ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಶಿಕಾರಿಪುರ ಕ್ಷೇತ್ರವನ್ನು ಪುತ್ರನಿಗೆ ತ್ಯಾಗ ಮಾಡುವ ಮೂಲಕ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ರಾಜಕೀಯ ನಿವೃತ್ತಿಯ ಸುಳಿವು ಕೊಟ್ಟಿದ್ದಾರೆ. ಇನ್ನು ಈ ವಿಚಾರಕ್ಕೆ ಶಾಸಕ ರಾಜಕೀಯ ಗುರು ನೆನೆದು ಗದ್ಗದಿತರಾಗಿದ್ದಾರೆ.

ಚಿತ್ರದುರ್ಗ, (ಜುಲೈ.22): ಮಾಜಿ ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಅವರು ತಾವು ಪ್ರತಿನಿಧಿಸುತ್ತಿದ್ದ ಶಿಕಾರಿಪುರವನ್ನು ತಮ್ಮ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಧಾರೆ ಎರೆದಿದ್ದಾರೆ. ಈ ಮೂಲಕ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಬಿಎಸ್ ಯಡಿಯೂರಪ್ಪನವರ ಈ ದಿಢೀರ್ ನಿರ್ಧಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವು ಅನೇಕ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಇನ್ನು ಇದೇ ವಿಚಾರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಭಾವುಕರಾಗಿದ್ದಾರೆ.

ಹೌದು...ಇಂದು(ಶುಕ್ರವಾರ) ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳ ಜೊತೆ ಮಾಡಿದನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ಯಡಿಯೂರಪ್ಪ ಅವರ ಹೆಸರು ಕೇಳಿದರೆ ಮೈ ರೋಮಾಂಚಕ ಆಗುತ್ತದೆ ಎಂದು ಗದ್ಗದಿತರಾದರು.

ಪುತ್ರನಿಗೆ ಬಿಎಸ್‌ವೈ ಕ್ಷೇತ್ರ ತ್ಯಾಗ: ಇದು ಬಿಜೆಪಿ ನಿರ್ಧಾರ ಅಲ್ಲ, ಅಚ್ಚರಿ ಹೇಳಿಕೆ ನೀಡಿದ ಸಚಿವ

ಬಿಎಸ್ ವೈ ಅವರ ಹೇಳಿಕೆ ನಮ್ಮೆಲ್ಲರಿಗೂ ಆಘಾತವಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯ ವಿಜಯ ಪತಾಕೆ ಹಾರಿಸಿದ್ದವರು. ಅನಂತ್ ಕುಮಾರ್, ಈಶ್ವರಪ್ಪ ಜೊತೆ ಸೇರಿ ಸಂಘಟನಾ ಚತುರರು. ಏನೂ ಇಲ್ಲದ ಕಾಲದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುತ್ತದೆ ಎಂತಿದ್ದರು. ರೈತ ವರ್ಗದವರು ಬಿಎಸ್ ವೈ ಕೆಲಸಗಳನ್ನು ಇನ್ನೂ ಸ್ಮರಣೆ ಮಾಡ್ತಿದ್ದಾರೆ.ಯಡಿಯೂರಪ್ಪ ಅವರು ಅಜಾತಶತ್ರು. ಜ್ಯಾತ್ಯಾತೀತ ನಾಯಕ, ಮಾಸ್ ಲೀಡರ್, ಯಾಕೆ ಈ ನಿರ್ಧಾರ ತೆಗೆದುಕೊಂಡ್ರೋ ಗೊತ್ತಿಲ್ಲ ಎಂದರು.

ವಿಜಯೇಂದ್ರ ಅವರ ಸ್ಪರ್ಧೆ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಬಿಎಸ್ ವೈ ಹೆಸರು ಕೇಳಿದ್ರೆ ಸಾಕು ಮೈ ರೋಮಾಚನ ಆಗುತ್ತೆ. ಎಲ್ಲೋ‌ ಇದ್ದವನನ್ನ ರಾಜಕಾರಣಕ್ಕೆ ತಂದು ಬೆನ್ನು ತಟ್ಟಿದ್ರು. ಬಿಎಸ್ ವೈ ಇಲ್ಲದ ರಾಜಕಾರಣ ‌ನೋಡಲು ಸಾಧ್ಯವಿಲ್ಲ. ಅವರ ಮೇಲೆ ನನಗೆ ಅಪರವಾದ ಗೌರವಿದೆ. ಯಡಿಯೂರಪ್ಪ ಕೇವಲ ನನ್ನ ಮಾತ್ರ ಅಲ್ಲ ಪ್ರತಿಯೊಬ್ಬರನ್ನೂ ಬೆಳೆಸಿದ್ರು ಎಂದು ಯಡಿಯೂರಪ್ಪ ಅವರನ್ನು ನೆನೆದು ಭಾವುಕರಾದರು.

ಪುತ್ರಿನಿಗೆ ಬಿಎಸ್‌ವೈ ಕ್ಷೇತ್ರ ತ್ಯಾಗ: ಯತೀಂದ್ರ ಸಿದ್ದರಾಮಯ್ಯ ಹಾದಿ ಸುಗಮ, ಕಾಂಗ್ರೆಸ್‌ಗೆ ಪ್ಲಸ್

ಚುನಾವಣೆ ಕಣದಿಂದ ಹಿಂದೆ ಸರಿದ ರಾಜಾಹುಲಿ
ಯೆಸ್...ವಿಜಯೇಂದ್ರಗೆ ಕ್ಷೇತ್ರ ಬಿಟ್ಟುಕೊಡುವ ಮೂಲಕ ಬಿಎಸ್ ಯಡಿಯೂರಪ್ಪ ಅವರು ಮುಂಬರುವ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸುಉದಾಗಿ ಸ್ಮಷ್ಟಪಡಿಸಿದ್ದಾರೆ. ಇನ್ನು ಬಿಎಸ್‌ವೈ ಮುಂದೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳತ್ತಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.ಇನ್ನು ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವರಿಗೆ ಟಿಕೆಟ್ ನೀಡುತ್ತಾ? ಯಡಿಯೂರಪ್ಪನವರ ಕ್ಷೇತ್ರ ತ್ಯಾಗ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಬಿಎಸ್ ವೈ ಅವರ ಮುಂದಿನ ನಡೆ ಏನು ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.