ಬಿಜೆಪಿ ಎಂದೂ ಮುಸ್ಲಿಂ ವಿರೋಧಿಯಲ್ಲ, ಅಲ್ಪಸಂಖ್ಯಾತರೆಲ್ಲರೂ ಭಯೋತ್ಪಾದಕರಲ್ಲ, ಯಾರೋ ಕೆಲವರು ಮಾಡುವ ತಪ್ಪಿಗೆ ಸಂಘರ್ಷಗಳು ನಡೆಯುತ್ತಿವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿ (ಅ.16) : ಬಿಜೆಪಿ ಎಂದೂ ಮುಸ್ಲಿಂ ವಿರೋಧಿಯಲ್ಲ, ಅಲ್ಪಸಂಖ್ಯಾತರೆಲ್ಲರೂ ಭಯೋತ್ಪಾದಕರಲ್ಲ, ಯಾರೋ ಕೆಲವರು ಮಾಡುವ ತಪ್ಪಿಗೆ ಸಂಘರ್ಷಗಳು ನಡೆಯುತ್ತಿವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Add Asianetnews Kannada as a Preferred SourcegooglePreferred

ಮೋದಿ ವಿಶ್ವ ಗುರು, ರಾಹುಲ್‌ ಪುಕ್ಕಲ ಗುರು: ಶಾಸಕ ರೇಣುಕಾಚಾರ್ಯ

ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಕಾಂಗ್ರೆಸ್‌ ತೊರೆದು ಶಾಸಕ ರೇಣುಕಾಚಾರ್ಯ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ ಬಳಿಕ ಮಾತನಾಡಿದರು. ಬೇವಿನಹಳ್ಳಿ ಗ್ರಾಮವು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮ. ಹಿಂದೂ, ಮುಸ್ಲಿಮರ ಮಧ್ಯೆ ವಿಶ್ವಾಸ ಕೊರತೆಯಾದಾಗ ನಾವು ನೀವು ದೂರವಾಗಿದ್ದೇವೆ, ಈ ಹಿಂದೆ ಕೊಟ್ಟಮಾತಿನಂತೆ ಗ್ರಾಮದಲ್ಲಿ ಸಿ.ಸಿ. ರಸ್ತೆ ಸೇರಿ ಯಾವುದೇ ಕೆಲಸಗಳಿದ್ದರೂ ಮಾಡಿಸಲು ನಾನು ಸಿದ್ದನಿದ್ದೇನೆ ಎಂದರು.

ಸಂಘರ್ಷ ಆಗದಿರಲಿ:

ಕೆಲ ಕಿಡಿಗೇಡಿಗಳ ಸಂಘರ್ಷದಿಂದ ಶಿವಮೊಗ್ಗದ ಹರ್ಷ, ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಹಾಗೂ ಮುಸ್ಲಿಂ ಯುವಕನ ಹತ್ಯೆಯಾದ್ದರಿಂದ ಭಾರತ ಮಾತೆ ಕಣ್ಣೀರು ಹಾಕುತ್ತಿದ್ದಾಳೆ. ಭಾರತ ಮಾತೆಯ ಮಕ್ಕಳು ಭಾರತ ಮಾತೆಗೆ ಜೈ ಎನ್ನಬೇಕೆ ವಿನಾ ಪಾಕಿಸ್ತಾನ್‌ ಜಿಂದಾಬಾದ್‌ ಎನ್ನಬಾರದು ಇದರಿಂದ ಸಂಘರ್ಷ ಏರ್ಪಡುತ್ತದೆ ಎಂದರು. ತ್ರಿವಳಿ ತಲಾಖ್‌ನಿಂದಾಗಿ ಸಾಕಷ್ಟುಹೆಣ್ಣು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದರು. ಅದನ್ನು ಬೇಡ ಎಂದರೆ ಅದನ್ನು ವಿರೋಧಿಸಿದರೆ ಏನು ಮಾಡುವುದು ಎಂದು ಪ್ರಶ್ನಿಸಿದ ಶಾಸಕರು, ಧರ್ಮ ಧರ್ಮಗಳ ನಡುವೆ ಸಂಘರ್ಷ ಆಗಬಾರದು. ಸ್ವಾರ್ಥಕ್ಕಾಗಿ ಧರ್ಮ ಧರ್ಮಗಳ ನಡುವೆ ಜಗಳ ಉಂಟು ಮಾಡಬಾರದು ಎಂದರು.

