ಚಿತ್ರದುರ್ಗದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಅದ್ದೂರಿ ಸಮಾವೇಶ, ಹರಿದು ಬಂದ ನಾರಿ ಮಣಿಯರು

ಚಿತ್ರದುರ್ಗ ನಗರದ ಎಸ್ ಜೆಎಂ ಮೈದಾನದಲ್ಲಿ ಚಿತ್ರದುರ್ಗ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು.

A grand convention by BJP Mahila Morcha in Chitradurga gow

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.25): ಇಂದು ಚಿತ್ರದುರ್ಗ ನಗರದ ಎಸ್ ಜೆಎಂ ಮೈದಾನದಲ್ಲಿ ಚಿತ್ರದುರ್ಗ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ಸಮಾವೇಶ ಯಶಸ್ವಿಗೆ ಕಾರಣರಕರ್ತರಾದರು. ಇನ್ನೂ ಈ ವೇಳೆ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಹಾಗೂ ಬಿಜೆಪಿ ಯೂತ್ ಐಕಾನ್ ಬಿ‌ವೈ ವಿಜಯೇಂದ್ರ, ನಟಿ, ಬಿಜೆಪಿ ಮುಖಂಡರಾದ ತಾರಾ ಸೇರಿದಂತೆ ಸ್ಥಳೀಯ ನಾಯಕರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಬಿಜೆಪಿ ಉಪಾಧ್ಯಕ್ಷ ಹಾಗೂ ಮೋರ್ಚಾಗಳ ರಾಜ್ಯ ಸಂಚಾಲಕ ವಿಜಯೇಂದ್ರ, ಸಮಾವೇಸಕ್ಕೆ ಹರಿದು ಬಂದಿರೋ ಎಲ್ಲಾ ನಾರಿಯರು ಒಬ್ಬೊಬ್ಬರು ಒನಕೆ ಓಬವ್ವ ಇದ್ದಂತೆ ಎಂದು ಗುಣಗಾನ ಮಾಡಿದರು. ಕೋಟೆನಾಡು ಚಿತ್ರದುರ್ಗ ಜಿಲ್ಲೆ ಬಿಜೆಪಿಯ ಭದ್ರಕೋಟೆ‌. ಇದೇ ರೀತಿ ಈ ಚುನಾವಣೆಯಲ್ಲಿ ಭದ್ರಕೋಟೆ ಮುಂದುವರೆಯಬೇಕು ಎಂದು ಜನತೆಗೆ ಮನವಿ ಮಾಡಿದರು. 60 ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಈಗ ಚುನಾವಣೆ ವೇಳೆ ಉಚಿತ ವಿದ್ಯುತ್, 10ಕೆಜಿ ಅಕ್ಕಿ ಸೇರಿ ನಾನಾ ಭರವಸೆ ನೀಡುತ್ತಿದೆ. ಕಾಂಗ್ರೆಸ್ ಪೊಳ್ಳು ಭರವಸೆ ನೀಡುತ್ತಿರುವುದು ನಾಚಿಕೆ ಗೇಡಿನ‌ ಸಂಗತಿ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಯಾರೂ ತಪ್ಪಿಸಲಾಗದು. ಸೂರ್ಯ ಚಂದ್ರ ಜಗತ್ತಿನಲ್ಲಿ ಹುಟ್ಟುವುದು ಎಷ್ಟು ಸತ್ಯವೋ ಅದೇ ರೀತಿ ಮತ್ತೊಮ್ಮೆ ಮುಂದಿನ ಬಾರಿಯೂ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಜನರಿಗೆ ತಿಳಿಸಿದರು. ನಿತ್ಯ ಮನೆಗಳಲ್ಲಿ ನೀವೆಲ್ಲಾ ಪೂಜೆ ಸಲ್ಲಿಸುತ್ತೀರಿ. ದೇಶದ ಪ್ರಧಾನಿ ಮೋದಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲೆಂದು ಒಂದು ಹೂವು ಹಾಕಿ ಎಂದು ಜನರಲ್ಲಿ ಮನವಿ ಮಾಡಿ ತಮ್ಮ ಮಾತಿಗೆ ವಿರಾಮ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರು ಹಾಗೂ ಸಿನಿಮಾ ನಟಿ ತಾರಾ ಮಾತನಾಡಿ, ಇದು ಜಿಲ್ಲಾ ಮಟ್ಟದ ಕಾರ್ಯಕ್ರಮವೋ ರಾಜ್ಯ ಮಟ್ಟದ್ದೋ ಎಂದು ನಂಬೋಕೆ ಆಗ್ತಿಲ್ಲ. ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವ ತಾಯಂದಿರಿಗೆ ನನ್ನ ಕೋಟಿ ನಮನಗಳು ಎಂದರು‌. ಇನ್ನೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರಧಾನಿ ಆಗಿದ್ದಾಗ ದೇಶದ ಅಭಿವೃದ್ಧಿಗಿಂತ ಅವರ ಶ್ರೀಮಂತಿಕೆ ಮಟ್ಟ ಹೆಚ್ಚಾಗಿತ್ತು. ಆದ್ರೆ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ 5 ವರ್ಷದಲ್ಲಿ ಇಡೀ ಜಗತ್ತಿನಲ್ಲಿಯೇ ನಮ್ಮ ದೇಶ ವಿಶ್ವವೇ ನಮ್ಮತ್ತ ನೋಡುವಂತೆ ಮಾಡಿದ್ದಾರೆ. ನೀವೇ ಯೋಚನೆ ಮಾಡಿ ಶ್ರೀಮಂತರಾಗೋರು ಬೇಕೋ? ದೇಶವನ್ನು ಬಲಿಷ್ಠ ರಾಷ್ಟ್ರ ಮಾಡೋರು ಬೇಕೋ ಎಂದು ಜನರಿಗೆ ಪ್ರಶ್ನೆ ಮಾಡಿದರು. ಈ ಕಾರ್ಯಕ್ರಮದಿಂದ ಮನೆಗೆ ಹೋದ ಕೂಡಲೇ ಎಲ್ಲರೂ ಒಂದು ಸಂಕಲ್ಪ ಮಾಡಿ, ಈ ಬಾರಿಯ ಚುನಾವಣೆಯಲ್ಲಿ ಎಲ್ಲರೂ ಬಿಜೆಪಿಗೆ ಮತ ಹಾಕೋಣ, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರೋಣ ಎಂದು ಸಂಕಲ್ಪ ಮಾಡಿ ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದರು.

