Asianet Suvarna News Asianet Suvarna News

ಬೊಗಳೋ ನಾಯಿ ಕಚ್ಚೋಲ್ಲ, ಕಚ್ಚೋ ನಾಯಿ ಬೊಗಳಲ್ಲ, ಮಲ್ಲಿಕಾರ್ಜುನ್‌ಗೆ ಠಕ್ಕರ್ ಕೊಟ್ಟ ಜಿಎಂ ಸಿದ್ದೇಶ್ವರ್

ನನ್ನ ರಾಜಕೀಯ ಜೀವನದಲ್ಲಿ ಕಾನೂನು ಬಾಹಿರವಾಗಿ ಯಾವುದೇ ಹಣ ಗಳಿಸಿಲ್ಲ ನಮ್ಮ ಇಡೀ ಕುಟುಂಬ ಅದೇ ರೀತಿ ರಾಜಕಾರಣ ಮಾಡಿದೆ. ನನ್ನ ಮೇಲೆ ಭ್ರಷ್ಟಾಚಾರ ಸಾಬೀತಾದ್ರೆ ನನ್ನ ಆಸ್ತಿಯನ್ನು ಸಂಪೂರ್ಣ  ಮಲ್ಲಿಕಾರ್ಜುನ್ ಹೆಸರಿಗೆ ಬರೆಯುತ್ತೇನೆ ಎಂದಿದ್ದಾರೆ

BJP Leader GM Siddeshwara Slams minister SS Mallikarjun over  mining  kannada news  gow
Author
First Published Jul 14, 2023, 6:09 PM IST

ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್ 

ದಾವಣಗೆರೆ (ಜುಲೈ14): ಗಣಿ ಮತ್ತು ಭೂ ವಿಜ್ನಾನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಗೆ   ಸಂಸದ ಜಿ ಎಂ ಸಿದ್ದೇಶ್ವರ್ ಟಾಂಗ್ ನೀಡಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು ಕಳೆದ ವಾರ ಗಣಿ ಸಚಿವ ನೀಡಿದ ಹೇಳಿಕೆಗೆ ಭರ್ಜರಿ ಠಕ್ಕರ್ ಕೊಟ್ಟಿದ್ದಾರೆ. ಆನೆ ಹೋಗುತ್ತಿದ್ದರೆ ನಾಯಿ ಬೊಗಳುತ್ತಾ ಇರುತ್ತೆ. ಬೊಗಳೋ ನಾಯಿ ಕಚ್ಚೋಲ್ಲ. ಕಚ್ಚೋ ನಾಯಿ ಬೊಗಳಲ್ಲ. ಆನೆ ತೂಕ ಆನೆಗೆ ನಾಯಿ ತೂಕ ನಾಯಿಗೆ ಎಂದ ಜಿ ಎಂ ಸಿದ್ದೇಶ್ವರ್ , ನನ್ನ ರಾಜಕೀಯ ಜೀವನದಲ್ಲಿ  ಕಾನೂನು ಬಾಹಿರವಾಗಿ ಯಾವುದೇ ಹಣ ಗಳಿಸಿಲ್ಲ  ನಮ್ಮ ಇಡೀ ಕುಟುಂಬ ಅದೇ ರೀತಿ ರಾಜಕಾರಣ ಮಾಡಿದೆ. ನನ್ನ ಮೇಲೆ ಭ್ರಷ್ಟಾಚಾರ ಸಾಬೀತಾದ್ರೆ ನನ್ನ ಆಸ್ತಿಯನ್ನು ಸಂಪೂರ್ಣ ಅವರ ಹೆಸರಿಗೆ ಬರೆಯುತ್ತೇನೆ ಎಂದಿದ್ದಾರೆ.

