ಸಿದ್ದರಾಮಯ್ಯ ಗೆಳೆತನದ ಬಗ್ಗೆ ರೇವಣ್ಣ ಮಾತು, ನೀನು ಈ ಬಾರಿ ಲಿಂಬೆಹಣ್ಣು ಮಂತ್ರಿಸಿಲ್ಲ-ಕಿಚಾಯಿಸಿದ ಅಶೋಕ್
ವಿಧಾನಸಭೆಯಲ್ಲಿ ಹೆಚ್ ಡಿ ರೇವಣ್ಣ ಮತ್ತು ಆರ್ ಅಶೋಕ್ ನಡುವೆ ಸ್ವಾರಸ್ಯಕರ ಚರ್ಚೆ ನಡೆದಿದೆ.
ಬೆಂಗಳೂರು (ಜು.14): ವಿಧಾನಸಭೆಯಲ್ಲಿ ಹೆಚ್ ಡಿ ರೇವಣ್ಣ ಮತ್ತು ಆರ್ ಅಶೋಕ್ ನಡುವೆ ಸ್ವಾರಸ್ಯಕರ ಚರ್ಚೆ ನಡೆದಿದೆ. ನನಗೆ ಬಸವರಾಜ್ ಅಣ್ಣ ಕೂಡ ಒಳ್ಳೆಯ ಸ್ನೇಹಿತ ಯತ್ನಾಳ್ , ಬೊಮ್ಮಾಯಿ ಯಾರಾದರೂ ವಿಪಕ್ಷ ನಾಯಕ ಆಗಲಿ ನನಗೇನು ಇಲ್ಲ. ನಾನು ವಿರೋಧ ಕಟ್ಟಿಕೊಂಡು ಎನ್ ಮಾಡಲಿ. ಅಶೋಕಣ್ಣ ಕೂಡ ಒಳ್ಳೆಯ ಸ್ನೇಹಿತ ಎಂದು ರೇವಣ್ಣ ಹೇಳಿದರು.
ಈ ವೇಳೆ ಎದ್ದು ನಿಂತ ಅಶೋಕ್ ಅಲ್ಲಾಪ್ಪ, ನಿನ್ನೆ ಸಿದ್ದರಾಮಯ್ಯ ಸ್ನೇಹಿತರು ಎಂದೆ. ಇವತ್ತು ನನ್ನ ಹಿಡ್ಕೊಂಡ್ಯಲ್ಲೊ ಎಂದರು. ನೀನು ಈ ಬಾರಿ ಲಿಂಬೆಹಣ್ಣು ಮಂತ್ರಿಸಿಲ್ಲ. ನಿಂಬೆಹಣ್ಣು ಮಂತ್ರಿಸಿದ್ರೆ ಹೀಗೆ ಆಗ್ತಾ ಇರಲಿಲ್ಲ. 40 ಸೀಟ್ ಬಂದಿದ್ರೆ, ಗಿರಗಿಟ್ಟಲೆ ತರ ಇಲ್ಲದವರ ಆಡಿಸಬಹುದಿತ್ತು. ಇಂಧನ, Pwd ಖಾತೆ ನಿನಗೆ ಫಿಕ್ಸ್ ಆಗಿತ್ತು. ಜೊತೆಗೆ ನೀನು ಈ ಬಾರಿ ಜ್ಯೋತಿಷನ ಬದಲಾವಣೆ ಮಾಡಿದ್ಯ ಹೀಗಾಗಿ ನಿನ್ನ ಸೀಟು ಬದಲಾವಣೆ ಆಯ್ತು ಎಂದು ಅಶೋಕ್ ಹಾಸ್ಯ ಮಾಡಿದರು.
ಇದಕ್ಕೆ ರೇವಣ್ಣ ನಾವು ನಾವು ಹೊಡೆದಾಟ ಮಾಡಿ ಯಾರಿಗೊ ಸಹಾಯ ಆಯ್ತು ಎಂದು ತಮಾಷೆ ಮಾಡಿದರು. ಕಾಲಚಕ್ರ ಬದಲಾಗಲೇಬೇಕು. ತೊಂದರೆ ಇಲ್ಲ ನೋಡೋಣ ಎಂದರು.
