Asianet Suvarna News Asianet Suvarna News

ಶೆಟ್ಟರ್ ಸೇರ್ಪಡೆಯಿಂದ ಬಿಜೆಪಿಗೆ ಆನೆ ಬಲ: ವಿಜಯೇಂದ್ರ

ಶೆಟ್ಟರ್ ಅವರು ಮರಳಿ ತಮ್ಮ ಮನೆಗೆ ಬಂದಿದ್ದಾರೆ. ಇದು ಪಕ್ಷದ ಸದಸ್ಯರಲ್ಲಿ ಸಂತಸ ಮೂಡಿಸಿದೆ. ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಅವರ ಸೇರ್ಪಡೆ ಆನೆ ಬಲ ಸಿಕ್ಕಂತಾಗಿದೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ 

State President BY Vijayendra React to Jagadish Shettar Join BJP grg
Author
First Published Jan 26, 2024, 12:40 PM IST

ನವದೆಹಲಿ(ಜ.26): ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿದ್ದು ಕರ್ನಾಟಕದ ರಾಜಕೀಯದಲ್ಲಿ ದೊಡ್ಡ ಬೆಳವಣಿಗೆ ಯಾಗಿದೆ. ಅವರ ಆಗಮನ ದಿಂದ ಆನೆ ಬಲ ಬಂದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.

ದೆಹಲಿಯ ಬಿಜೆಪಿ ಕಚೇರಿಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಬರಮಾಡಿಕೊಂಡ ನಂತರ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯರಾದ ಶೆಟ್ಟ‌ರ್ ಬೀಜೆಪಿ ಸೇರಿದ್ದು ಸಂತಸ ತಂದಿದೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ಮರಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. 

ಘರ್‌ವಾಪ್ಸಿ ಪ್ರಕ್ರಿಯೆ 1.5 ತಿಂಗಳಿಂದಿತ್ತು: ಜಗದೀಶ್ ಶೆಟ್ಟರ್

ಶೆಟ್ಟರ್ ಅವರು ಮರಳಿ ತಮ್ಮ ಮನೆಗೆ ಬಂದಿದ್ದಾರೆ. ಇದು ಪಕ್ಷದ ಸದಸ್ಯರಲ್ಲಿ ಸಂತಸ ಮೂಡಿಸಿದೆ. ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಅವರ ಸೇರ್ಪಡೆ ಆನೆ ಬಲ ಸಿಕ್ಕಂತಾಗಿದೆ. ಶೆಟ್ಟರ್ ಅವರ ಈ ನಿರ್ಧಾರವನ್ನು ಪಕ್ಷದ ಎಲ್ಲ ನಾಯಕರು ಸ್ವಾಗತಿಸಿದ್ದು, ಕಾರ್ಯಕರ್ತರಲ್ಲಿ ಹರ್ಷ ಮೂಡಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲ್ಲುವ ಸಂಕಲ್ಪಕ್ಕೆ ಬಲ ಬಂದಿದೆ ಎಂದರು.

Follow Us:
Download App:
  • android
  • ios