ಕೋಮುವಾದಿ ಬಿಜೆಪಿ ದೂರವಿಡಲು 8 ಪಕ್ಷದೊಂದಿಗೆ ಮೈತ್ರಿಕೂಟ: ಬಿ.ಟಿ. ಲಲಿತಾ ನಾಯಕ್‌

ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಕೃಷಿ ಸಚಿವ ಬಿ.ಸಿ ಪಾಟೀಲ್, ಮದುವೆ ಆಗಲು ಹೆಣ್ಣು ಸಿಗದ ಸ್ಥಿತಿ‌ ನಿರ್ಮಾಣ ಆಗಿದೆ. ವರದಕ್ಷಿಣೆ ಕೇಳಿದವರ ಜತೆ ಮದುವೆ ಆಗದಿರಲು ನಿರ್ಧರಿಸಿ. ಆಗ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತಾರೆ. ನಾನು ಸಹ ಮದುವೆ ವೇಳೆ ವರದಕ್ಷಿಣೆ ತೆಗೆದುಕೊಂಡಿಲ್ಲ ಎಂದು ನಗೆ ಚಟಾಕಿ ಹಾರಿಸಿದರು‌. ನಾನು ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿ ಹೇಳುತ್ತಿದ್ದೇನೆ. ಮತ್ತೆ ಬಿಜೆಪಿಗೆ ಆಶೀರ್ವದಿಸಿ ಅಧಿಕಾರ ನೀಡಿ ಎಂದು ಬಿ.ಸಿ.ಪಾಟೀಲ್ ಮನವಿ ಮಾಡಿದರು.

ಹಾಸನದಲ್ಲಿ ಭವಾನಿಗೆ ಟಕೆಟ್‌ ಸಿಗೋದು ಡೌಟು: ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಎಂದ ಕುಮಾರಸ್ವಾಮಿ

ಇನ್ನೂ ಸಮಾವೇಶದಲ್ಲಿ, ನಟಿ ತಾರಾ, ಬಿಜೆಪಿ ಮಹಿಳಾ ಮೋರ್ಚಾ ಅದ್ಯಕ್ಷೆ ಗೀತಾ ಉಪಸ್ಥಿತಿ ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಹಿರಿಯೂರು ಶಾಸಕಿ ಪೂರ್ಣಿಮಾ, MLC ಕೆ.ಎಸ್.ನವೀನ್ ಉಪಸ್ಥಿತಿ ವಹಿಸಿದ್ದರು. ಮೊಳಕಾಲ್ಮೂರು ಶಾಸಕ, ಸಾರಿಗೆ ಸಚಿವ ಬಿ.ಶ್ರೀರಾಮುಲು, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಗೈರಾಗಿದ್ದರು.

Latest Videos
Follow Us:
Download App:
  • android
  • ios