಪರ ಸಂಘಟನೆಗಳು ಡಿ.5ಕ್ಕೆ ಕರ್ನಾಟಕ ಬಂದ್‌ ಕರೆ ಕೊಟ್ಟಿವೆ.

ಯಾರು ಏನೇ ಹೇಳಿದರೂ ಕರ್ನಾಟಕ ಬಂದ್ ಹಿಂಪಡೆಯುವುದಿಲ್ಲ : ವಾಟಾಳ್ ನಾಗರಾಜ್

ಈ ಬಗ್ಗೆ ಇಂದು (ಮಂಗಳವಾರ) ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ, ವಾಟಾಳ್ ನಾಗರಾಜ್ ಬೂಟಾಟಿಕೆಯ ವ್ಯಕ್ತಿ. ಎಷ್ಟು ಅಕ್ರ‌ಮ ಮಾಡಿದ್ದಾರೆ ಎಂದರೆ ಮೈಸೂರಿನ ವರುಣ ಕ್ಷೇತ್ರದಲ್ಲಿ 70 ಎಕರೆ ಭೂಮಿ ಅಕ್ರ‌ಮವಾಗಿ ವಶ ಪಡಿಸಿಕೊಂಡಿದ್ದಾರೆ. ಇವರ ಜಮೀನಿನಲ್ಲಿ ಕೆಲಸ ಮಾಡುತ್ತಿರುವುದು ತಮಿಳರು. ವಾಟಾಳ್ ಬೆಂಗಳೂರಿನಲ್ಲಿ ಎಷ್ಟು ಸೈಟ್ ಮಾಡಿದ್ದಾರೆ ಎಂಬ ಬಗ್ಗೆ ನನ್ನ ಕಡೆ ದಾಖಲೆಗಳಿವೆ. ಮುಖ್ಯಮಂತ್ರಿಗಳ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದ್ರೆ ಹುಷಾರ್ ಎಂದು ವಾರ್ನಿಂಗ್ ಮಾಡಿದರು.

ಸಿಎಂಗೆ ಯತ್ನಾಳ್ ಡೆಡ್ ಲೈನ್ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪನವರ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಡೆಡ್ ಲೈನ್ ಕೊಡುವುದು ಎಷ್ಟರ ಮಟ್ಟಿಗೆ ಸರಿ? ಪಕ್ಷದ ವರಿಷ್ಠರು ಪಕ್ಷದ ಶಾಸಕಾಂಗದ ಸದಸ್ಯರು ಯಡಿಯೂರಪ್ಪನವರನ್ನು ನಮ್ಮ ನಾಯಕರೆಂದು ತೀರ್ಮಾನ ಮಾಡಿದ್ದೇವೆ. ಯತ್ನಾಳ್ ಡೆಡ್ ಲೈನ್ ಕೊಡುವುದು ಸರಿಯಲ್ಲ ಎಂದರು.

ಹಾದಿ- ಬೀದಿಯಲ್ಲಿ ನಿಂತು ಮಾತನಾಡುವುದರಿಂದ ಪಕ್ಷದ ಗೌರವ ಕಡಿಮೆಯಾಗುವುದಿಲ್ಲ. ಯಾರು ಮಾತನಾಡುತ್ತಾರೋ ಅವರ ವರ್ಚಸ್ಸು ಕಡಿಮೆಯಾಗುತ್ತದೆ. ಇದು ಪಕ್ಷಕ್ಕೆ ಶೋಭೆ ತರುವ ವಿಚಾರವಲ್ಲ. ಸಿಎಂ ಸೀಟ್ ಖಾಲಿ ಇಲ್ಲ. ಮುಖ್ಯಮಂತ್ರಿ ಗಳ ಕುರ್ಚಿ ಕೂಡ ಖಾಲಿ‌ ಇಲ್ಲ ಎಂದು ಪರೋಕ್ಷವಾಗಿ ಯತ್ನಾಳ್‌ಗೆ ಟಾಂಗ್ ಕೊಟ್ಟರು.

Follow Us:
Download App:
  • android
  • ios