ತಮ್ಮ ಕೆಲಸ ಬಿಟ್ಟು ಶಾಸಕಾಂಗದಲ್ಲಿ ಕೋರ್ಟ್‌ ಮಧ್ಯಪ್ರವೇಶ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ

ನ್ಯಾಯಾಂಗ ಈಗ ತನ್ನ ಕಾರ್ಯದ ಜತೆಗೆ ಶಾಸಕಾಂಗ, ಕಾರ್ಯಾಂಗಗಳು ಮಾಡಬೇಕಿ ರುವ ಕೆಲಸಗಳನ್ನೂ ಮಾಡುತ್ತಿದೆ. ನನ್ನ ಇಲಾಖೆಗೇ ಹಲವು ಆದೇಶಗಳು ಬರುತ್ತಿವೆ. ಕೆಲವೊಮ್ಮೆ ಸಣ್ಣರಸ್ತೆ ನಿರ್ಮಾಣವಿಚಾರದಲ್ಲೂ ಸೂಚನೆಗಳನ್ನು ನೀಡುತ್ತಿವೆ. ಹೀಗೆ ನ್ಯಾಯಾಂಗ ಗಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ: ಸಚಿವ ಪ್ರಿಯಾಂಕ್ ಖರ್ಗೆ

Government should discuss intervention by courts Says Minister Priyank Kharge grg

ಸುವರ್ಣ ವಿಧಾನಸಭೆ (ಡಿ.19):  ನ್ಯಾಯಾಲಯಗಳು ನ್ಯಾಯಾಂಗದ ಕಾರ್ಯ ಮಾಡುವ ಬದಲು, ಶಾಸಕಾಂಗ, ಕಾರ್ಯಾಂಗದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಇದು ಸರಿಯಲ್ಲ. ನ್ಯಾಯಾಂಗದ ಕಾರ್ಯ ವ್ಯಾಪ್ತಿ ಬಗ್ಗೆ ಸುದೀರ್ಘ ಚರ್ಚೆಯಾಗುವ ಅವಶ್ಯಕತೆಯಿದೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಬಾಣಂತಿಯರ ಸಾವಿನ ಕುರಿತ ಚರ್ಚೆ ವೇಳೆ ಔಷಧ ಪೂರೈಕೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಕ್ಕೆ ನ್ಯಾಯಾಲಯ ತಡೆ ನೀಡಿರುವ ಕುರಿತು ಬುಧವಾರ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾಡಿದ ಪ್ರಸ್ತಾಪಕ್ಕೆ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶಿಸಿ ಮಾತನಾಡಿದರು. 