ಸಿದ್ದರಾಮಯ್ಯ ಗೆಳೆತನದ ಬಗ್ಗೆ ರೇವಣ್ಣ ಮಾತು, ನೀನು ಈ ಬಾರಿ ಲಿಂಬೆಹಣ್ಣು ಮಂತ್ರಿಸಿಲ್ಲ-

ನಾನು ಮ್ಯಾಂಗನೀಸ್ ಗಣಿಗಾರಿಕೆ ಯಲ್ಲಿ ನಯಾಪೈಸೆ ದುಡ್ಡು ತೆಗೆದುಕೊಂಡಿಲ್ಲ.  ಭೀಮಸಮುದ್ರ ದ ಬಳಿ ಅದಿರು ಸಾಗಣೆ ಲಾರಿ ಓಡಾಟಕ್ಕೆ ಈ ಹಿಂದಿನಿಂದಲು ನನ್ನ ವಿರೋಧ ಇದೆ. ಅದಕ್ಕೆ ನಾನೇ ಚಿತ್ರದುರ್ಗ ಡಿಸಿಗೆ ಹಲವಾರು ಪತ್ರಗಳನ್ನು ಬರೆದೆ.ನಾನು ಯಡಿಯೂರಪ್ಪ ಗೆ ಮನವಿ ಮಾಡಿದ್ದೇ, ಪ್ರಹ್ಲಾದ್ ಜೋಷಿಗು ನಾನು ಪತ್ರ ಬರೆದಿದ್ದೆ ಈಗಲೂ ಅದಕ್ಕೆ ಬದ್ಧ ಸಾರ್ವಜನಿಕರಿಗೆ ತೊಂದರೆ ಆದ್ರೆ ಅದಿರು ಸಾಗಣೆಗೆ ಲಾರಿ ಈಗಲೇ ನಿಲ್ಲಿಸಲಿ ಎಂದು ಸವಾಲ್ ಹಾಕಿದ್ದಾರೆ.

ಬೇಲೇಕೇರಿಗೆ ಅದಿರು ಸಾಗಣೆ ಆರೋಪದ‌ ಬಗ್ಗೆ ಸ್ಪಷ್ಟನೆ ನೀಡಿದ ಜಿ ಎಂ ಸಿದ್ದೇಶ್ವರ್ ಬೇಲೆಕೇರಿ ಅದಿರು ಸಾಗಣೆ ಪ್ರಕರಣದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಬೇಕು ಅಂತಲೇ ನಮ್ಮ ಮೇಲೆ ತನಿಖೆ ಮಾಡುವಂತೆ ಮಾಡಿತ್ತು. ಬೇಲೆಕೇರಿ ಅದಿರು ಸಾಗಣೆ ಪ್ರಕರಣದಲ್ಲಿ ಹೈಕೋರ್ಟ್ ನಮಗೆ ಕೇಸ್ ಖುಲಾಸೆ ಮಾಡಿದೆ. ಗಣಿ ಮತ್ತು ಭೂ ವಿಜ್ನಾನ ಸಚಿವರಿಗೆ ಸ್ವಲ್ಪ ಹಿತ್ತಾಳೆ ಕಿವಿ ಅದಕ್ಕೆ ಯಾರು ಏನ್ ಹೇಳಿದ್ರು ಕೇಳುತ್ತಾರೆ. ಗಣಿ ಸಚಿವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ನಾನು ಯಾವುದೆ ಭ್ರಷ್ಟಾಚಾರ ಹಣದಿಂದ ಕಾಲೇಜ್ ಮೇಲೆ ಕಾಲೇಜ್ ಕಟ್ಟಿಲ್ಲ. 

ಚಂದ್ರಯಾನ-3 ಯಶಸ್ವಿ ಉಡಾವಣೆ, ಪ್ರಧಾನಿ ಮೋದಿ ಅಭಿನಂದನೆ

ಟ್ರಾನ್ಪರ್ ವರ್ಗಾವಣೆಗೆ ಇದುವರೆಗು ಒಬ್ಬ ಅಧಿಕಾರಿಯಿಂದ ಒಂದು ರೂಪಾಯಿ ಪಡೆದಿಲ್ಲ.ಅದನ್ನು ಸಾಬೀತುಪಡಿಸಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ.ನಾನು ಸ್ವಂತ ದುಡಿಮೆಯಿಂದ ಕಾಲೇಜ್ ಗಳನ್ನು ಕಟ್ಟಿದ್ದೇನೆ ಬೇಕಾದ್ರೆ ಇನ್ನು ಕಾಲೇಜ್ ಗಳನ್ನು ಕಟ್ಟುತ್ತೇನೆ.

