'ಅಡ್ಡ ಮತದಾನಕ್ಕೆ ಪ್ರೇರೇಪಿಸುವ ಸಿದ್ದರಾಮಯ್ಯ 2 ತಲೆ ಹಾವಿದ್ದಂತೆ'

*  ಚಡ್ಡಿ ಸ್ವಾಭಿಮಾನದ ಸಂಕೇತವಾಗಿದೆ
*  ವಿಧಾನಪರಿಷತ್‌ ಸದಸ್ಯ, ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕೆ
*  ರವಿಶಂಕರ್‌ ಗೆಲ್ಲಿಸಲು ಮನವಿ

BJP Leader Chalavadi Narayanaswamy Slams to Siddaramaiah grg

ಚಾಮರಾಜನಗರ(ಜೂ.11): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಸಭಾ ಸದಸ್ಯರ ಚುನಾವಣೆಯಲ್ಲಿ ಆತ್ಮ ವಿಶ್ವಾದ ಮತ ನೀಡಬೇಕೆಂದು ಹೇಳುವ ಮೂಲಕ ಅಡ್ಡ ಮತದಾನಕ್ಕೆ ಪ್ರೇರಣೆ ಮಾಡುತ್ತಿದ್ದಾರೆ. ಇವರು ಎರಡು ತಲೆ ಹಾವು ಇದ್ದಂತೆ ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆತ್ಮ ಸಾಕ್ಷಿ ಮತ ಹಾಕುವುದು ಎಂದರೆ ಅಡ್ಡ ಮಾತದಾನ ಮಾಡುವುದೇ ಎಂದು ಪ್ರಶ್ನಿಸಿದ ಅವರು, ನಿಮ್ಮ ಪಕ್ಷದ ಶಾಸಕರು ಅಡ್ಡಮತದಾನ ಮಾಡಿದಾಗ ಅವರ ವಿರುದ್ಧ ಕ್ರಮಕೈಗೊಂಡಿದ್ದೀರಿ. ಈಗ ಆತ್ಮ ವಿಶ್ವಾಸ ಮತದಾನ ನೀಡುವಂತೆ ಹೇಳುತ್ತಿರುವುದು ಸರಿಯಲ್ಲ. ಅಧಿಕಾರ ಕಳೆದುಕೊಂಡು ಮೇಲೆ, ಸೀಮಿತ ಕಳೆದುಕೊಂಡಿದ್ದೀರಾ ಎಂದು ಛೇಡಿಸಿದರು.

Rajya Sabha Election: ಕಾಂಗ್ರೆಸ್ಸಿಗರ ಮೇಲೆ ಸಿದ್ದು, ಡಿಕೆಶಿ ಕಣ್ಣು

ಆರ್‌ಎಸ್‌ಎಸ್‌ ಚೆಡ್ಡಿ ಸುಟ್ಟುತ್ತೇವೆ ಎಂದು ಹೇಳುವ ಮೂಲಕ ಮಾನವ ಕುಲದ ಗೌರವ ಕಾಪಾಡುವ ಚೆಡ್ಡಿಗೆ ಅಪಮಾನ ಮಾಡಿದ್ದಾರೆ. ಚಡ್ಡಿ ಸ್ವಾಭಿಮಾನದ ಸಂಕೇತವಾಗಿದೆ. ಈಗಾಗಲೇ ಆರ್‌ಎಸ್‌ಎಸ್‌ ಚಡ್ಡಿಯಿಂದ ಈಗ ಪ್ಯಾಂಟ್‌ಗೆ ಮೇಲ್ದರ್ಜೇಗೇರಿ ಬಹಳ ವರ್ಷಗಳಾಗಿದೆ. ಇದು ಪಾಪ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ದಲಿತರು ಎಷ್ಟುಮಂದಿ ಇದ್ದರೆ ಎಂದು ಆರ್‌ಎಸ್‌ಎಸ್‌ ಕಚೇರಿಗೆ ಬಂದಿದ್ದರೆ ಗೊತ್ತಾಗುತ್ತಿತ್ತು. ಸಿದ್ದರಾಮಯ್ಯ ನೋಡುವ ಮನಸ್ಥಿತಿಯೇ ಬೇರೆ ಇದೆ. ನಾನು ಸ್ವಾಭಿಮಾನದ ಸಂಕೇತವಾದ ಚಡ್ಡಿಯನ್ನು ಮಾದ್ಯಮದವರ ಕೋರಿಕೆ ಮೇರೆಗೆ ಮೇಲೆ ಎತ್ತಿ ಪ್ರದರ್ಶನ ಮಾಡಿದ್ದೇನೆ. ಇದನ್ನೇ ದಲಿತ ಮುಖಂಡನ ತಲೆ ಮೇಲೆ ಚಡ್ಡಿ ಹೊರೆಸಿ ಅಪಮಾನ ಮಾಡಿದ್ದಾರೆ ಎಂದು ಬೊಬ್ಬೆ ಹಾಕುತ್ತಿದ್ದಾರೆ ಎಂದರು.