ವೈಮನಸ್ಸು ಬರಬಾರದು:

ಕಂಡವರ ಮಕ್ಕಳನ್ನು ಹಾಳು ಬಾವಿಗೆ ತಳ್ಳಿ ನಕ್ಕರೆ ನಾಳೆ ಅವರ ಮಕ್ಕಳಿಗೂ ಇದೇ ಪರಿಸ್ಥಿತಿ ಬರುತ್ತದೆ. ನಾವು, ನೀವು ಸಹೋದರರಾಗಿ ಕುಟುಂಬದ ಸದಸ್ಯರಾಗಿದ್ದಾಗ ಮಾತ್ರ ಕೆಲಸ ಆಗುತ್ತದೆ ಎಂದರು. ಹಿಜಾಬ್‌ ಧÜರಿಸುವ ವಿಚಾರವಾಗಿ ಮಾತನಾಡಿದ್ದೇನೆ. ಏಕೆಂದರೆ ಶಾಲೆಯಲ್ಲಿ ಮಕ್ಕಳ ನಡುವೆ ವೈಮನಸ್ಸು ಬರಬಾರದೆಂದು ಎಲ್ಲರೂ ಒಂದಾಗಿರಬೇಕೆಂದು ನಾನು ಮಾತನಾಡಿದ್ದೇನೆ ಅದನ್ನು ಕೆಲವರು ವಿರೋಧಿಸಿದರೆ ಏನು ಮಾಡುವುದು ಎಂದರು. ಈ ಸಂದರ್ಭದಲ್ಲಿ ಗ್ರಾಮದ ನೂರಾರು ಮುಸ್ಲೀಂ ಭಾಂದವರು ಕಾಂಗ್ರೇಸ್‌ ತೊರೆದು ಬಿಜೆಪಿ ಸೇರ್ಪಡೆಯಾದರು, ಈ ವೇಳೆ ಗ್ರಾಮದ ಮುಖಂಡರು, ಗ್ರಾಮಸ್ಥರಿದ್ದರು.

ಶಾಸಕ ರೇಣುಕಾಚಾರ್ಯರದ್ದು ಆಧಾರ ರಹಿತ ಆರೋಪ; ಎಂ.ಎಲ್‌.ಸುರೇಶ್‌

ದೇಶದಲ್ಲಿ ಕಾಂಗ್ರೆಸ್‌ ವೋಟು ಬ್ಯಾಂಕ್‌ ರಾಜಕಾರಣ ಹಾಗೂ ಬರೀ ಅಪಪ್ರಚಾರ ಮಾಡುತ್ತಾ ಬಂದಿದೆ. ವೋಟ್‌ಗಾಗಿ ನಮ್ಮ ನಿಮ್ಮ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ಎಂದರೆ ಬೆಂಕಿ ಹಚ್ಚುವುದು. ಸ್ವಾರ್ಥಕ್ಕಾಗಿ ರಾಜಕಾರಣ ಮಾಡುವುದು ಬೇಡ, ನಿಮಗೆ ಏನು ಮೂಲಭೂತ ಸೌಲಭ್ಯಗಳು ಬೇಕೋ ಅದನ್ನು ಕಲ್ಪಿಸಿದಾಗ ದೇಶ, ಸಮಾಜ ಅಭಿವೃದ್ಧಿ ಅದಕ್ಕೆ ನಾನು ಬದ್ಧನಿದ್ದೇನೆ.

ಎಂ.ಪಿ.ರೇಣುಕಾಚಾರ್ಯ, ಶಾಸಕ, ಹೊನ್ನಾಳಿ