ಕಾವೇರಿ ರೀತಿ ಕೃಷ್ಣಾಗೆ ಹಣ ಸಿಕ್ತಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ನೀರಾವರಿ, ಶಿಕ್ಷಣ, ಸಾರಿಗೆ, ಕೈಗಾರಿಕೆ ಸೇರಿ ವಿವಿಧ ಇಲಾಖೆಗಳಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯದ ಬಗ್ಗೆ ಕಿಡಿ ಕಾರಿದರು. ಇದೇ ವೇಳೆ ಪ್ರತಿ ತಿಂಗಳಿಗೆ ಒಂದು ಬಾರಿ ಸಚಿವ ಸಂಪುಟ ಸಭೆಯನ್ನು ಬೆಳಗಾವಿ ಯಲ್ಲಿ ನಡೆಸಬೇಕು. ಪ್ರತಿ ವರ್ಷ 15 ದಿನಗಳ ಕಾಲ ಕಡ್ಡಾಯವಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸ ಬೇಕು ಎಂದು ಒತ್ತಾಯಿಸಿದ ಬಸನಗೌಡ ಪಾಟೀಲ್ ಯತ್ನಾಳ್
ಸುವರ್ಣ ವಿಧಾನಸಭೆ(ಡಿ.19): ಉತ್ತರ ಕರ್ನಾಟಕ ಭಾಗಕ್ಕೆ ನೀರಾವರಿಯಲ್ಲಿ ದೊಡ್ಡ ಮಟ್ಟದ ಅನ್ಯಾಯವಾಗಿದ್ದು, ಕಾವೇರಿಗೆ ನೀಡುವ ಅರ್ಧದಷ್ಟೂ ಹಣ ಕೃಷ್ಣಾ ಯೋಜನೆಗಳಿಗೆ ನೀಡುತ್ತಿಲ್ಲ. ಗ್ಯಾರಂಟಿಗಳ ಬದಲು ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆಗೆ ಹಣ ನೀಡಿ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಬುಧವಾರ ಉತ್ತರ ಕರ್ನಾಟಕ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀರಾವರಿ, ಶಿಕ್ಷಣ, ಸಾರಿಗೆ, ಕೈಗಾರಿಕೆ ಸೇರಿ ವಿವಿಧ ಇಲಾಖೆಗಳಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯದ ಬಗ್ಗೆ ಕಿಡಿ ಕಾರಿದರು. ಇದೇ ವೇಳೆ ಪ್ರತಿ ತಿಂಗಳಿಗೆ ಒಂದು ಬಾರಿ ಸಚಿವ ಸಂಪುಟ ಸಭೆಯನ್ನು ಬೆಳಗಾವಿ ಯಲ್ಲಿ ನಡೆಸಬೇಕು. ಪ್ರತಿ ವರ್ಷ 15 ದಿನಗಳ ಕಾಲ ಕಡ್ಡಾಯವಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸ ಬೇಕು ಎಂದು ಒತ್ತಾಯಿಸಿದರು.
ತಮ್ಮ ಕೆಲಸ ಬಿಟ್ಟು ಶಾಸಕಾಂಗದಲ್ಲಿ ಕೋರ್ಟ್ ಮಧ್ಯಪ್ರವೇಶ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ
ಕೃಷ್ಣಾ ಮೇಲ್ದಂಡೆ ಯೋಜನೆ-3ನೇ ಹಂತಕ್ಕೆ ಜಮೀನು ನೀಡಲು ರೈತರು ಸಿದ್ದವಾಗಿದ್ದಾರೆ. ಯೋಜನೆ ಅನುಷ್ಠಾನ ಗೊಳಿಸಿದರೆ 15 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಆಗಲಿದೆ. ಈ ಭಾಗದ ಜನರುಚಿನ್ನ ಬಿತ್ತಿ ಚಿನ್ನ ಬೆಳೆಯಬಹುದಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಯೋಜನೆಗೆ 1.5 ಲಕ್ಷ ಕೋಟಿ ರು. ಆಗಬಹುದು ಎಂಬ ಅಂದಾ ಜಿತ್ತು. ಆದರೆ ಸಚಿವ ಎಂ.ಬಿ. ಪಾಟೀಲ್ ಅವರು 70 ಸಾವಿರ ಕೋಟಿ ರು. ಮಾತ್ರ ಸಾಕು ಎಂದಿದ್ದಾರೆ. ಗ್ಯಾರಂಟಿಗಳ ಬದಲು ವರ್ಷಕ್ಕೆ 30-40 ಸಾವಿರ ಕೋಟಿ ರು. ವೆಚ್ಚ ಮಾಡಿ 3-4 ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ ಎಂದು ಹೇಳಿದರು.