ಬಸ್ ಕೊರತೆ ನೀಗಿಸಲು 4 ಸಾವಿರ ಬಸ್ ಖರೀದಿ: ಸಿಎಂ ಸಿದ್ದರಾಮಯ್ಯ
ಸದನದಲ್ಲಿ ಒಣ ಕೊಬ್ಬರಿ ಪ್ರದರ್ಶಿಸಿದ ರೇವಣ್ಣಗೆ ಕಿಚಾಯಿಸಿದ ಸಿಎಂ
ಇನ್ನು ಜು.13ರಂದು ಸದನದಲ್ಲಿ ರಾಜ್ಯಪಾಲರ ಭಾಷಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರದ ವೇಳೆ ಹೆಚ್ ಡಿ ರೇವಣ್ಣ ಒಣ ಕೊಬ್ಬರಿ ಹಿಡಿದು ಪ್ರದರ್ಶಿಸಿದ್ದರು. ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಿ ಎಂದು ಒತ್ತಾಯಿಸಿದ್ದರು. ಈ ವೇಳೆ ಏನ್ ಮಾಡೋಣ ಈ ಕೊಬ್ಬರಿಗೆ ಒಣ ಕೊಬ್ಬರಿನೇ ಹಿಡ್ಕೊಂಡು ಬಂದವ್ನೆ, ಏ ನಿಂಬೆಹಣ್ಣು ಹಿಡ್ಕೊಬೇಕಾದ ಕೈಯಲ್ಲಿ ಕೊಬ್ಬರಿ ಹಿಡ್ಕೊಂಡಿದೆಲ್ಲಪ್ಪ ಎಂದು ಸಿಎಂ ಸಿದ್ದರಾಮಯ್ಯ ಕಿಚಾಯಿಸಿದ್ದರು. ಜೊತೆಗೆ ರೇವಣ್ಣ ಬಗ್ಗೆ ನನಗೆ ವಿಶೇಷವಾದ ಪ್ರೀತಿ ಇದೆ. 34 ವರ್ಷಗಳಿಂದಲೂ ನಮಗೆ ಒಳ್ಳೆಯ ಸ್ನೇಹಿತ ಎಂದು ಇದೇ ವೇಳೆ ಸಿಎಂ ಹೇಳಿದರು.
ನಿನ್ನೆ ಇದೇ ವೇಳೆ ಸದನದಲ್ಲಿ ನೀನು ಜ್ಯೋತಿಷಿ ಕೇಳಿ ಬಂದರೆ ಹೇಗೆ? ನೀನು ಬಂದು ಭೇಟಿ ಮಾತಾಡಬೇಕಿತ್ತಲ್ಲ ಎಂದು ರೇವಣ್ಣ ಮೇಲೆ ಸಚಿವ ಶಿವಾನಂದ ಪಾಟೀಲ್ ಗರಂ ಆದರು. ಕೊನೆಗೆ ಆಯ್ತಲ್ಲ ರೇವಣ್ಣಂದು ಎಂದು ಸಿಎಂ ಸಿದ್ದರಾಮಯ್ಯ ಎದ್ದು ನಿಂತರು. ಈ ವೇಳೆ ಆರ್ ಅಶೋಕ್ ಎದ್ದು ನಿಂತು ರೇವಣ್ಣ ಇರೋದು ನಿಮ್ಮನ್ನು ಹೊಗಳೋಕೆ ಎಂದರು.
ಸಿದ್ದು ವರ್ಗಾವಣೆ ದಂಧೆ ಮಾಡಿದ್ದಾರೆ ಎಂಬುದನ್ನು ಒಪ್ಪಲ್ಲ: ಎಚ್.ಡಿ.ರೇವಣ್ಣ
ಅದಕ್ಕೆ ರೇವಣ್ಣ , ಇದುವರೆಗೂ ನಾನು ಸಿದ್ದರಾಮಯ್ಯ ಬಗ್ಗೆ ಯಾವುದೇ ಭ್ರಷ್ಟಾಚಾರ ಮಾತಾಡಿಲ್ಲ. ಅವರ ವಿರುದ್ಧವೂ ನಾನು ಏನು ಮಾತಾಡಿಲ್ಲ. ನಂದು ಸಿದ್ದರಾಮಣ್ಣನ ಸಂಬಂಧ ನೋಡಿ ನಿನಗೆ ಯಾಕಪ್ಪಾ ಹೊಟ್ಟೆ ಉರಿ ಎಂದು ಪ್ರತಿಕ್ರಿಯೆ ನೀಡಿದರು. ಹೀಗೆ ನಿನ್ನೆ ಕೂಡ ರೇವಣ್ಣ-ಅಶೋಕ್ , ಸಿದ್ದರಾಮಯ್ಯ ಅವರ ನಡುವೆ ಸ್ವಾರಸ್ಯಕರ ಘಟನೆ ನಡೆದಿತ್ತು.