ನಿನ್ನೆ ಬೆಳಿಗ್ಗೆ ಯಡಿಯೂರಪ್ಪ ಮತ್ತು ವಿಜೇಯೇಂದ್ರ ಜತೆ ಅಮಿತ್ ಶಾ ಅವರನ್ನು ಭೇಟಿ ಮಾಡಿದೆವು. ಅವರು ಆತ್ಮೀಯವಾಗಿ ನಮ್ಮನ್ನ ಬರ ಮಾಡಿಕೊಂಡರು. ಸೂಕ್ತ ಸ್ಥಾನಮಾನದ ಭರವಸೆ ನೀಡಿದರು. ಕಾಂಗ್ರೆಸ್ ಹೋಗಿದ್ದು ಯಾಕೆ ಅಂತ ಹೇಳಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಸೇರಿದ್ದು, ಇಂದು ಬಿಜೆಪಿ ಕಚೇರಿಗೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಹಾಗೂ ಪ್ರೀತಮ್ ಗೌಡ ಸ್ವಾಗತಿಸಿದರು. ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನದಲ್ಲಿ ಹೂ ಗುಚ್ಛ ನೀಡಿ ಶೆಟ್ಟರ್ ಅವರನ್ನು ನಾಯಕರು ಬರ ಮಾಡಿಕೊಂಡರು.
ಸುದ್ದಿಗೋಷ್ಟಿ ನಡೆಸಿದ ಜಗದೀಶ್ ಶೆಟ್ಟರ್ , ನಿನ್ನೆ ಬೆಳಿಗ್ಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಜತೆ ಅಮಿತ್ ಶಾ ಅವರನ್ನು ಭೇಟಿ ಮಾಡಿದೆವು. ಅವರು ಆತ್ಮೀಯವಾಗಿ ನಮ್ಮನ್ನ ಬರ ಮಾಡಿಕೊಂಡರು. ಸೂಕ್ತ ಸ್ಥಾನಮಾನದ ಭರವಸೆ ನೀಡಿದರು. ನಿನ್ನೆ ನಡ್ಡಾ ಅವರು ಇದೇ ಮಾತನ್ನ ಹೇಳಿದ್ರು. ಕಾಂಗ್ರೆಸ್ ಹೋಗಿದ್ದು ಯಾಕೆ ಅಂತ ಹೇಳಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶೆಟ್ಟರ್ ಸೇರ್ಪಡೆಯಿಂದ ಬಿಜೆಪಿಗೆ ಆನೆ ಬಲ: ವಿಜಯೇಂದ್ರ
ಬಿಜೆಪಿ ನಮ್ಮ ಮನೆ. ನಮ್ಮ ತಂದೆಯಿಂದ ಹಿಡಿದು ಎಲ್ಲರೂ ಬಿಜೆಪಿಯಲ್ಲಿ ಇದ್ದೆವು. ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಬರಲು ಮೂಲ ಉದ್ದೇಶ ಇದೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಅವರ ನಾಯಕತ್ವಕ್ಕೆ ನಿಷ್ಠೆವಂತರಾಗಿ ಅಳಿಲು ಸೇವೆ ಮಾಡಲು ಬಂದಿದ್ದೇನೆ.
ರಾಮ ಮಂದಿರ ನಿರ್ಮಾಣ ಸೇರಿದಂತೆ ಹಲವು ವಿಚಾರಗಳು ಮೋದಿ ಅವರ ನೇತೃತ್ವದಲ್ಲಿ ಆಗಿವೆ. ಕಾಂಗ್ರೆಸ್‌ಲ್ಲಿ ಇದ್ದಾಗ ಬಿಜೆಪಿ ಕಾರ್ಯಕರ್ತರು ನಮ್ಮ ಮನೆಗೆ ಬಂದು ಅಹ್ವಾನ ಮಾಡಿದ್ದು, ವಿಜಯೇಂದ್ರ ಅವರು ಅಧ್ಯಕ್ಷರಾದ ಬಳಿಕ ಸೇರ್ಪಡೆ ಕಾರ್ಯಕ್ರಮ ಸ್ಪೀಡ್ ಆಯಿತು. ಇದರಲ್ಲಿ ಯಡಿಯೂರಪ್ಪ ಪಾತ್ರ ಬಹಳ ಮುಖ್ಯವಾಗಿದೆ ಎಂದಿದ್ದಾರೆ.
ಜಗದೀಶ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆ ಹಿಂದೆ ಐಟಿ, ಇಡಿ ಕೈವಾಡ! ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ರಾಜೀನಾಮೆ ಪತ್ರ ತಲುಪಿಸಿದರು. ಶೆಟ್ಟರ್ ಆಪ್ತ ಸಹಾಯಕ ಬಂಗೇರಾ ಮೂಲಕ ರಾಜೀನಾಮೆ ಪತ್ರ ತಲುಪಿಸಿದರು. ಕಾಂಗ್ರೆಸ್ ಪ್ರಾಥಮಿಕ ರಾಜೀನಾಮೆ ಸಲ್ಲಿಸಿದ್ದೇನೆ. ದಯವಿಟ್ಟು ರಾಜೀನಾಮೆ ಸ್ವೀಕಾರ ಮಾಡಿ. ಇಲ್ಲಿಯವರೆಗೆ ತಾವು ನನಗೆ ನೀಡಿದ ಸಹಕಾರಕ್ಕಾಗಿ ವಂದನೆಗಳು ಎಂದು ತನ್ನ ರಾಜೀನಾಮೆ ಪತ್ರದಲ್ಲಿ ತಿಳಿಸಿದರು.
