Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: ಚಿಕ್ಕಬಳ್ಳಾಪುರ ಎಂಪಿ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಸಿದ್ಧತೆ..!

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, 2 ರಲ್ಲಿ ಬಿಜೆಪಿ ಶಾಸಕರಿದ್ದಾರೆ. 1.86 ಲಕ್ಷ ಮತಗಳ ಅಂತರದಿಂದ ಕಳೆದ ಸಲ ಗೆಲುವು ಸಾಧಿಸಿದ್ದೆವು. ಬಾಗೇಪಲ್ಲಿ, ದೇವನಹಳ್ಳಿಯಲ್ಲಿ ಹೆಚ್ಚಿನ ಮತ ಬಂದಿರುವುದರಿಂದ ಜೆಡಿಎಸ್ ಶಾಸಕರು ಹಾಗೂ ಜೆಡಿಎಸ್ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಯವರ ಬೆಂಬಲ ಇರುವುದರಿಂದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ದೇವನಹಳ್ಳಿಯಲ್ಲಿ ಸಮಾವೇಶನ್ನು ಯಡಿಯೂರಪ್ಪನವರು ಉದ್ಘಾಟನೆ ಮಾಡಲಿದ್ದಾರೆ: ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ 

BJP is Preparing to Retain the Chikkaballapura MP Constituency in Lok Sabha Elections 2024 grg
Author
First Published Feb 25, 2024, 10:04 PM IST

ಗೌರಿಬಿದನೂರು(ಫೆ.25):  ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾಗುವ ಹಿನ್ನೆಲೆಯಲ್ಲಿ ಬಿಜೆಪಿ ಸಂಘಟನೆಗೆ ಸಭೆಗಳನ್ನು ಮಾಡಲಾಗುತ್ತಿದೆ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದರು. ಶನಿವಾರ ಗೌರಿಬಿದನೂರು ತಾಲೂಕು ವಿದುರಾಶ್ವತ್ಥದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅ‍ವರು, ಗೋಡೆಬರಹ, ಫಲಾನುಭವಿಗಳ ಸಮಾವೇಶ, ತಾಲೂಕಿನ ಕಸಬಾ ಹೋಬಳಿಯಲ್ಲಿ ಪ್ರಾರಂಭ ಮಾಡಿದ್ದು ನಂತರ ಎಲ್ಲ ಹೋಬಳಿಗಳಲ್ಲಿಯೂ ನಡೆಸುತ್ತೇವೆ ಎಂದರು.

ದೇವನಹಳ್ಳಿಯಲ್ಲಿ ಸಮಾವೇಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, 2 ರಲ್ಲಿ ಬಿಜೆಪಿ ಶಾಸಕರಿದ್ದಾರೆ. 1.86 ಲಕ್ಷ ಮತಗಳ ಅಂತರದಿಂದ ಕಳೆದ ಸಲ ಗೆಲುವು ಸಾಧಿಸಿದ್ದೆವು. ಬಾಗೇಪಲ್ಲಿ, ದೇವನಹಳ್ಳಿಯಲ್ಲಿ ಹೆಚ್ಚಿನ ಮತ ಬಂದಿರುವುದರಿಂದ ಜೆಡಿಎಸ್ ಶಾಸಕರು ಹಾಗೂ ಜೆಡಿಎಸ್ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಯವರ ಬೆಂಬಲ ಇರುವುದರಿಂದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ದೇವನಹಳ್ಳಿಯಲ್ಲಿ ಸಮಾವೇಶನ್ನು ಯಡಿಯೂರಪ್ಪನವರು ಉದ್ಘಾಟನೆ ಮಾಡಲಿದ್ದಾರೆ. ಅದೇರೀತಿ ನೆಲಮಂಗಲದಲ್ಲಿಯೂ ಪ್ರಾರಂಭವಾಗಲಿದೆ ಎಂದರು.