One Nation, One Election: ಅದಾನಿ ಉಳಿಸಲು ಮೋದಿ ಇಂಥ ತಂತ್ರ ಮಾಡ್ತಾರೆ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ನ್ಯಾಯಾಂಗ ಈಗ ತನ್ನ ಕಾರ್ಯದ ಜತೆಗೆ ಶಾಸಕಾಂಗ, ಕಾರ್ಯಾಂಗಗಳು ಮಾಡಬೇಕಿ ರುವ ಕೆಲಸಗಳನ್ನೂ ಮಾಡುತ್ತಿದೆ. ನನ್ನ ಇಲಾಖೆಗೇ ಹಲವು ಆದೇಶಗಳು ಬರುತ್ತಿವೆ. ಕೆಲವೊಮ್ಮೆ ಸಣ್ಣರಸ್ತೆ ನಿರ್ಮಾಣವಿಚಾರದಲ್ಲೂ ಸೂಚನೆಗಳನ್ನು ನೀಡುತ್ತಿವೆ. ಹೀಗೆ ನ್ಯಾಯಾಂಗ ಗಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಶಾಸನ ರಚಿಸಿ, ಅನುಷ್ಠಾನ ಮಾಡುವ ನಮಗೆ ಅಧಿಕಾರವಿಲ್ಲವೇ? ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಣಂತಿಯರ ಸಾವಿನಲ್ಲೂ ಇದೇ ರೀತಿಯಾಗಿದ್ದು, ಔಷಧ ಪೂರೈಕೆ ಗುತ್ತಿಗೆದಾರ ಸರಿಯಿಲ್ಲ ಎಂದು ಕಪ್ಪುಪಟ್ಟಿಗೆ ಸೇರಿಸಿದರೆ ಅದಕ್ಕೆ ತಡೆ ನೀಡಿದರು. ಇದು ಕೂಡ ದುರ್ಘಟನೆ ಸಂಭವಿಸಲು ಕಾರಣವಾಗಿದೆ.ನ್ಯಾಯಾಂಗ ವ್ಯವಸ್ಥೆ ಹಾಗೂ ಕಾರ್ಯದ ಬಗ್ಗೆ ಸದನದಲ್ಲಿ ವಿಸ್ತ್ರತ ಚರ್ಚೆಯಾಗಬೇಕಿದೆ. ಶಾಸನ ಮಾಡುವವರಿಗೆ ಅಧಿಕಾರವಿಲ್ಲವೇ ಎಂಬುದು ನಿರ್ಧಾರವಾಗಬೇಕಿದೆ ಎಂದರು. ಇದಕ್ಕೆ ಪ್ರತಿಪಕ್ಷದ ನಾಯಕ ಆ‌ರ್.ಅಶೋಕ್‌ ಅವರು ಕಳಪೆ ಔಷಧ ಪೂರೈಸಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಕ್ಕೆ ಕೋರ್ಟ್ ತಡೆ ನೀಡಿದರೆ ಸಾವಿಗೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು, ನ್ಯಾಯಾಲಯ ತಡೆಯಾಜ್ಞೆ ನೀಡಿದರೆ ಜೀವಕ್ಕೆ ಯಾರು ಜವಾಬ್ದಾರರು. ಒಂದು ಲ್ಯಾಬ್ ಕಳಪೆ ಔಷಧಿ ಎಂದು ಹೇಳಿದರೆ ಮತ್ತೊಂದು ಲ್ಯಾಬ್ ಕಳಪೆ ಇಲ್ಲ ಎಂದು ಹೇಗೆ ಹೇಳುತ್ತದೆ ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಹೇಳಿದ್ದೇನು? 

• ನ್ಯಾಯಾಂಗ ತನ್ನ ಕೆಲಸದ ಬದಲು ಶಾಸಕಾಂಗ, ಕಾರ್ಯಾಂಗದ ಕೆಲಸಕ್ಕೆ ಹಸ್ತಕ್ಷೇಪ ಮಾಡುತ್ತಿದೆ 
• ಸಣ್ಣಪುಟ್ಟ ರಸ್ತೆ ಕೆಲಸಗಳಿಗೂ ನ್ಯಾಯಾಲಯಗಳು ಸರ್ಕಾರಕ್ಕೆ ಆದೇಶ ನೀಡುತ್ತಿವೆ. ಇದು ಸರಿಯಲ್ಲ 
• ಸರ್ಕಾರಿ ಆಸ್ಪತ್ರೆಗಳ ಬಾಣಂತಿಯರ ಸಾವಿನ ಪ್ರಕರ ಣಕ್ಕೂ ಕೋರ್ಟ್ ಹೊರಡಿಸಿದ ಆದೇಶವೇ ಕಾರಣ . ಹಾಗಿದ್ದರೆ ಶಾಸನ ರಚಿಸಿ, ಅನುಷ್ಠಾನ ಮಾಡುವ ನಮಗೆ ಅಧಿಕಾರವಿಲ್ಲವೇ?: ಈ ಬಗ್ಗೆ ಚರ್ಚೆ ಅಗತ್ಯ

Latest Videos
Follow Us:
Download App:
  • android
  • ios