ನಮ್ಮ ಶಾಸಕರನ್ನು ಬಿಜೆಪಿ ಸೆಳೆಯುವ ಭಯ, ಅದಕ್ಕೆ ರೆಸಾರ್ಟ್ ಬುಕ್: ಸಚಿವ ಸಂತೋಷ್ ಲಾಡ್
ರಾಜ್ಯಸಭೆ ಚುನಾವಣೆ ವಿಷಯದಲ್ಲಿ ನಮಗೆ ಬಿಜೆಪಿ ಬಗ್ಗೆ ಭಯ ಇದೆ. ಹಾಗಾಗಿ ನಮ್ಮ ಶಾಸಕರ ರಕ್ಷಣೆಗಾಗಿ ನಾವು ರೆಸಾರ್ಟ್‌ಗಳನ್ನು ಬುಕ್ ಮಾಡಿದ್ದೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಹೊಸಪೇಟೆ (ಫೆ.26): ರಾಜ್ಯಸಭೆ ಚುನಾವಣೆ ವಿಷಯದಲ್ಲಿ ನಮಗೆ ಬಿಜೆಪಿ ಬಗ್ಗೆ ಭಯ ಇದೆ. ಹಾಗಾಗಿ ನಮ್ಮ ಶಾಸಕರ ರಕ್ಷಣೆಗಾಗಿ ನಾವು ರೆಸಾರ್ಟ್‌ಗಳನ್ನು ಬುಕ್ ಮಾಡಿದ್ದೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಸಭೆ ಚುನಾವಣೆಯಲ್ಲಿ ಮೂರಕ್ಕೆ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ.
ನಾವು ಮೂವರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ. ನಮ್ಮ ಬಳಿ 136 ಶಾಸಕರ ಬೆಂಬಲ ಇದೆ. ಖಂಡಿತ ನಾವು ಗೆಲುವು ಸಾಧಿಸುತ್ತೇವೆ. ನಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳಲು ರೆಸಾರ್ಟ್‌ಗೆ ಹೋಗುತ್ತಿದ್ದೇವೆ ಎಂದರು. ನಮಗೆ ಅವರ (ಬಿಜೆಪಿ) ಭಯ ಇದೆ. ಸರ್ಕಾರ ಅಸ್ಥಿರಗೊಳಿಸುವ ಯೋಜನೆ ನಮ್ಮದಲ್ಲ. ಬಿಜೆಪಿಯವರು ಕಳೆದ ಹತ್ತು ವರ್ಷಗಳಲ್ಲಿ 500ರಿಂದ 600 ಶಾಸಕರನ್ನು ಖರೀದಿ ಮಾಡಿದ್ದಾರೆ. ಸರ್ಕಾರಗಳ ಅಸ್ಥಿರಕ್ಕೆ ನಾಂದಿ ಹಾಡಿದ್ದೆ ಬಿಜೆಪಿಯವರು ಎಂದು ದೂರಿದರು.
ಬಡವರು ರಾಜಕೀಯ ಅಧಿಕಾರ ಪಡೆಯಬೇಕು: ಸಚಿವ ಕೆ.ಎನ್.ರಾಜಣ್ಣ
ಚುನಾವಣೆ ಬಂದಾಗಲಷ್ಟೇ ಹಿಂದೂ- ಮುಸ್ಲಿಂ ಮುನ್ನೆಲೆಗೆ: ಚುನಾವಣೆ ಬಂದಾಗ ಹಿಂದೂ- ಮುಸ್ಲಿಂ ಆಗುತ್ತದೆ. ಇದನ್ನು ಬಿಜೆಪಿಯವರು ಮಾಡುವುದು ಎಂಬುದು ಗೊತ್ತು. ಅವರು ಬರೀ ಭಾವನಾತ್ಮಕ ವಿಷಯಗಳನ್ನೇ ಇಟ್ಟುಕೊಂಡು ಚುನಾವಣೆ ನಡೆಸುತ್ತಾ ಬಂದಿದ್ದಾರೆ. ಈಗಲೂ ಅದನ್ನೇ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗಲೇ ರಾಮಮಂದಿರ, ಹಿಂದೂ- ಮುಸ್ಲಿಂ, ಖಲಿಸ್ಥಾನ, ಪಾಕಿಸ್ತಾನದ ವಿಷಯಗಳೆಲ್ಲ ಬರುತ್ತವೆ. ಇದೇ ಅವರು ಮಾಡುವುದು.
