ಡಿವಿಎಸ್ ಭೇಟಿಯಾಗದೆ ಅವಮಾನಿಸಿ ಕಳಿಸಿದ ಬಿಜೆಪಿ ಹೈಕಮಾಂಡ್: ಕಾಂಗ್ರೆಸ್ ಟೀಕೆ
ಕುಮಾರಸ್ವಾಮಿಯವರಿಗೆ ಸುಲಭದಲ್ಲಿ ಸಿಗುವ ಹೈಕಮಾಂಡ್ ಬಿಜೆಪಿ ನಾಯಕರಿಗೆ ಸಿಗದಿರುವುದೇಕೆ? ಕರ್ನಾಟಕದಲ್ಲಿ ಸಾಂವಿಧಾನಿಕ ಹುದ್ದೆಯಾದ ವಿಪಕ್ಷ ನಾಯಕನ ಸ್ಥಾನ ಹಲವು ತಿಂಗಳುಗಳಿಂದ ಖಾಲಿ ಇರುವುದು ಬಿಜೆಪಿಗೆ ಗಂಭೀರ ವಿಷಯವಲ್ಲವೇ ಎಂದು ಕಿಡಿ ಕಾರಿದ ಕಾಂಗ್ರೆಸ್

ಬೆಂಗಳೂರು(ಅ.28): ‘ಯಡಿಯೂರಪ್ಪನವರನ್ನು ಭೇಟಿಯಾಗದೆ ಅವಮಾನಿಸಿ ಕಳಿಸಿದ್ದ ಬಿಜೆಪಿ ಹೈಕಮಾಂಡ್ ಈಗ ಸದಾನಂದಗೌಡರ ಮುಖವನ್ನೂ ನೋಡದೆ ವಾಪಸ್ ಕಳಿಸಿದೆ. ಇಂತಹ ಅವಮಾನ, ತಿರಸ್ಕಾರಗಳಿಗೆ ಒಳಪಟ್ಟರೂ ಸಹಿಸಿಕೊಳ್ಳುತ್ತಿರುವುದು ಗುಲಾಮಗಿರಿಯ ಸಂಕೇತವಲ್ಲವೇ?’ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನೆ ಮಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ‘ರಾಜ್ಯ ಬಿಜೆಪಿಯ ನಾಯಕರು ಕುಮಾರಸ್ವಾಮಿಯವರನ್ನು ಕರೆದುಕೊಂಡು ಹೋಗಿದ್ದರೆ ಕನಿಷ್ಠ ದೆಹಲಿ ನಾಯಕರ ಮುಖವನ್ನಾದರೂ ನೋಡುವ ಸೌಭಾಗ್ಯ ಸಿಗುತ್ತಿತ್ತೇನೋ ಎಂದು ಹೇಳಿದೆ.
ಕಲೆಕ್ಷನ್‌ನಲ್ಲೂ ಸಿದ್ದು, ಡಿಕೆಶಿ ನಡುವೆ ತೀವ್ರ ಸ್ಪರ್ಧೆ: ಸದಾನಂದಗೌಡ
ಯಡಿಯೂರಪ್ಪ ಹಾಗೂ ಸದಾನಂದಗೌಡ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರು. ಇಂತಹವರನ್ನೇ ಅವಮಾನಿಸುತ್ತಿರುವುದರಿಂದ ಬಿಜೆಪಿಗರ ಸ್ವಾಭಿಮಾನಕ್ಕೆ ಧಕ್ಕೆಯಾದಂತೆ ಅಲ್ಲವೇ? ಇಂತಹ ಅವಮಾನ, ತಿರಸ್ಕಾರಗಳಿಗೆ ಒಳಪಟ್ಟರೂ ಸಹಿಸಿಕೊಳ್ಳುತ್ತಿರುವುದು ಗುಲಾಮಗಿರಿಯ ಸಂಕೇತವಲ್ಲವೇ ಎಂದು ಪ್ರಶ್ನಿಸಿದೆ.