ಶಾಸಕ ರೇಣುಕಾಚಾರ್ಯರದ್ದು ಆಧಾರ ರಹಿತ ಆರೋಪ; ಎಂ.ಎಲ್‌.ಸುರೇಶ್‌

  • ಶಾಸಕ ರೇಣುಕಾಚಾರ್ಯರದ್ದು ಆಧಾರ ರಹಿತ ಆರೋಪ
  • ಸುದ್ದಿಗೋಷ್ಠಿಯಲ್ಲಿ ಕುಂಚಿಟಿಗ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್‌.ಸುರೇಶ್‌ ಹೇಳಿಕೆ
MLA Renukacharyas allegation isEvidenceless says ml suresh rav

ಹೊನ್ನಾಳಿ (ಅ.4) : 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 15 ಲಕ್ಷ ರು.ಗಳ ನನ್ನಿಂದ ಅಪೇಕ್ಷಿಸಿದ್ದರು ಎಂಬುದಾಗಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದು, ಸತ್ಯಕ್ಕೆ ದೂರವಾದ್ದು ಎಂದು ಕುಂಚಿಟಿಗ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್‌. ಸುರೇಶ್‌ ಹೇಳಿದರು.

ದಾವಣಗೆರೆ: ಅ.5ರಂದು ಸಾರ್ವಜನಿಕ ವಿಜಯದಶಮಿ ಮಹೋತ್ಸವದಿಂದ ಬೃಹತ್ ಶೋಭಾಯಾತ್ರೆ

ತಾಲೂಕಿನ ತಕ್ಕನಹಳ್ಳಿ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈಚೆಗೆ ತಾಲೂಕು ಕಚೇರಿ ಆವರಣದಲ್ಲಿ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ನಾನು ರೇಣುಕಾಚಾರ್ಯ ವಿರುದ್ಧ ಮಾಡಿದ ಭಾಷಣದ ಕಾರಣದಿಂದ ಈ ರೀತಿಯ ಸುಳ್ಳು ಆರೋಪ ಮಾಡಿದ್ದಾರೆ ಎಂದು ತಿಳಿಸಿದರು. ರೇಣುಕಾಚಾರ್ಯ ಆಧಾರ ರಹಿತ ಆರೋಪ ಮಾಡಬಾರದು. ನಾನು ಅವರಿಂದ ಯಾವ ಸಂದರ್ಭದಲ್ಲಿಯೂ, ಹಣ ಅಪೇಕ್ಷಿಸಿರಲಿಲ್ಲ ಎಂಬುದಾಗಿ ಹೊನ್ನಾಳಿಯ ಹಿರೇಕಲ್ಮಠದಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಬಂದು ಪ್ರಮಾಣ ಮಾಡಲಿ. ಆಗ ಸತ್ಯಾಸತ್ಯತೆ ಜನತೆಗೆ ತಿಳಿಯುತ್ತದೆ ಎಂದರು .

ನಿಮ್ಮ ಪಕ್ಷ ಬೆಂಬಲಿಸಲ್ಲ:

ನಮ್ಮ ತಂದೆ ಲಕ್ಷ್ಮಣರಾವ್‌ ಮೊದಲಿನಿಂದಲೂ ಶ್ರೀಮಂತರು.ಕಾಡಾ ಅಧ್ಯಕ್ಷರಾಗಿದ್ದವರು ಬೇರೆಯವರಿಂದ ಹಣ ಪಡೆಯುವ ಅವಶ್ಯಕತೆ ಇಲ್ಲ ಎಂದರು. ಇನ್ನು ರೇಣುಕಾಚಾರ್ಯ ಅವರ ಬಳಿ ನಾನು 15 ಲಕ್ಷ ರು.ಗಳನ್ನು ಕೇಳುತ್ತೇನೆಯೇ? 2004ರಲ್ಲಿ ಶಾಸಕರಾದ ಬಳಿಕ ರೇಣುಕಾಚಾರ್ಯ ಹಣ ನೋಡಿದ್ದಾರೆ. ಶಾಸಕರಾಗುವುದಕ್ಕಿಂತ ಮೊದಲು ರೇಣುಕಾಚಾರ್ಯ ಹೇಗಿದ್ದರು? ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನಾನು ಬಲ್ಲೆ. ಹಾಗಾಗಿ, ಚುನಾವಣೆ ಸಮೀಪಿಸುತ್ತಿರುವ ವೇಳೆ ಈ ರೀತಿ ಹೇಳಿಕೆಗಳನ್ನು ನೀಡುತ್ತ ಒಂದು ಜನಾಂಗವನ್ನು ಓಲೈಸಿಕೊಳ್ಳಲು ಮುಂದಾಗುತ್ತಿದ್ದಾರೆ. ಇದು ಸರಿಯಲ್ಲ ಎಂದರು. ಈ ಹಿಂದೆ ಒಂದೆರಡು ಬಾರಿ ಬೆಂಗಳೂರಿನಲ್ಲಿ ರೇಣುಕಾಚಾರ್ಯ ಸಹಾಯ ಮಾಡಿದ್ದಾರೆ. ಆದರೆ, ಆ ವೇಳೆಯೇ ನಾನು ನಿಮಗೆ ಚುನಾವಣೆಯಲ್ಲಿ ಸಹಾಯ ಮಾಡುವುದಿಲ್ಲ. ನಾನು ಕಾಂಗ್ರೆಸ್‌ ಪಕ್ಷದಲ್ಲಿ ಮತ್ತು ಡಿ.ಜಿ. ಶಾಂತನಗೌಡ ಅವರ ಬೆಂಬಲಿಗನಾದ್ದರಿಂದ ನಿಮ್ಮ ಪಕ್ಷ ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದೆ ಎಂದು ತಿಳಿಸಿದರು.

