Asianet Suvarna News Asianet Suvarna News

ಸಿದ್ದರಾಮಯ್ಯ ಶ್ರೀರಾಮ್ ಘೋಷಣೆ ಕೂಗಲು ಬಿಜೆಪಿ ಕಾರಣ: ಎನ್.ರವಿಕುಮಾರ್

ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಅದಕ್ಕೆ ಕಾರಣ ಬಿಜೆಪಿ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಸಮರ್ಥಿಸಿಕೊಂಡರು. 
 

BJP is the reason for shouting slogans of Siddaramaiah Sriram Says N Ravikumar gvd
Author
First Published Feb 27, 2024, 2:30 AM IST

ಕೂಡ್ಲಿಗಿ (ಫೆ.27): ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಅದಕ್ಕೆ ಕಾರಣ ಬಿಜೆಪಿ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಸಮರ್ಥಿಸಿಕೊಂಡರು. ತಾಲೂಕಿನ ಹೊಸಹಳ್ಳಿಯಲ್ಲಿ ಬಿಜೆಪಿಯ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಹಲವರು ಪ್ರಾಣತ್ಯಾಗ ಮಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತದಿಂದಾಗಿ ಕಾಶ್ಮೀರದಲ್ಲಿ ರಾಜಾರೋಷವಾಗಿ ಓಡಾಡುವಂತಾಗಿದೆ ಎಂದರು. ದೇಶಾದ್ಯಂತ 500ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಶಿಲಾನ್ಯಾಸ ಕಾರ್ಯಕ್ರಮವು ನಡೆಯಲಿದೆ. 

ಹೆದ್ದಾರಿ ಯೋಜನೆ ಸೇರಿದಂತೆ ಗ್ಯಾಸ್ ಸೌಲಭ್ಯ ಹಾಗೂ ಕೌಶಲಾಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ. ರೈತರ ಖಾತೆಗೆ ನೇರವಾಗಿ ₹6000 ಜಮೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಕೆ. ರಾಜು ಬಣವಿಕಲ್ಲು, ಮಾಜಿ‌ ಶಾಸಕ ಅಮರನಾಥ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್. ರೇವಣ್ಣ, ಮಹಿಳಾ ಮಂಡಲ ಅಧ್ಯಕ್ಷೆ ಶಾರದಾ ಕುಂಬಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಖಾ ಮಲ್ಲಿಕಾರ್ಜುನ, ಶಿಲ್ಪಾ ಬಸವರಾಜ್, ಗೀತಾ, ಸಣ್ಣಬಾಲಪ್ಪ, ಬೆಳ್ಳಕಟ್ಟೆ ಕಲ್ಲೇಶಪ್ಪ, ಹಾರಕಭಾವಿ ಕೊಟ್ರೇಶ್, ಆಲೂರು ಕೆ.ಟಿ. ಮಲ್ಲಿಕಾರ್ಜುನ, ಜಯರಾಜ್ ಅಮಲಾಪುರ ಸುದರ್ಶನ ಇತರರಿದ್ದರು.

ಅಭಿವೃದ್ಧಿ ಶೂನ್ಯ ಗ್ಯಾರಂಟಿ ಕಾಂಗ್ರೆಸ್‌ ಸರ್ಕಾರ: ಬಿ.ವೈ.ವಿಜಯೇಂದ್ರ ಆರೋಪ

ನೀರಿನ ಸಮಸ್ಯೆ ಇದ್ದರೂ ಸರ್ಕಾರ ಮೋಜು-ಮಸ್ತಿ: ರಾಜ್ಯದಲ್ಲಿ ಬರ, ನೀರು ಮತ್ತು ವಿದ್ಯುತ್ ಸಮಸ್ಯೆ ಇಲ್ಲ ಎಂಬಂತೆ ಕಾಂಗ್ರೆಸ್‌ ಸರ್ಕಾರವು ಮೋಜು-ಮಸ್ತಿಯಲ್ಲಿ ತೊಡಗಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಕಿಡಿಕಾರಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ಸದನದಲ್ಲಿ ಸೋಮವಾರ ಬೆಂಗಳೂರಿನ ನೀರಿನ ಸಮಸ್ಯೆ ಕುರಿತು ಚರ್ಚೆ ಮಾಡಲಿದ್ದೇವೆ. ನೀರು, ವಿದ್ಯುತ್ ಸಮಸ್ಯೆ ಇದ್ದರೂ, ಬರಗಾಲ ಕಿತ್ತು ತಿನ್ನುತ್ತಿದ್ದರೂ ಕೂಡ ರೈತರಿಗೆ ಸರ್ಕಾರ ಒಂದು ನಯಾಪೈಸೆ ಪರಿಹಾರ ಕೊಟ್ಟಿಲ್ಲ. ಎರಡು ಸಾವಿರ ರು. ಕೊಟ್ಟು ಕೈತೊಳೆದುಕೊಂಡಿದ್ದಾರೆ ಎಂದು ಟೀಕಿಸಿದರು. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರಿಗೆ ಕೇಂದ್ರದಿಂದ 6 ಸಾವಿರ ರು., ರಾಜ್ಯದಿಂದ 4 ಸಾವಿರ ರು. ಸೇರಿ 10 ಸಾವಿರ ರು. ಕೊಡಲಾಗುತ್ತಿತ್ತು. 

ನಮ್ಮ ಶಾಸಕರನ್ನು ಬಿಜೆಪಿ ಸೆಳೆಯುವ ಭಯ, ಅದಕ್ಕೆ ರೆಸಾರ್ಟ್‌ ಬುಕ್‌: ಸಚಿವ ಸಂತೋಷ್‌ ಲಾಡ್‌

ಇದರಿಂದ ರೈತರಿಗೆ ಸಹಾಯವಾಗುತ್ತಿತ್ತು. ಕಾಂಗ್ರೆಸ್‌ ಸರ್ಕಾರವು ಹಣಕಾಸಿನ ತೊಂದರೆ ಇಲ್ಲವೆಂದು ಹೇಳಿ ಸಚಿವರು ಸೇರಿ 84 ಮಂದಿಗೆ ಸಚಿವ ಸಂಪುಟ ದರ್ಜೆ ಕೊಟ್ಟಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಸಚಿವ ಸಂಪುಟ ದರ್ಜೆ ಕೊಡುವ ಅವಶ್ಯಕತೆ ಇದೆಯೇ? ಒಂದು ಸಚಿವ ಸಂಪುಟ ದರ್ಜೆವೆಂದರೆ ಒಂದು ತಿಂಗಳಿಗೆ ಐದು ಲಕ್ಷ ರು. ವೆಚ್ಚವಾಗಲಿದೆ. 84 ಜನರಿಗೆ ಒಂದು ತಿಂಗಳಿಗೆ ಎಷ್ಟು ಖರ್ಚಾಯಿತು? ಸರ್ಕಾರ ಈ ಕುರಿತು ಯೋಚಿಸಬೇಕು. 34 ಹೊಸ ಇನೋವಾ ಕಾರುಗಳನ್ನು ಖರೀದಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆ ನವೀಕರಣಕ್ಕೆ 6.40 ಕೋಟಿ ರು. ವೆಚ್ಚವಾಗಿರುವ ಬಗ್ಗೆ ಮಾಧ್ಯಮದಲ್ಲಿ ಗಮನಿಸಲಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.

Follow Us:
Download App:
  • android
  • ios