ಬೆಂಗಳೂರು, (ಮಾ.09): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ‘ಶಾದಿಭಾಗ್ಯ’ ಯೋಜನೆಯನ್ನು ಬಿ.ಎಸ್. ಯಡಿಯೂರಪ್ಪನವರ ಬಿಜೆಪಿ ಸರ್ಕಾರ ರದ್ದುಪಡಿಸಿದೆ.

ಈ ಕ್ರಮವನ್ನ ವಿಜಯಪುರ ನಗರ ಬಿಜೆಪಿ ಶಾಸಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಾಗತಿಸಿದ್ದು, ಪಾಕಿಸ್ತಾನ ಇಂಥಹ ಯೋಜನೆ ನೀಡುತ್ತಿದೆ. ಬೇಕಿದ್ದವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಗುಡುಗಿದರು.

ಸಿದ್ದು ಜಾರಿಗೆ ತಂದಿದ್ದ ‘ಶಾದಿ ಭಾಗ್ಯ’ ಸ್ಥಗಿತ!

ಶಾದಿಭಾಗ್ಯ ರದ್ದು ಪಡಿಸಿರುವುದು ಉತ್ತಮ ಕೆಲಸ,  ನಾನು ಇದನ್ನು  ಸ್ವಾಗತಿಸುತ್ತೇನೆ,  ಭಾರತ ಜಾತ್ಯಾತೀತ ರಾಷ್ಟ್ರ, ಹೀಗಾಗಿ ಅಲ್ಪ ಸಂಖ್ಯಾತರ ಓಲೈಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು. 

ಭಾರತದ ಎಲ್ಲಾ ಜನರಿಗೂ  ಸರಿಸಮಾನದ ನಾಗರಿಕ ಸಂಹಿತೆ ತರಬೇಕು.  ಭಾರತದಲ್ಲಿರುವ ಹಿಂದೂಗಳಿಗೆ ಏನನನ್ನೂ ನೀಡಬಾರದೇ?  ಜಾತ್ಯಾತೀತ ಎಂದರೇ ಎಲ್ಲವನ್ನೂ ಅಲ್ಪ ಸಂಖ್ಯಾತರಿಗೆ ನೀಡುವುದು ಎಂದರ್ಥವೇ ಎಂದು ಪ್ರಶ್ನಿಸಿದ್ದಾರೆ.

ಮುಸ್ಲಿಂ, ಕ್ರೈಸ್ತ, ಜೈನ್‌, ಸಿಖ್‌ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದ ಯುವತಿಯರ ಮದುವೆಗೆ 50 ಸಾವಿರ ರೂ. ನೀಡುವ ಯೋಜನೆ ಇದಾಗಿದೆ.

ಶಾದಿಭಾಗ್ಯ ರದ್ದು ಮಾಡಿ ಇದರ ಬದಲಿಗೆ ರಾಜ್ಯ ಸರ್ಕಾರವೇ ಸಮೂಹಿಕ ವಿವಾಹ ಮಾಡುವ ಯೋಜನೆಯನ್ನ ಜಾರಿಗೆ ತಂದಿದೆ. ಸರ್ಕಾರ ನಡೆಸಿ ಕೊಡುವ ಈ ಸಾಮೂಹಿಕ ವಿವಾಹದಲ್ಲಿ ಎಲ್ಲಾ ವರ್ಗದವರಿಗೂ ಅವಕಾಶ ಇದೆ.