ಎಲ್ಲಾ ನಾಯಕರೂ ಕೃಷ್ಣಯ ಮೇಲೆ ಆಣೆ ಮಾಡುವುದು, ಪಾದಯಾತ್ರೆ ಮಾಡುವುದೇ ಆಯಿತು. ಆದರೆ ಚುನಾವಣೆ ಮುಗಿದು ಮುಖ್ಯಮಂತ್ರಿ ಆದ ನಂತರ ಹಣ ಎಲ್ಲಿದೆ ಎನ್ನುತ್ತಾರೆ. ಹಣಕಾಸು ಇಲಾ ಅಸುತ್ತೇನೆ ಎಂದು ತೊಳೆದುಕೊಳ್ಳುತ್ತಾರೆ. ಆದರೆ ಖೆಯವರು ಹಣಕಾಸಿನ ಲಭ್ಯತೆ ಅನುಸಾರ ಬೆಂಗಳೂರಿನ ಪೆರಿಫೆರಲ್ 29,000 ಕೋಟಿ ರು. ಹಣ ನೀಡುತ್ತಾರೆ. ಉತ್ತರ ಕರ್ನಾಟಕ ಭಾಗದ ಬಗ್ಗೆ ಯಾಕೆ ಇಷ್ಟು ತಾತ್ಸಾರ? ನೀರಾವರಿ ಯೋಜನೆಗಳು ಉತ್ತರ ಕರ್ನಾಟಕದಲ್ಲಿ ಹೆಚ್ಚಿದ್ದು, ಈ ಭಾಗದವರು ಸಚಿವರಾದರೆ ಮಾತ್ರ ನ್ಯಾಯ ಒದಗಿಸಲು ಸಾಧ್ಯ. ಹೀಗಾಗಿ ಉತ್ತರ ಕರ್ನಾಟಕ ಭಾಗದವರನ್ನು ನೀರಾವರಿ ಸಚಿವರನ್ನಾಗಿ ಮಾಡಿ ಎಂದರು.
ಈ ವೇಳೆ ಶಿವಲಿಂಗೇಗೌಡ ಸೇರಿದಂತೆ ಕಾಂಗ್ರೆಸ್ ಸದಸ್ಯರು, ರಾಷ್ಟ್ರೀಯ ಯೋಜನೆ ಮಾಡಿ ಹಣ ತನ್ನಿ ಎಂದು ಆಗ್ರಹಿಸಿದರು. ಉತ್ತರ ಕರ್ನಾಟಕ ಭಾಗಕ್ಕೆ ಎಲ್ಲಾ ರೀತಿ ಅನ್ಯಾಯ ಎಸಗಲಾಗಿದೆ ಎಂದರು.
ವಕ್ಫ್: ಸರ್ಕಾರಕ್ಕೆ ಜಿಟಿಡಿ, ಎಸ್ಟಿಎಸ್ ಬಹು ಪರಾಕ್, ಬಿಜೆಪಿ, ಜೆಡಿಎಸ್‌ಗೆ ಮುಜುಗರ
ತುಮಕೂರು-ಶಿರಾ ಮಧ್ಯ ವಿಮಾನ ನಿಲ್ದಾಣ ಸ್ಥಾಪಿಸಿ: ಅರವಿಂದ ಬೆಲ್ಲದ್
ಸುವರ್ಣ ವಿಧಾನಸಭೆ: ರಾಜ್ಯಕ್ಕೆ 2ನೇ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾ ಣವು ತುಮಕೂರು-ಶಿರಾ ನಡುವೆ ಸ್ಥಾಪನೆಯಾದರೆ, ಅದರಿಂದ ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ಸೇರಿದಂತೆ ಮತ್ತಿತರ ಕ್ಷೇತ್ರಗಳ ಅಭಿವ್ಯ ದಿಗೆ ಅನುಕೂಲವಾಗಲಿದೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಮನವಿ ಮಾಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ಸಮಸ್ಯೆ ಕುರಿತಂತೆ ನಿಯಮ 68ರ ಅಡಿಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಉತ್ತರ ಕರ್ನಾಟಕವು ದಕ್ಷಿಣ ಕರ್ನಾಟಕಕ್ಕಿಂತ ಹಿಂದಿದೆ. ಉತ್ತರ ಕರ್ನಾಟಕದ ಜನರ ಸರಾಸರಿ ಆದಾ ಯದಲ್ಲಿ ಕಡಿಮೆಯಿದೆ. ಪ್ರವಾಸೋ ಪ್ರೇಮವು ಸಾಕಷ್ಟು ಹಿಂದುಳಿದಿದೆ. ಉತ್ತರ ಕರ್ನಾಟಕದಲ್ಲಿ ಹಲವು ತಾಣಗಳಿದ್ದರೂ, ಅಭಿವೃದ್ಧಿಗೆ ಆದ್ಯತೆ ದೊರೆತಿಲ್ಲ ಎಂದು ಹೇಳಿದರು.