ಪ್ರತಿ ಕ್ಷೇತ್ರದಲ್ಲೂ ರಾಜ್ಯವೇ ಮುಂಚೂಣಿಯಲ್ಲಿದೆ: ಡಾ.ಅಶ್ವತ್ಥ ನಾರಾಯಣ

ಆವಿಷ್ಕಾರ, ವಿಜ್ಞಾನ-ತಂತ್ರಜ್ಞಾನ, ಸ್ಟಾರ್ಟಪ್‌ ಹೀಗೆ ಪ್ರತಿ ಕ್ಷೇತ್ರದಲ್ಲೂ ದೇಶದಲ್ಲೇ ರಾಜ್ಯವು ಮುಂಚೂಣಿಯಲ್ಲಿದ್ದು, ಕನಿಷ್ಠ ನಿರುದ್ಯೋಗ ಇರುವ ರಾಜ್ಯ ಕರ್ನಾಟಕ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದರು.

BJP Yuva Morcha convention in Davangere district rav

ದಾವಣಗೆರೆ (ಫೆ.26) : ಆವಿಷ್ಕಾರ, ವಿಜ್ಞಾನ-ತಂತ್ರಜ್ಞಾನ, ಸ್ಟಾರ್ಟಪ್‌ ಹೀಗೆ ಪ್ರತಿ ಕ್ಷೇತ್ರದಲ್ಲೂ ದೇಶದಲ್ಲೇ ರಾಜ್ಯವು ಮುಂಚೂಣಿಯಲ್ಲಿದ್ದು, ಕನಿಷ್ಠ ನಿರುದ್ಯೋಗ ಇರುವ ರಾಜ್ಯ ಕರ್ನಾಟಕ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ(Dr CN Ashwath Narayana) ಹೇಳಿದರು.

ನಗರದ ಮಾಗನೂರು ಬಸಪ್ಪ ಮೈದಾನದಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾ(BJP Yuva morcha) ಹಮ್ಮಿಕೊಂಡಿದ್ದ ಜಿಲ್ಲಾ ಯುವ ಸಮಾವೇಶದಲ್ಲಿ ಮಾತನಾಡಿ, ಕನಿಷ್ಠ ನಿರುದ್ಯೋಗ ಇರುವ ಕರ್ನಾಟಕವು(Karnataka) ದೇಶಕ್ಕೆ ಮಾದರಿಯಾಗುವ ಕೆಲಸ ಮಾಡುತ್ತಿದೆ ಎಂದರು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡಲು 180 ಐಟಿಐ ಕಾಲೇಜುಗಳ ಉನ್ನತೀಕರಿಸಲಾಗಿದೆ. 250 ಪಾಲಿಟೆಕ್ನಿಕ್‌ಗಳಿಗೆ ಕಾಯಕಲ್ಪ ನೀಡಲಾಗಿದೆ. ಯುವ ಸಬಲೀಕರಣವೇ ಪಕ್ಷದ ಅತೀ ಮುಖ್ಯ ಗುರಿಯಾಗಿದ್ದು, ವಿಪಕ್ಷ ಅಧಿಕಾರದಲ್ಲಿದ್ದಾಗ ಯುವ ಜನರ ಪರ ಯಾವುದೇ ಕೆಲಸ ಮಾಡಲಿಲ್ಲ. ಸಬಲೀಕರಣ ಮಾಡಲಿಲ್ಲ, ಕೌಶಲ್ಯ ತರಬೇತಿಯನ್ನೂ ನೀಡಲಿಲ್ಲ. ಆದರೆ, ರಾಷ್ಟ್ರೀಯ ಶಿಕ್ಷಣ ನೀತಿ(National Education Policy) ತಂದ ಬಿಜೆಪಿ ಸರ್ಕಾರವು ಗುಣಮಟ್ಟದ ಶಿಕ್ಷಣವನ್ನು ಹೇಗೆ ನೀಡಬಹುದೆಂಬುದು ತೋರಿಸಿಕೊಟ್ಟಿದೆ ಎಂದು ತಿಳಿಸಿದರು.

ದಾವಣಗೆರೆ: ಇಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಸಮಾವೇಶ

ಶಕ್ತಿ ತುಂಬುವ ಕೆಲಸವಾಗಲಿ:

ಸಂಸದ ಡಾ.ಜಿ.ಎಂ.ಸಿದ್ದೇಶ್ವರ(MP GM Siddeshwar) ಮಾತಾಡಿ, ಬಿಜೆಪಿಗೆ ಶಕ್ತಿ ಬಂದಿದ್ದು, ದೇಶ, ರಾಜ್ಯದಲ್ಲಿ ಅಧಿಕಾರ ಬಂದಿದೆಯೆಂದರೆ ಅದಕ್ಕೆ ಯುವ ಮೋರ್ಚಾ ಕಾರಣ. ಇದನ್ನು ಮನಗಂಡು ಪ್ರಧಾನಿ ಮೋದಿ(PM Narendra Modi) ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಈಗ ಮತ್ತೆ ಮೋದಿ ಕೈಬಲಪಡಿಸುವ ಕೆಲಸ ಮಾಡೋಣ. ಚೀನಾ, ಇಂಗ್ಲೆಂಡ್‌ ಸೇರಿ ಜಗತ್ತಿನ ಅನೇಕ ರಾಷ್ಟ್ರಗಳು ಇಂದು ಕೊರೋನಾ ಮಹಾಮಾರಿಗೆ ತತ್ತರಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ದೇಶ ವಾಸಿಗಳ ಜೀವ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.

