ಸಂತೋಷ್ ಹೇಳಿಕೆ: 40 ಏಕೆ, 136 ಶಾಸಕರನ್ನೂ ಸಂಪರ್ಕದಲ್ಲಿ ಇಟ್ಟುಕೊಳ್ಳಲಿ, ಡಿಕೆಶಿ
ಕೇವಲ 40 ಶಾಸಕರಲ್ಲ ನಮ್ಮ 136 ಶಾಸಕರನ್ನೂ ಸಂಪರ್ಕದಲ್ಲಿ ಇಟ್ಟುಕೊಳ್ಳಲಿ, ಬಹಳ ಸಂತೋಷ ಎಂದು ಹೇಳಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಚಿಕ್ಕಬಳ್ಳಾಪುರ(ಸೆ.02): ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ರವರು 40 ಜನ ಕಾಂಗ್ರೆಸ್ ಶಾಸಕರು ಅವರು ಸಂಪರ್ಕದಲ್ಲಿದ್ದಾರೆಂದು ಹೇಳಿಕೊಂಡಿದ್ದಾರೆ. ಕೇವಲ 40 ಶಾಸಕರಲ್ಲ ನಮ್ಮ 136 ಶಾಸಕರನ್ನೂ ಸಂಪರ್ಕದಲ್ಲಿ ಇಟ್ಟುಕೊಳ್ಳಲಿ, ಬಹಳ ಸಂತೋಷ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಶುಕ್ರವಾರ ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದ ತಪ್ಪಲಿನಲ್ಲಿರುವ ಸುಲ್ತಾನ್ ಪೇಟೆಯ ಬಳಿಯ ಅಮಿತ ರಸ ರೆಸಾರ್ಟ್‌ನಲ್ಲಿ ಮೈಸೂರು ಜಿಲ್ಲೆಯ ಹುಣಸೂರಿನ ಮಾಜಿ ಶಾಸಕ ಎಚ್.ಪಿ. ಮಂಜುನಾಥ್‌ರ ಪುತ್ರ ಪವನ್‌ರ ಮದುವೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುವ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಸಂತೋಷ್ ಮೊದ್ಲು ತಮ್ಮವರನ್ನೇ ಪಕ್ಷದಲ್ಲಿ ಉಳಿಸಿಕೊಳ್ಳಲಿ: ಜಗದೀಶ್ ಶೆಟ್ಟರ್
ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ
ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ, ಬಿಜೆಪಿ ಸಂಪರ್ಕದಲ್ಲಿ 30ರಿಂದ 40 ಜನ ಅನ್ಯಪಕ್ಷದ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಅನ್ನೊ ಹೇಳಿಕೆಗೆ ಬಿಜೆಪಿ ಸಂಪರ್ಕದಲ್ಲಿ ಶಾಸಕರು ಅಲ್ಲ ನಗರಸಭೆ ಸದಸ್ಯರು ಸಹ ಸಂಪರ್ಕದಲ್ಲಿ ಇಲ್ಲ. ನಮಗೆ ಅನ್ಯ ಪಕ್ಷದ ಶಾಸಕರ ಅವಶ್ಯಕತೆಯಿಲ್ಲ. ಆದ್ರೆ ಯಾವುದೇ ಆಸೆ- ಆಮಿಷಗಳು ಇಲ್ಲದೆ ಕಾಂಗ್ರೆಸ್‌ಗೆ ಯಾರು ಬೇಕಾದ್ರು ಸೇರಬಹುದು. ಕಾಂಗ್ರೆಸ್‌ಗೆ ಬರುವವರಿಗೆ ಸ್ವಾಗತ. ನಮ್ಮ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಬಿಜೆಪಿಯಲ್ಲಿ ಆರ್‌ಎಸ್‌ಎಸ್ ಮೂಲದವರಿಗೆ ಮಾತ್ರ ಬೆಲೆಯಿದೆ. ಬಿಜೆಪಿಯಲ್ಲಿ ನಿಷ್ಠವಂತಾ ಮುಖಂಡರಿಗೆ ಬೆಲೆಯಿಲ್ಲ. ಬಿ.ಎಸ್.ಯಡಿಯೂರಪ್ಪರನ್ನು ಏನ್ ಮಾಡಿದ್ರು ಗೊತ್ತಿದೆಯಲ್ಲಾ ಎಂದು ತಿರುಗೇಟು ನೀಡಿದರು
ವಿವಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್‌ರ ಪುತ್ರ ಪವನ್‌ರ ಮದುವೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ನೂತನ ವಧು-ವರರನ್ನು ಆರ್ಶೀವದಿಸಿದರು. ಇದೇ ವೇಳೆ ಸಚಿವರಾದ ಪ್ರಿಯಾಂಕ್ ಖರ್ಗೆ ,ಸಂತೋಷ್ ಲಾಡ್ ,ಸತೀಶ್ ಜಾರಕೀಹೊಳಿ ,ಡಾ .ಎಂ ಸಿ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಬಾಗಿಯಾಗಿದ್ದರು.