Asianet Suvarna News Asianet Suvarna News

ಬೆಲೆ ಏರಿಕೆ ಆಗ್ತಿದೆ ಅಂತಾ ಬೊಬ್ಬೆ ಹಾಕುವ ಬದಲು ಶ್ರೀಲಂಕಾ ನೋಡಿ: ಅರಣ್ಯ ನಿಗಮ ಅಧ್ಯಕ್ಷೆ ತಾರಾ

ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಚಿನ್ನದ ಬೆಲೆ ಜಾಸ್ತಿಯಾಗಿದೆ ಎಂದು ಕಾಂಗ್ರೆಸ್‌ನವರು ಬೊಬ್ಬೆ ಹೊಡೆಯುವ ಬದಲು ಚೀನಾ, ಬಾಂಗ್ಲದೇಶ, ಶ್ರೀಲಂಕಾ ಹಾಗೂ ನೆರೆಯ ರಾಷ್ಟ್ರಗಳು ಅದೋಗತಿಗೆ ಇಳಿದಿರುವುದು ಇವರಿಗೆ ಕಾಣಿಸುತ್ತಿಲ್ಲವೆ ಎಂದು ಅರಣ್ಯ ನಿಗಮದ ಅಧ್ಯಕ್ಷೆ ,ನಟಿ ತಾರಾ ಪ್ರಶ್ನಿಸಿದರು.

BJP Mahila Yuva Morcha convention at Chitradurga rav
Author
First Published Feb 26, 2023, 5:44 AM IST

ಚಿತ್ರದುರ್ಗ (ಫೆ.26) : ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಚಿನ್ನದ ಬೆಲೆ ಜಾಸ್ತಿಯಾಗಿದೆ ಎಂದು ಕಾಂಗ್ರೆಸ್‌ನವರು ಬೊಬ್ಬೆ ಹೊಡೆಯುವ ಬದಲು ಚೀನಾ, ಬಾಂಗ್ಲದೇಶ, ಶ್ರೀಲಂಕಾ ಹಾಗೂ ನೆರೆಯ ರಾಷ್ಟ್ರಗಳು ಅದೋಗತಿಗೆ ಇಳಿದಿರುವುದು ಇವರಿಗೆ ಕಾಣಿಸುತ್ತಿಲ್ಲವೆ ಎಂದು ಅರಣ್ಯ ನಿಗಮದ ಅಧ್ಯಕ್ಷೆ ,ನಟಿ ತಾರಾ ಪ್ರಶ್ನಿಸಿದರು.

ನಗರದ ಹೊರವಲಯ ಚಂದ್ರವಳ್ಳಿ ಮೈದಾನ(Chandravalli ground)ದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂಕಷ್ಟಪರಿಸ್ಥಿತಿಯಲ್ಲಿಯೂ ಭಾರತದ ಆರ್ಥಿಕತೆಯ ಉತ್ತಮಗೊಳಿಸಿ ಪ್ರತಿಯೊಬ್ಬರ ಜೀವನದಲ್ಲಿ ನೆಮ್ಮದಿ ನೆಲೆಸುವಂತೆ ಪ್ರಧಾನಿ ಮೋದಿ ಮಾಡಿದ್ದಾರೆ. ಅಂತಹ ಸಮರ್ಥ ನಾಯಕ ದೇಶ ಆಳುತ್ತಿರುವುದಕ್ಕೆ ನಾವುಗಳೆಲ್ಲಾ ಹೆಮ್ಮೆ ಪಡಬೇಕು ಎಂದರು.