ನಾನು  ನಮ್ಮ ಕುಟುಂಬ 1996 ರಿಂದ ಶ್ರೀಮಂತ ಕುಟುಂಬ:
ಶಾಮನೂರು ಶಿವಶಂಕರಪ್ಪ ನವರಿಗೆ 1996 ರಲ್ಲೇ ಸಾಲ ಕೊಟ್ಟ ಮನೆತನ ನಮ್ಮದು.1997 ರಲ್ಲಿ ಆರು ಕೋಟಿ ಆಸ್ತಿ ಡಿಕ್ಲೇರ ಮಾಡಿಕೊಂಡಿದ್ದೆ ಆಗಿನ ಕಾಲದಲ್ಲಿ 1.80 ಕೋಟಿ ಟ್ಯಾಕ್ಸ್ ಕಟ್ಟಿದ್ದೆ. ನಾನು ಶಾಮನೂರಿಗೆ ಕೊಟ್ಟ ಸಾಲದ ಹಣವನ್ನು ಬಡ್ಡಿ ಸಮೇತ ವಸೂಲು ಮಾಡಿದ್ದೇನೆ.ಬೇಕಾದ್ರೆ ಅವರಪ್ಪಪಡುವಂತಾಗಿದೆ. ನಾನು ಭ್ರಷ್ಟಾಚಾರ ಮಾಡಿದ್ದರೆ ಯಾವುದೆ ತನಿಖೆಯಾಗಲಿ ,ಅಕ್ರಮ ಹಣ ಸಂಪಾದಿಸಿದ್ದರೆ ಆದಾಯ ತೆರಿಗೆ , ಇಡಿ ಸೇಲ್ಸ್ ಟ್ಯಾಕ್ಸ್ ಪರಿಶೀಲನೆ ಮಾಡುತ್ತೆ 

ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಪಕ್ಷದ ಎಡವಟ್ಟುಗಳಿಂದ ಎರಡು ಕ್ಷೇತ್ರಗಳಲ್ಲಿ ಸೋತೆವು ಎರಡು ತಿಂಗಳು ಮುಂಚೆ ಟಿಕೇಟ್ ಘೋಷಣೆ ಮಾಡಿದ್ದರೆ ಎರಡು ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ ನಮ್ಮ ತಪ್ಪು ನಿರ್ಧಾರಗಳಿಂದ ಸೋತು ಪಶ್ಚಾತ್ತಾಪ ಪಡುವಂತಾಗಿದೆ

ಉತ್ತರ ಹಾಗು ದಕ್ಷಿಣ ಕ್ಷೇತ್ರಗಳಲ್ಲಿ ಆಶ್ರಯ ಮನೆಗೆ ಸಂಬಂಧಿಸಿದ ನಿವೇಶನ ಹಂಚಿಕೆಯಲ್ಲಿ ನನ್ನ ಯಾವ ಪತ್ರವು ಇಲ್ಲ. ನನಗು ಅದಕ್ಕು ಸಂಬಂಧವೇ ಇಲ್ಲ ಎಂದ ಜಿ ಎಂ ಸಿದ್ದೇಶ್ವರ್ ದೂಡಾದಲ್ಲಿ ಕಳೆದ ಎರಡು ತಿಂಗಳಿನಿಂದ ಎನ್ ಓ ಸಿ ನೀಡಿಲ್ಲ.‌ಮಹಾನಗರ ಪಾಲಿಕೆಯಲ್ಲಿ ಡೋರ್ ನೀಡಿಲ್ಲ.ಇದು ಅಧಿಕಾರ ಮದದಿಂದ ಎಂದರು.ಯಾರದ್ದು ನ್ಯಾಯ ಇದೆ ಅವರಿಗೆ ಕೊಡಲಿ ಎಂದರು.

Follow Us:
Download App:
  • android
  • ios