ಮೋದಿ ವಿಶ್ವ ಗುರು, ರಾಹುಲ್ ಪುಕ್ಕಲ ಗುರು: ಶಾಸಕ ರೇಣುಕಾಚಾರ್ಯ
ಭಾರತ ಐಕ್ಯತಾ ಯಾತ್ರೆ ‘ಬಂದ್ಯಾ ಪುಟ್ಟಹೋದ್ಯಾ ಪುಟ್ಟ’ ಜಾತ್ರೆಯಷ್ಟೇ. ಬೊಜ್ಜು, ಕೊಬ್ಬು ಕರಗಿಸಲು ಯಾತ್ರೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶಕ್ತಿಯೇ ಅಥವಾ ರಾಹುಲ್ ಗಾಂಧಿ ಶಕ್ತಿಯೇ ಎಂಬುದನ್ನು ಚುನಾವಣೆಯಲ್ಲಿ ಜನರು ನಿರ್ಧರಿಸುತ್ತಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಬೆಂಗಳೂರು (ಅ.14): ಭಾರತ ಐಕ್ಯತಾ ಯಾತ್ರೆ ‘ಬಂದ್ಯಾ ಪುಟ್ಟಹೋದ್ಯಾ ಪುಟ್ಟ’ ಜಾತ್ರೆಯಷ್ಟೇ. ಬೊಜ್ಜು, ಕೊಬ್ಬು ಕರಗಿಸಲು ಯಾತ್ರೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶಕ್ತಿಯೇ ಅಥವಾ ರಾಹುಲ್ ಗಾಂಧಿ ಶಕ್ತಿಯೇ ಎಂಬುದನ್ನು ಚುನಾವಣೆಯಲ್ಲಿ ಜನರು ನಿರ್ಧರಿಸುತ್ತಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ವಿಶ್ವಗುರು, ರಾಹುಲ್ ಗಾಂಧಿ ಪುಕ್ಕಲ ಗುರು. ಇಬ್ಬರಿಗೂ ಹೋಲಿಕೆ ಮಾಡುವುದು ಸರಿಯಲ್ಲ. ಇಬ್ಬರಲ್ಲಿ ಯಾರ ಶಕ್ತಿ ಏನು ಎಂಬುದನ್ನು ಜನರು ಚುನಾವಣೆಯಲ್ಲಿ ನಿರ್ಧರಿಸುತ್ತಾರೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರುವ ಮೊದಲು ಸಮಾಜವಾದಿಯಾಗಿದ್ದರು. ಈಗ ಕುರ್ಚಿಗಾಗಿ ಪಕ್ಷ ಬದಲಿಸಿ ಕೋಟಿ ಬೆಲೆಯ ವಾಚ್ ಕಟ್ಟುತ್ತಾರೆ. ಅರ್ಕಾವತಿ ರೀಡೂ ಹಗರಣ ಸೇರಿದಂತೆ ಹಲವು ಹಗರಣ ನಡೆಸಿ ಮಜಾವಾದಿ ಆಗಿದ್ದಾರೆ ಎಂದು ಟೀಕಿಸಿದರು. ಯಡಿಯೂರಪ್ಪ ಅವರು ಕುರ್ಚಿ ಬಿಡುವಾಗ ಕಣ್ಣೀರು ಹಾಕಿದ್ದು ಭಾವೋದ್ವೇಗಕ್ಕೆ ಒಳಗಾಗಿ ಅಷ್ಟೇ. ದ್ವಿತೀಯ ಹಂತದ ನಾಯಕರನ್ನು ಬೆಳೆಸಲು ಅವರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದರು. ಅವರು ರಾಜಕಾರಣದಲ್ಲಿ ರಾಹುಲ್ ಗಾಂಧಿ ಬಚ್ಚಾ ಎಂದು ಹೇಳಿದ್ದು ಸತ್ಯ. ಅವರಿಗೆ ಇನ್ನೂ ಪ್ರಬುದ್ಧತೆ ಬಂದಿಲ್ಲ ಎಂದು ಅಭಿಪ್ರಾಯಪಟ್ಟರು.
