ಕಲೆಕ್ಷನ್‌ನಲ್ಲೂ ಸಿದ್ದು, ಡಿಕೆಶಿ ನಡುವೆ ತೀವ್ರ ಸ್ಪರ್ಧೆ: ಸದಾನಂದಗೌಡ
ರಾಜ್ಯದಲ್ಲಿ ಕಲೆಕ್ಷನ್ ಸರ್ಕಾರವಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಕೇವಲ ಅಧಿಕಾರಕ್ಕಾಗಿ ಮಾತ್ರ ಸ್ಪರ್ಧೆ ಇಲ್ಲ. ಕಲೆಕ್ಷನ್‌ಗೂ ತೀವ್ರ ಸ್ಫರ್ಧೆ ನಡೆಯುತ್ತಿದೆ ಎಂದುಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಆಪಾದಿಸಿದ್ದಾರೆ.
ಬೆಂಗಳೂರು (ಅ.21): ರಾಜ್ಯದಲ್ಲಿ ಕಲೆಕ್ಷನ್ ಸರ್ಕಾರವಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಕೇವಲ ಅಧಿಕಾರಕ್ಕಾಗಿ ಮಾತ್ರ ಸ್ಪರ್ಧೆ ಇಲ್ಲ. ಕಲೆಕ್ಷನ್‌ಗೂ ತೀವ್ರ ಸ್ಫರ್ಧೆ ನಡೆಯುತ್ತಿದೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಆಪಾದಿಸಿದ್ದಾರೆ. ದೆಹಲಿ ಈ ಕಲೆಕ್ಷನ್ನಿನ ಕೇಂದ್ರ ಬಿಂದು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದರ ಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ಶುಕ್ರವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ‘ಎಟಿಎಂ ಸರ್ಕಾರದ ಕಲೆಕ್ಷನ್ ವಂಶವೃಕ್ಷ’ ಎಂಬ ಪೋಸ್ಟರ್ ಬಿಡುಗಡೆಗೊಳಿಸಿದ ಬಳಿಕಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಎಲ್ಲ ಕಡೆ ಭ್ರಷ್ಟಾಚಾರ ಪರಿಚಯಿಸುವ ಈ ಪೋಸ್ಟರ್‌ಅಂಟಿಸುವ ಕಾರ್ಯ ನಡೆಯಲಿದೆ. ಇದು ಸಿನಿಮಾ ಆರಂಭದ ಟ್ರೈಲರ್‌ಅಷ್ಟೇ ಎಂದು ಮಾರ್ಮಿಕವಾಗಿ ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬ್ರ್ಯಾಂಡ್ ಸಿಎಂ, ಬ್ರ್ಯಾಂಡ್ ಡಿಸಿಎಂ ಹೇಗೆ ಮಾಡಬೇಕೆಂಬುದಕ್ಕೆ ಇವತ್ತು ರಾಜ್ಯದಲ್ಲಿ ನಡೆ ಯುತ್ತಿರುವ ಎಟಿಎಂ ಸರ್ಕಾರದ ಆಡಳಿತವೇ ಒಂದು ಉದಾಹರಣೆ. ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಉಪಮುಖ್ಯಮಂತ್ರಿಗಳಿಗಿಂತ ಹೆಚ್ಚುಕಲೆಕ್ಷನ್?ಗೆ ಇಳಿದಿದ್ದಾರೆ. ಉಪಮುಖ್ಯಮಂತ್ರಿಗಳು ಮುಖ್ಯಮಂತ್ರಿ ಕುರ್ಚಿ ಎಳೆದುಕೊಳ್ಳಲು ಹೆಚ್ಚು ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇದೊಂದು ಗಂಭೀರ- ಶೋಚನೀಯ ವಿಚಾರ ಎಂದರು. ರಾಜ್ಯದಲ್ಲಿ ಕಲೆಕ್ಷನ್ ಸರ್ಕಾರವಿದೆ. ಅದನ್ನು ಸಾಮಾನ್ಯ ಜನರೂ ತಿಳಿದುಕೊಂಡು ಅದನ್ನು ಅನುಭವಿಸುವಂತಾಗಿದೆ. ಅಭಿವೃದ್ಧಿ ಇಲ್ಲದೆ, ರಸ್ತೆಯ ಹೊಂಡ ಗುಂಡಿಗಳನ್ನೂ ತುಂಬಿಸಲಾಗದ ದುಸ್ಥಿತಿ ರಾಜ್ಯದ್ದು ಎಂದು ಟೀಕಿಸಿದರು.