ಯಾವುದೇ ಚುನಾವಣೆಯಾದರೂ ಭಾವನಾತ್ಮಕ ವಿಷಯಗಳನ್ನೇ ಎತ್ತಿಕೊಂಡು ಚುನಾವಣೆ ನಡೆಸುತ್ತಾರೆ ಎಂದರು. ಚುನಾವಣೆಯಲ್ಲಿ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕು. ಆದರೆ, ಅದನ್ನು ನಡೆಸುತ್ತಿಲ್ಲ. ಮೋದಿ ಸರ್ಕಾರ ಬಂದು 10- ವರ್ಷವಾಗಿದೆ. ಏನೆಲ್ಲ ಅಭಿವೃದ್ಧಿಯಾಗಿದೆ ಅದರ ಬಗ್ಗೆ ಚರ್ಚೆ ನಡೆಸಲಿ. ಮೇಕ್ ಇನ್ ಇಂಡಿಯಾ ಬಗ್ಗೆ ಏನೆಲ್ಲ ಹೇಳಿದರು. ಆದರೆ ಏನಾಗಿದೆ. ಮೇಕ್ ಇನ್ ಇಂಡಿಯಾಗೆ 450 ಕೋಟಿ ಖರ್ಚಾಗಿದೆ. ಎಲ್ಲ ಸರಕುಗಳು ಈಗಲೂ ಚೀನಾದಿಂದಲೇ ಬರುತ್ತವೆ. ಮೇಕ್ ಇನ್ ಇಂಡಿಯಾ ಎಲ್ಲಿದೆ? ಇದರ ಬಗ್ಗೆ ಏಕೆ ಬಿಜೆಪಿಯವರು ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.
ವಿಜ್ಞಾನ ಕೇಂದ್ರ ಉನ್ನತೀಕರಿಸಲು ಸಚಿವ ಸಂಪುಟ ಒಪ್ಪಿಗೆ: ಸಚಿವ ಬೋಸರಾಜು
ಭಾರತ ಪಾಸ್ಪೋರ್ಟ್ ಪವರ್ 85ನೇ ಸ್ಥಾನಕ್ಕಿದೆ. ಪವರ್‌ಫುಲ್ ಪ್ರಧಾನಿ ಇದ್ದಾರೆ. ಹಾಗಾದರೆ ನಮ್ಮದು ಮೊದಲನೆಯ ಸ್ಥಾನದಲ್ಲಿ ಇರಬೇಕಿತ್ತು ಅಲ್ವಾ? ಅದ್ಯಾಕೆ ಇಲ್ಲ ಎಂದು ಪ್ರಶ್ನಿಸಿದರು. ಶಿಕ್ಷಣ, ಆರೋಗ್ಯದಲ್ಲಿ ಗುಜರಾತ್ ಮಾಡೆಲ್ ಎಷ್ಟಿದೆ ಗೊತ್ತ? ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡಬೇಕು ಆದರೆ ಈಗ ಚರ್ಚೆ ಆಗುತ್ತಿರುವುದೇನು? ಎಂದು ಪ್ರಶ್ನಿಸಿದರು. ಅನಂತಕುಮಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರೈತರ ಹೋರಾಟ ಯಾವುದು? ಖಲಿಸ್ತಾನಿಗಳ ಹೋರಾಟ ಯಾವುದು ಅವರನ್ನೇ ಕೇಳಬೇಕು ಎಂದರು.