ನಾಯಕನಾಗಲು ಪತ್ರಿಕೆಗಳ ಪಾತ್ರವೂ ಮುಖ್ಯ: ಶಾಸಕ ರೇಣುಕಾಚಾರ್ಯ
ಕ್ಷೇತ್ರದ ಜನರು ಕಣ್ಣೀರು ಹಾಕುವುದು ಇಷ್ಟವಿಲ್ಲ: ಅವಳಿ ತಾಲೂಕಿನಲ್ಲಿ ಕಳೆದ 5-6 ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿದ್ದು ಸಾಕಷ್ಟುಮನೆಹಾನಿ ಹಾಗೂ ಬೆಳೆಹಾನಿ ಸಂಭವಿಸಿದೆ. ಮನೆಹಾನಿ ಪರಿಹಾರದ ವಿಚಾರವಾಗಿ ಇದು ನಾಲ್ಕನೇ ಪರಿಹಾರ ವಿತರಣಾ ಸಮಾರಂಭ. ಹೊನ್ನಾಳಿ ತಾಲೂಕಿನ 215, ನ್ಯಾಮತಿ ತಾಲೂಕಿನ 108 ಫಲಾನುಭವಿಗಳು ಸೇರಿ ಒಟ್ಟು 323ಜನರಿಗೆ ಸೋಮವಾರ ಪರಿಹಾರ ಆದೇಶ ಪತ್ರಗಳ ವಿತರಿಸಲಾಗುತ್ತಿದೆ. ಇದರಿಂದ ಒಟ್ಟು 1983 ಸಂತ್ರಸ್ತರಿಗೆ ಆದೇಶ ಪತ್ರಗಳನ್ನು ವಿತರಿಸಿದ್ದೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಗುರುಭವನದಲ್ಲಿ ಹಮ್ಮಿಕೊಂಡಿದ್ದ ಆದೇಶ ಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿ ಮನೆಹಾನಿ ಸಂಭವಿಸಿದಾಗ ನಾನೊಬ್ಬನೇ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ, ಆಯಾ ತಾಲೂಕಿನ ಗ್ರಾಮಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ತಹಸೀಲ್ದಾರರು, ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ನೀಡಿದ್ದಾರೆ. ಎರಡು ಬಾರಿ ಅರ್ಜಿ ಸಲ್ಲಿಸುವ ದಿನಾಂಕ ಮುಗಿದಿದ್ದರೂ ಸಿಎಂ ಗೆ ಪರಿಸ್ಥಿತಿಯ ಮನವರಿಕೆ ಮಾಡಿ ಮತ್ತೊಮ್ಮೆ ದಿನಾಂಕ ಮುಂದೂಡಿಸಿದ್ದೇನೆ. ಏಕೆಂದರೆ ನನ್ನ ಕ್ಷೇತ್ರದ ಜನರು ಮನೆ ಕಳೆದುಕೊಂಡು ಕಣ್ಣೀರು ಹಾಕುವುದು ನನಗೆ ಇಷ್ಟವಿಲ್ಲ ಎಂದರು.
ಕಾಂಗ್ರೆಸ್ಸಿಗರಿಗೆ ಸಾವರ್ಕರ್ ಕುರಿತ ಪುಸ್ತಕ ಕಳಿಸುವೆ: ಶಾಸಕ ರೇಣುಕಾಚಾರ್ಯ
ನಾನು ಬೀದಿ ಬದಿಯಲ್ಲಿ ಬೋರ್ ವೆಲ್ ಲಾರಿಯ ಕೆಳಗೆ ನನ್ನ ಸಹೋದರರೊಂದಿಗೆ ಮಲಗಿ ದುಡಿಮೆ ಮಾಡಿ ಬಂದ ಕಮಿಷನ್ ಹಣದಿಂದ ನಿವೇಶನ ಖರೀದಿಸಿ, ಈಗ ವಾಸಿಸುತ್ತಿರುವ ಮನೆ ಕಟ್ಟಿದ್ದೇನೆ, ಜಮೀನು, ತೋಟ ಖರೀದಿಸಿದ್ದೇನೆ, ನಾನು ಬೆವರು ಬಸಿದಿದ್ದೇನೆ, ಭ್ರಷ್ಟಾಚಾರ ಮಾಡಿ ಆಸ್ತಿ ಮಾಡಿಲ್ಲ, ಮನೆ ಕಟ್ಟುತ್ತಿಲ್ಲ ಎಂದು ವಿಪಕ್ಷಗಳ ಟೀಕೆಗೆ ಉತ್ತರಿಸಿದರು. ಆಹಾರ ನಿಗಮದ ಉಪ ನಿರ್ದೇಶಕಿ ನಜ್ಮಾ ಮಾತನಾಡಿ, ಮನೆಹಾನಿ ಸಂತ್ರಸ್ಥರಿಗೆ ಇಷ್ಟೊಂದು ತ್ವರಿತವಾಗಿ ಪರಿಹರ ತಂದುಕೊಡುತ್ತಿರುವ ಶಾಸಕ ರೇಣುಕಾಚಾರ್ಯರ ಕಾರ್ಯವನ್ನು ಮೆಚ್ಚಲೇಬೇಕು ಎಂದು ಹೇಳಿದರು. ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿಯೊಬ್ಬರಿಗೂ 5 ಕೆ.ಜಿ. ಅಕ್ಕಿ ವಿತರಣೆ ಅವಧಿ ಮುಗಿದಿತ್ತು, ಆದರೆ ಕೇಂದ್ರ ಸರ್ಕಾರ ಮತ್ತೇ ಅದನ್ನು ಡಿಸೆಂಬರ್ ವರೆಗೂ ಮುಂದುವರೆಸಲು ಆದೇಶ ಮಾಡಿದೆ ಎಂದರು.