ಬಿಜೆಪೆ ತೊರೆದು ಮತ್ತೆ ಕಾಂಗ್ರೆಸ್‌ಗೆ ಡಾ.ಸುಧಾಕರ್‌ ಸೇರ್ತಾರಾ?

ದೇವಾಲಯದ ಹುಂಡಿಯೂ ಸರ್ಕಾರಕ್ಕೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೆಣ್ಣುಮಕ್ಕಳಿಗೆ 2 ಸಾವಿರ ರು.ಗಳನ್ನು ನೀಡಿ ಮದ್ಯಪಾನದ ಬೆಲೆ ಹೆಚ್ಚು ಮಾಡಿದ್ದಾರೆ. ಈ ರೀತಿಯ ಚುನಾವಣೆ ಗಿಮಿಕ್ ಬಹಳ ದಿನ ನಡೆಯಲ್ಲ. 56 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿಗೆ ಮೀಸಲಿಟ್ಟಿದ್ದಾರೆ. ಹಳೆಯದೂ ಸೇರಿದರೆ 1ಲಕ್ಷ ಕೋಟಿ ಸಾಲವಾಗಿದೆ. ಇನ್ನು ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ. ದೇವಸ್ಥಾನಗಳಲ್ಲಿ ಬರುವ ಆದಾಯದಲ್ಲಿ ಶೇ. 5 ರಿಂದ 10 ರಷ್ಟು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ರಾಜ್ಯ ಸರ್ಕಾರವೇ ಘೋಷಿಸಿದೆ. ಇದು ದೌರ್ಭಾಗ್ಯದ ಸಂಗತಿ ಎಂದರು.

ಗೌರಿಬಿದನೂರು ಬಾಗೇಪಲ್ಲಿಯಲ್ಲಿ ನೀರಿಲ್ಲ, ಕೈಗಾರಿಕೆಗಳಿಲ್ಲ, ರಸ್ತೆ ಅಭಿವೃದ್ಧಿಯಿಲ್ಲ ಯಾವುದೇ ಕಾರ್ಯಕ್ರಮಯಾಗುತ್ತಿಲ್ಲ. ಕಾಂಗ್ರೆಸ್ ಗ್ಯಾರಂಟಿ ಎಂದರೆ ಬರಗಾಲ ಬರುವುದು. ಕುಡಿಯುವ ನೀರಿನ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದಾರೆ. ಬೋರ್ ವೆಲ್ ಗಳು ಒಣಗುತ್ತಿದೆ ಎಂದರು.

ಕಾಂಗ್ರೆಸ್‌ ಸರ್ಕಾರದಿಂದ ಬಯಲುಸೀಮೆಗೆ ವಂಚನೆ: ಮಾಜಿ ಸಚಿವ ಡಾ.ಕೆ.ಸುಧಾಕರ್‌

ಮೋದಿ ಮತ್ತೆ ಪ್ರಧಾನಿಯಾಗಬೇಕು

ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಬೇಕು. ಹಾಗಾಗಿ ಇಲ್ಲಿಯೂ ಬಿಜೆಬಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿರುವುದರಿಂದ ನಾವು ಕಾರ್ಯಕರ್ತರು, ಮುಖಂಡರು, ಹಗಲಿರುಳು ಶ್ರಮಿಸಿ ಸಂಸದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ಪತ್ರಿಕಾಗೋಷ್ಟಿಯಲ್ಲಿ ರವಿನಾರಾಯಣರೆಡ್ಡಿ, ಕಟ್ಟಾಸುಬ್ರಮಣ್ಯ ನಾಯ್ಡು, ಡಾ.ಶಶಿಧರ್, ಹೆಚ್.ಎಸ್.ಮುರಳೀಧರ್ ರಮೇಶ್‌ರಾವ್, ವೇಣುಮಾಧವ್, ಜಯಣ್ಣ, ಮಾರ್ಕೆಟ್ ಮೋಹನ್,ಮತ್ತಿತರರು ಇದ್ದರು.

Follow Us:
Download App:
  • android
  • ios