ಪ್ರತಿ ಕ್ಷೇತ್ರದಲ್ಲೂ ರಾಜ್ಯವೇ ಮುಂಚೂಣಿಯಲ್ಲಿದೆ: ಡಾ.ಅಶ್ವತ್ಥ ನಾರಾಯಣ

ಯಡಿಯೂರಪ್ಪ(BS Yadiyurappa)ನವರು ಮುಖ್ಯಮಂತ್ರಿಯಾಗಿದ್ದಾಗ ಅನೇಕ ಸವಾಲುಗಳನ್ನು ಎದುರಿಸಿ ಎಲ್ಲವನ್ನು ಮೆಟ್ಟಿನಿಂತರು. ಅಂತಃಕರಣವಿರುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ. ಕೇಂದ್ರ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜನರಿಗೆ ಕೊಟ್ಟಿವೆ. ಕೇವಲ ನಮ್ಮ ದೇಶವಷ್ಟೆಅಲ್ಲ , ಬೇರೆ ರಾಷ್ಟ್ರಗಳಲ್ಲಿ ಸಂಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೂ ಮೋದಿ ನೆರವಿನ ಹಸ್ತ ಚಾಚಿದ್ದಾರೆ. ಹಣೆಬೊಟ್ಟು, ಬಳೆ ನಮ್ಮ ಸಂಸ್ಕೃತಿ. ಇಡಿ ಪ್ರಪಂಚ ಭಾರತದ ಕಡೆ ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ನಮ್ಮ ಪ್ರಧಾನಿ ಮೋದಿರವರ ಪಾರದರ್ಶಕ ಆಡಳಿತ ಕಾರಣ ಎಂದು ಶ್ಲಾಘಿಸಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ಮಾತನಾಡಿ, ಸ್ವಾಭಿಮಾನದ ಸಂಕೇತವಾಗಿರುವ ಚಿತ್ರದುರ್ಗ ಬಿಜೆಪಿ ಭದ್ರ ಕೋಟೆ. ಮಹಿಳೆ ಅಭಿವೃದ್ದಿಯಾದರೆ ದೇಶ ಅಭಿವೃದ್ದಿಯಾದಂತೆ ಎನ್ನುವ ಕನಸು ಮೋದಿ(Narendra Modi)ಯವರದು. ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌(Congress party) ನಾನಾ ಪೊಳ್ಳು ಭರವಸೆಗಳನ್ನು ನೀಡುವ ಕೆಲಸ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳ ಪ್ರತಿ ಮನೆ ಮನೆಗೆ ಮುಟ್ಟಿಸಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್‌(CC Patil) ಮಾತನಾಡಿ, ಎಲ್ಲಾ ರಂಗಗಳಲ್ಲಿಯೂ ಪುರುಷನಿಗೆ ಮಹಿಳೆ ಸಮಾನವಾಗಿ ದುಡಿಯುತ್ತಿದ್ದಾಳೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಹೆಗ್ಗಳಿಕೆ ಪ್ರಧಾನಿಗೆ ಸಲ್ಲಬೇಕು. ಎಂಟು, ಒಂಬತ್ತು, ಹತ್ತನೆ ತರಗತಿ ಓದುವ ಹೆಣ್ಣು ಮಕ್ಕಳಿಗೆ ಪ್ರತಿ ವರ್ಷ ಎರಡು ಸಾವಿರ ರು.ಗಳನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಬಿಜೆಪಿಗೆ ಮತ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ತರುವಂತೆ ಮಹಿಳೆಯರಲ್ಲಿ ವಿನಂತಿಸಿದರು.

ಶಾಸಕಿ ಪೂರ್ಣಿಮ ಶ್ರೀನಿವಾಸ್‌ ಮಾತನಾಡಿ, ಒಂದು ಕಾಲದಲ್ಲಿ ಹೆಣ್ಣು ಅಡುಗೆ ಮನೆಗೆ ಮಾತ್ರ ಮೀಸಲು ಎನ್ನುವಂತಿತ್ತು. ಈಗ ಕಾಲ ಬದಲಾಗಿದೆ. ಆಟೋರಿಕ್ಷಾ ಓಡಿಸುವುದರಿಂದ ಹಿಡಿದು ಚಂದ್ರಲೋಕಕ್ಕೂ ಹೋಗುವಷ್ಟುಮಹಿಳೆ ಸಮರ್ಥಳಾಗಿದ್ದಾಳೆ. ನಿರ್ಮಲಾ ಸೀತಾರಾಮನ್‌, ಶೃತಿ ಇರಾನಿ, ಶೋಭಾ ಕರಂದ್ಲಾಜೆ, ಶಶಿಕಲಾ ಜೊಲ್ಲೆ ಇವರುಗಳೆಲ್ಲಾ ರಾಜಕೀಯದಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಯನ್ನು ಘೋಷಿಸಿದರು. ಬಿಸಿಯೂಟ ತಯಾರಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ಒಂದು ಸಾವಿರ ರು.ಗಳನ್ನು ಮುಖ್ಯಮಂತ್ರಿ ಬಸವರಾಜ್‌ಬೊಮ್ಮಾಯಿ ಹೆಚ್ಚಿಗೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌, ಮಹಿಳೆಯರಲ್ಲಿರುವ ಕೌಶಲ್ಯಗಳಿಗೆ ಉತ್ತೇಜನ ನೀಡುವುದಕ್ಕಾಗಿ ಒಂದು ಲಕ್ಷ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದರು.

ಚಿತ್ರದುರ್ಗದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಅದ್ದೂರಿ ಸಮಾವೇಶ, ಹರಿದು ಬಂದ ನಾರಿ ಮಣಿಯರು

ಶಾಸಕರಾದ ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ ಎಂ.ಚಂದ್ರಪ್ಪ , ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿಜಯ ರಾಹತ್ಕರ್‌, ಬಿಜೆಪಿ. ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಮಾತನಾಡಿದರು. ಜಿಲ್ಲಾಧ್ಯಕ್ಷ ಎ.ಮುರಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶೈಲಜಾ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪ ಸುವರ್ಣ, ಕಾರ್ಯದರ್ಶಿ ವತ್ಸಲ, ಕಾರ್ಯಾಲಯ ಕಾರ್ಯದರ್ಶಿ ರಜಿನಿ ಪೈ, ಉಪಾಧ್ಯಕ್ಷೆ ಶರಣಮ್ಮ ಕಾಮರೆಡ್ಡಿ, ಸಾಮಾಜಿಕ ಜಾಲತಾಣದ ಪ್ರತಿಮ ಸುಭಾಷ್‌, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪ್ರಮೀಳ ನಲ್ಲೂರು, ಲಿಂಗಮೂರ್ತಿ, ಜಿ.ಟಿ.ಸುರೇಶ್‌ ಸಿದ್ದಾಪುರ, ಜೈಪಾಲ್‌, ರಾಜೇಶ್‌ಬುರುಡೆಕಟ್ಟೆ, ಶ್ಯಾಮಲ ಶಿವಪ್ರಕಾಶ್‌ ಇನ್ನು ಅನೇಕರು ವೇದಿಕೆಯಲ್ಲಿದ್ದರು.

Follow Us:
Download App:
  • android
  • ios