ಮಲ ಹೊರುವ ಪದ್ದತಿಯನ್ನು ಉತ್ತೇಜನ ಮಾಡಿದ ಇಂಥವರಿಗೆ ಇಂತಹ ಆಲೋಚನೆ ಬರುತ್ತೇವೆ. ನಾವು ಸ್ವಾಭಿಮಾನದ ದಲಿತರು, ನಮಗೆ ಪಾಠ ಹೇಳಿಕೊಡಲು ಸಿದ್ದರಾಮಯ್ಯ ಬರದಿದ್ದರೆ ಒಳ್ಳೆಯದು. ಐದು ವರ್ಷಗಳ ಅಧಿಕಾರವಧಿಯಲ್ಲಿ ದಲಿತ ನಾಯಕರನ್ನು ತುಳಿದು ಅವರ ಭವಿಷ್ಯವನ್ನು ಹಾಳು ಮಾಡಿದ್ದ ಸಿದ್ದರಾಮಯ್ಯ, ಖರ್ಗೆಗೆ ಸಿಗಬೇಕಾಗಿದ್ದ ವಿರೋಧ ಪಕ್ಷದ ನಾಯಕ ಪಟ್ಟವನ್ನು ಹೈಕಮಾಂಡ್‌ಗೆ ಬೆದರಿಕೆ ಹಾಕಿ ಪಡೆದುಕೊಂಡರು. ಮಲ್ಲಿಕಾರ್ಜುನ ಖರ್ಗೆ, ವಿ. ಶ್ರೀನಿವಾಸಪ್ರಸಾದ್‌, ಡಾ. ಪರಮೇಶ್ವರ ಸೇರಿದಂತೆ ಅನೇಕ ದಲಿತರನ್ನು ಸಿದ್ದರಾಮಯ್ಯ ವ್ಯವಸ್ಧಿತವಾಗಿ ತುಳಿದು ಮುಖ್ಯಮಂತ್ರಿಯಾಗಿದ್ದಾರೆ. ಈಗ ಮತ್ತೆ ನಾನೇ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷದಲ್ಲಿ ದಲಿತರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದರು.

 

ಕೈ 2ನೇ ಅಭ್ಯರ್ಥಿ ಸೋತರೂ ಸಿದ್ದು ತಂತ್ರಗಾರಿಕೆಗೆ ಜಯ, ಒಂದೇ ಏಟಿಗೆ 3 ಹಕ್ಕಿ ಹೊಡೆದ ಮಾಜಿ ಸಿಎಂ!

ರವಿಶಂಕರ್‌ ಗೆಲ್ಲಿಸಲು ಮನವಿ:

ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ ಅವರನ್ನು ಗೆಲ್ಲಿಸುವಂತೆ ಪದವೀಧರಲ್ಲಿ ನೂತನ ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮನವಿ ಮಾಡಿದರು. ಕಳೆದ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಲ್ಲಿ ಸೋತಿದ್ದರು. ಈ ಬಾರಿ ಅವರಿಗೆ ಕ್ಷೇತ್ರದಲ್ಲಿ ಉತ್ತಮ ವಾತಾವರಣವಿದ್ದು, ಪದವೀಧರರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದು, ಈ ಸಲ ಗೆದ್ದೆಗೆಲ್ಲುತ್ತಾರೆ. ಆದ್ದರಿಂದ ಜೂ.13 ರಂದು ನಡೆಯುವ ಚುನಾವಣೆಯಲ್ಲಿ ಮೈ.ವಿ.ರವಿಶಂಕರ್‌ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಹೆಚ್ಚು ಮತಗಳಿಂದ ಗೆಲ್ಲಿಸಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಂಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ, ಎಸ್‌.ಸಿ ಮೋರ್ಚಾದ ರಾಜ್ಯಕಾರ್ಯದÜರ್ಶಿ ಪರಮಾನಂದ, ಜಿಲ್ಲಾ ಬಿಜೆಪಿ ವಕ್ತಾರ ಅಯ್ಯನಪುರ ಶಿವಕುಮಾರ್‌, ಜಿಲ್ಲಾ ಕಾರ್ಯದರ್ಶಿ ಪದ್ಮ, ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್‌, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್‌ ಕುಮಾರ್‌ ಹಾಜರಿದ್ದರು.

Latest Videos
Follow Us:
Download App:
  • android
  • ios