ಕೊರೊನಾ ಸಂದರ್ಭದಲ್ಲಿ ನಾನು ಹಾಗೆ ಮಾಡಿದ್ದೆ, ಹೀಗೆ ಮಾಡಿದ್ದೆ ಎಂದು ರೇಣುಕಾಚಾರ್ಯ ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ. ಒಬ್ಬ ಶಾಸಕರಾಗಿ ಏನು ಕೆಲಸ ಮಾಡಬೇಕೋ ಅದನ್ನು ಮಾಡಿದ್ದಾರೆ. ಆದರೆ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಕುರಿತು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮಾಜಿ ಶಾಸಕ ಡಿ.ಜಿ. ಶಾಂತನಗೌಡ ತಹಸೀಲ್ದಾರ್‌ ವಿರುದ್ಧ ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ. ಆದರೆ, ಕುಂಚಿಟಿಗ ಸಮಾಜದ ಓರ್ವ ಹೆಣ್ಣುಮಗಳ ಬಗ್ಗೆ ಮಾಜಿ ಶಾಸಕರು ಅವಹೇಳನ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಹಳ್ಳಿ-ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತ ಸಮಾಜವನ್ನು ತಮ್ಮ , ರಾಜಕೀಯ ಲಾಭಕ್ಕಾಗಿ, ಬಳಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯವರ್ತಿಗಳ ಆವಾಸ ಸ್ಥಾನ ದಾವಣಗೆರೆ ತಾಲೂಕು ಕಚೇರಿ!

ವಕೀಲರಾದ ವೈ.ಜೆ. ರಾಮಚಂದ್ರಪ್ಪ ಮಾತನಾಡಿ, ವಕೀಲರ ಸಂಘದ ಗ್ರಂಥಾಲಯಕ್ಕೆ ರೇಣುಕಾಚಾರ್ಯ ಈ ವರೆಗೆ ಒಂದು ಪುಸ್ತಕವನ್ನೂ ಒದಗಿಸಿಲ್ಲ. ಬೇರೆ ಕ್ಷೇತ್ರಗಳ ಶಾಸಕರು ವಕೀಲರ ಗ್ರಂಥಾಲಯಕ್ಕೆ ನೀಡಿರುವ ಸೌಲಭ್ಯಗಳ ನೋಡಿದರೆ ಸಂತೋಷವಾಗುತ್ತದೆ ಎಂದರು. ತಾಪಂ ಮಾಜಿ ಸದಸ್ಯ ಪೀರ್ಯಾನಾಯ್ಕ ಜಿಪಂ ಮಾಜಿ ಸದಸ್ಯ ಎಂ. ರಮೇಶ್‌, ಅರಕೆರೆ ಗ್ರಾಪಂ ಅಧ್ಯಕ್ಷ ನರಸಗೊಂಡನಹಳ್ಳಿ ಎನ್‌.ಆರ್‌. ಮಂಜುನಾಥ್‌, ಮುಖಂಡರಾದ,ಎಚ್‌.ಬಿ.ಶಿವಯೋಗಿ, ಮಾಸಡಿ ಎಂ.ಎಚ್‌. ಗಜೇಂದ್ರಪ್ಪ, ಗದ್ದಿಗೇಶ್‌, ಕೊನಾಯಕನಹಳ್ಳಿ ಬಸವಲಿಂಗಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.

Latest Videos
Follow Us:
Download App:
  • android
  • ios