ಜಗಳೂರು ಶಾಸಕ ಎಸ್‌.ವಿ.ರಾಮಚಂದ್ರ ಮಾತನಾಡಿ, ಜಗಳೂರು ಕ್ಷೇತ್ರದ 4 ಸಾವಿರ ಎಕರೆ ಭೂಮಿ ಇಂದು ನೀರಾವರಿಯಾಗಿದ್ದರೆ ಅದಕ್ಕೆ ಬಿ.ಎಸ್‌.ಯಡಿಯೂರಪ್ಪ(BS Yadiyurappa), ಬೊಮ್ಮಾಯಿ(Basavaraj Bommai) ಅವರೇ ಕಾರಣ. ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಈ ಜಿಲ್ಲೆ ಬಿಜೆಪಿಯ ಭದ್ರಕೋಟೆಯೆಂಬುದು ಸಾಬೀತುಪಡಿಸೋಣ. ಬಿಎಸ್‌ವೈ ಹೇಳಿದಂತೆ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ವಿರೋಧ ಪಕ್ಷ ಶಾಶ್ವತಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ವಿಪ ಸದಸ್ಯ ಕೆ.ಎಸ್‌.ನವೀನ ಮಾತನಾಡಿ, ನಮ್ಮ ವೈಯಕ್ತಿಕ ಕೆಲಸಗಳನ್ನೆಲ್ಲಾ ಬದಿಗೊತ್ತಿ, ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಕಟಿಬದ್ಧರಾಗೋಣ. ಕದ್ದು ಮುಚ್ಚಿ ಬಾಂಬ್‌ ಹಾಕುವವರು ಕಾಂಗ್ರೆಸ್ಸಿಗೆ ಮತ ಹಾಕುವವರು. ಮೋದಿ, ಯಡಿಯೂರಪ್ಪ, ಬೊಮ್ಮಾಯಿಗೆ ಓಟು ಹಾಕುವವರು ದೇಶಭಕ್ತರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು 50 ಸಾವಿರ ಮತಗಳಿಗಿಂತಲೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸೋಣ ಎಂದು ಕರೆ ನೀಡಿದರು.

ಶಾಸಕರಾದ ಎಸ್‌.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್‌. ಶಿವಯೋಗಿಸ್ವಾಮಿ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಂದೀಪಕುಮಾರ, ಪಕ್ಷದ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಜಗದೀಶ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಿವಪ್ರಕಾಶ, ಸುಧಾ ಜಯರುದ್ರೇಶ, ಬಿ.ಪಿ.ಹರೀಶ, ಮಾಡಾಳ್‌ ಮಲ್ಲಿಕಾರ್ಜುನ, ಎಂ.ಬಸವರಾಜ ನಾಯ್ಕ, ಮೇಯರ್‌ ಜಯಮ್ಮ ಗೋಪಿನಾಯ್ಕ, ಉಪ ಮೇಯರ್‌ ಗಾಯತ್ರಿ ಬಾಯಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಪಿ.ಸಿ.ಶ್ರೀನಿವಾಸ ಭಟ್‌, ನಾಗರಾಜ ಸೊಕ್ಕೆ ಇತರರಿದ್ದರು.

Davanagere: ಹಣ ಕೊಟ್ಟವರಿಗೆ ಮನೆ ಹಂಚಿಕೆ ಮಾಡಿದ ಪಾಲಿಕೆ ಅಧಿಕಾರಿಗಳು: ಕಾರ್ಪೋರೇಟರ್‌ಗಳು ಲೆಕ್ಕಕ್ಕೇ ಇಲ್ಲ

ದಾವಣಗೆರೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸುವುದೇ ನಮ್ಮ, ನಿಮ್ಮೆಲ್ಲರ ಗುರಿಯಾಗಲಿ. ಮೋದಿ ಏನು ಮಾಡಿದ್ದಾರೆಂದು ಪ್ರಶ್ನಿಸುವವರಿಗೆ ನಿಮ್ಮ, ನಮ್ಮ ಜೀವ ಉಳಿಸಿದ್ದು ಮೋದಿ ಎಂಬುದಾಗಿ ಉತ್ತರಿಸಬೇಕು. ಪಾಕಿಸ್ತಾನ, ಅಪಘಾನಿಸ್ತಾನ, ಶ್ರೀಲಂಕಾ ಸೇರಿ ಅನೇಕ ರಾಷ್ಟ್ರಗಳು ನಮ್ಮ ಕಣ್ಣ ಮುಂದೆಯೇ ದಿವಾಳಿಯಾಗಿವೆ. ಆದರೆ, ಭಾರತ ಮಾತ್ರ ಅನೇಕ ಯೋಜನೆ, ಕಾರ್ಯಕ್ರಮ ಜಾರಿಗೊಳಿಸುತ್ತಾ, ವಿಶ್ವದ 5ನೇ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದ್ದರೆ ಅದಕ್ಕೆ ಮೋದಿ ಕಾರಣ.

ಡಾ.ಜಿ.ಎಂ.ಸಿದ್ದೇಶ್ವರ, ಸಂಸದ.

ಪ್ರಧಾನಿ ನರೇಂದ್ರ ಮೋದಿ ಅಮೃತ ಕಾಲ ಎಂಬುದಾಗಿ ಘೋಷಿಸಿದ್ದು, ಇನ್ನು 25 ವರ್ಷದಲ್ಲಿ ನಮ್ಮ ಯುವ ಜನರು ಉದ್ಯೋಗದಾತರಾಗಬೇಕು ಅಥವಾ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಉದ್ಯೋಗಸ್ಥನಾಗಿರಬೇಕು. ರಾಜ್ಯ ಕಟ್ಟಲು, ಜನಪರ ಕೆಲಸ ಮಾಡಲು ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಸಂಕಲ್ಪ ಮಾಡೋಣ.

ಡಾ.ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ.

Latest Videos
Follow Us:
Download App:
  • android
  • ios