Asianet Suvarna News Asianet Suvarna News

ಸಾಮಾನ್ಯರಿಗೆ ಉನ್ನತ ಸ್ಥಾನ ನೀಡುವ ಪಕ್ಷ ಬಿಜೆಪಿ: ಮಾಜಿ ಸಚಿವ ಹಾಲಪ್ಪ ಆಚಾರ್‌

ಜನಸಾಮಾನ್ಯರನ್ನು ಗುರುತಿಸಿ ಉನ್ನತ ಸ್ಥಾನಮಾನ ನೀಡುವ ರಾಷ್ಟ್ರೀಯ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್‌ ಹೇಳಿದರು. 
 

BJP is a party that gives high place to common people Says minister Halappa Achar gvd
Author
First Published Mar 10, 2024, 2:24 PM IST

ಯಲಬುರ್ಗಾ (ಮಾ.10): ಜನಸಾಮಾನ್ಯರನ್ನು ಗುರುತಿಸಿ ಉನ್ನತ ಸ್ಥಾನಮಾನ ನೀಡುವ ರಾಷ್ಟ್ರೀಯ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್‌ ಹೇಳಿದರು. ಪಟ್ಟಣದ ಬುದ್ದ ಬಸವ ಅಂಬೇಡ್ಕರ್ ಭವನದಲ್ಲಿ ತಾಲೂಕು ಬಿಜೆಪಿಯಿಂದ ಆಯೋಜಿಸಿದ್ದ ಯಲಬುರ್ಗಾ ತಾಲೂಕು ಮಂಡಲ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಪಕ್ಷದಿಂದ ಸಾಮಾನ್ಯ ಕಾರ್ಯಕರ್ತ ನಾರಾಯಣಸಾ ಬಾಂಢಗೆ ಅವರಿಗೆ ರಾಜ್ಯಸಭಾ ಸ್ಥಾನ ನೀಡಿದೆ. ಹೀಗೆ ಅನೇಕರಿಗೆ ಉನ್ನತ ಹುದ್ದೆ ನೀಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದರು.

ಯಲಬುರ್ಗಾ ಮಂಡಲದಲ್ಲಿ ಮಾರುತಿ ಗಾವರಾಳ ಆರು ವರ್ಷಗಳ ಕಾಲ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಪಕ್ಷ ವಹಿಸುವ ಎಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಇಂದು ತಾಲೂಕು ಮಂಡಲ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಆತನ ಪರಿಶ್ರಮವೇ ಕಾರಣವಾಗಿದೆ. ಪದವಿಗಾಗಿ ಯಾರೂ ಬೆನ್ನತ್ತಿ ಹೋಗಬಾರದು. ಆದರೆ ನಮ್ಮನ್ನು ಹುಡುಕಿಕೊಂಡು ಪದವಿ ಬರಬೇಕು. ಹೀಗಾಗಿ ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಯತ್ತ ಹೆಚ್ಚು ಗಮನಹರಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಮತ್ತೊಮ್ಮೆ ಪ್ರಧಾನಿ ಮಾಡಬೇಕಾದರೆ ಹಾಲಿ ಸಂಸದ ಸಂಗಣ್ಣ ಕರಡಿ ಅವರ ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ್ ಮಾತನಾಡಿ, ಮುಂಬರುವ ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಯ ಅಭ್ಯರ್ಥಿಗೆ ಅತೀ ಹೆಚ್ಚು ಮತಗಳನ್ನು ಹಾಕುವ, ಹಾಕಿಸುವ ಮೂಲಕ ಪಕ್ಷದ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು ಪಕ್ಷ ನಿಷ್ಠೆಯಿಂದ ಶ್ರಮಿಸಬೇಕು ಎಂದರು. ನೂತನ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ ಅಧಿಕಾರ ಸ್ವೀಕರಿಸಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಬಸವರಾಜ ದಢೇಸ್ಗೂರು, ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಮಂಡಲದ ಮಾಜಿ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್ ಮಾತನಾಡಿದರು.

ಕಾಂಗ್ರೆಸ್ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಸರ್ಕಾರವಾಗಿದೆ: ಸಚಿವೆ ಶೋಭಾ ಕರಂದ್ಲಾಜೆ

ಅತಿಥಿಗಳಾಗಿ ಬಸವಲಿಂಗಪ್ಪ ಭೂತೆ, ಸಿ.ಎಚ್. ಪಾಟೀಲ, ಬಸವರಾಜ ಗೌರಾ, ತಿಪ್ಪೇರುದ್ರಯ್ಯಸ್ವಾಮಿ, ಎಲ್.ಗಿರಿಗೌಡ, ಕೆ.ಮಹೇಶ, ಅರವಿಂದಗೌಡ ಪಾಟೀಲ, ಕಳಕಪ್ಪ ಕಂಬಳಿ, ಶಿವಶಂಕರರಾವ್ ದೇಸಾಯಿ, ಶಂಕ್ರಪ್ಪ ಸುರಪುರ, ಗಾಳೆಪ್ಪ ಓಜನಹಳ್ಳಿ, ಫಕೀರಪ್ಪ ತಳವಾರ, ಶ್ರೀನಿವಾಸ ತಿಮ್ಮಾಪುರ, ಅಮರೇಶ ಹುಬ್ಬಳ್ಳಿ, ಶಿವಪ್ಪ ವಾದಿ, ಶಿವಲೀಲಾ ದಳವಾಯಿ ಇದ್ದರು.

Follow Us:
Download App:
  • android
  • ios