ಸತ್ತ ಮೇಲೆ ನಮ್ಮ ಹೆಣಗಳು ಬಿಜೆಪಿಗೆ ಹೋಗಲ್ಲ: ಶಾಸಕ ರಾಜು ಕಾಗೆ
ಕಲೆಕ್ಷನ್ ಹಣ ರಾಹುಲ್‌ಗೆ: ದೆಹಲಿ ಕಲೆಕ್ಷನ್ ಕೇಂದ್ರ ಬಿಂದು. ರಾಹುಲ್ ಇದರ ಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ ಎಂದು ಹೇಳಿದರು. ಇಲ್ಲಿ ಕಲೆಕ್ಷನ್ ವಂಶವೃಕ್ಷವನ್ನು ಅನಾವರಣ ಮಾಡಲಾಗಿದೆ. ರಾಷ್ಟ್ರೀಯ ಕಾಂಗ್ರೆಸ್ಸಿನ ಕಲೆಕ್ಷನ್ ನೇತೃತ್ವವನ್ನು ಸುರ್ಜೇವಾಲಾ, ವೇಣುಗೋಪಾಲ್‌ಗೆ ವಹಿಸಿದ್ದಾರೆ. ಲೂಟಿ ಹೊಯುವ ಕಾರ್ಯಯೋಜನೆ ಅಚ್ಚರಿ ತರು ವಂತಿದೆ ಎಂದು ವ್ಯಂಗ್ಯವಾಡಿದ ಅವರು, ಸಿದ್ದರಾಮಯ್ಯರ ಹಣ ಸಂಗ್ರಹ ಅವರ ಮಗ ಯತೀಂದ್ರ ಮತ್ತು ಸ್ವಜಾತಿಯ ಬೈರತಿ ಸುರೇಶ್ ಮೂಲಕ ನಡೆಯುತ್ತದೆ ಎಂದರು. ಗುತ್ತಿಗೆದಾರರಲ್ಲೂ2 ಗುಂಪುಗಳಾಗಿವೆ. ಕೆಂಪಣ್ಣ, ಸಿದ್ದರಾಮಯ್ಯರ ಗುಂಪು. ಇನ್ನೊಂದೆಡೆ ತಂಡ ದೊಡ್ಡದಿದೆ. ಉಪಾಧ್ಯಕ್ಷ ಅಂಬಿಕಾಪತಿ ನೇತೃತ್ವದ ತಂಡವಿದು. ಅವರ ಮನೆಯಲ್ಲೇ ಹಣ ಸಿಕ್ಕಿದೆ. ಪ್ರದೀಪ್, ಪ್ರಹ್ಲಾದ್, ಪ್ರಮೋದ್ ನೇತೃತ್ವದಲ್ಲಿ ಹಣ ಸಂಗ್ರಹ ನಡೆದಿದೆ. ಇವೆಲ್ಲವೂ ರಾಹುಲ್ ಗಾಂಧಿಯವರಿಗೆ ಹೋಗುತ್ತದೆ ಎಂದರು.
ವೀರಶೈವರ ಒಟ್ಟಾಗಿಸಲು ಮಠ-ಮಾನ್ಯ ಮುಂದಾಗಲಿ: ಸಚಿವ ಎಂ.ಬಿ.ಪಾಟೀಲ್
ಸಿಬಿಐ ತನಿಖೆಗೆ ಆಗ್ರಹ: ಐಟಿ ಇಲಾಖೆಯಿಂದ ಮಾತ್ರ ಇದರ ತನಿಖೆ ನಡೆದರೆ ಸಾಲದು. ಇದರ ಬೇರು ಆಳವಾಗಿದೆ. ಕ್ರಿಮಿನಲ್ ಉದ್ದೇಶವನ್ನು ಹೊರಕ್ಕೆ ತರಲು ಸಿಬಿಐ ತನಿಖೆ ಅನಿವಾರ್ಯ. ಇದು ಖಜಾನೆ ಲೂಟಿಯ ವ್ಯವಸ್ಥೆಯಾಗಿದ್ದು, ಇದನ್ನು ಸಿದ್ದರಾಮಯ್ಯನವರು ಸಿಬಿಐ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದರು. ಅಭಿವೃದ್ಧಿ ಆಧರಿತ ಯೋಜನೆಗಳನ್ನು ನೀಡಿಲ್ಲ. ಶಿವಕುಮಾರರು ನಿನ್ನೆ ಕಲೆಕ್ಷನ್ ಮೇಲ್ವಿಚಾರಣೆಗಾಗಿ ಬೆಳಗಾವಿಗೆ ತೆರಳಿದ್ದಾಗಿ ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಎರಡೂ ಗುಂಪುಗಳು ರಾಜ್ಯದ ಬೊಕ್ಕಸವನ್ನು ಪೂರ್ತಿಯಾಗಿ ಲೂಟಿ ಹೊಡೆದಿವೆ ಎಂದು ಸದಾನಂದಗೌಡರು ಟೀಕಿಸಿದರು.ರಾಜ್ಯದಲ್ಲಿ ಒಳ್ಳೆಯ ಗುತ್ತಿಗೆದಾರರಿಗೆ ಅವಕಾಶವಿಲ್ಲ. ನಯಾಪೈಸೆಯೂ ಅಭಿವೃದ್ಧಿಗೆ ಹೋಗುವ ಸಾಧ್ಯತೆ ಇಲ್ಲ. ಇದನ್ನು ಸಾಮಾನ್ಯ ಜನರಿಗೆ ತಿಳಿಸುವ ಕೆಲಸ ಮಾಡಲಿದ್ದೇವೆ. ಹಿಂದೆ ಸುಳ್ಳು ಆರೋಪಗಳನ್ನು ಬಿಜೆಪಿ ವಿರುದ್ಧ ಮಾಡಿದ್ದರು. ಇದರ ಸಮಗ್ರ ತನಿಖೆ ಆಗಲಿ ಎಂದು ಹೇಳಿದರು.