ಬಿಜೆಪಿ ನಮ್ಮ ಖಾತೆಯಲ್ಲಿನ ಹಣ ಫ್ರೀಜ್‌ ಮಾಡಿ, ಕಾಂಗ್ರೆಸ್ ಕುಗ್ಗಿಸಲು ಯತ್ನಿಸುತ್ತಿದೆ : ಸೋನಿಯಾ ಗಾಂಧಿ ಆರೋಪ

ಕಾನೂನುಬಾಹಿರ ಚುನಾವಣಾ ಬಾಂಡ್‌ಗಳ ಮೂಲಕ ಹಣ ಮಾಡಿಕೊಂಡಿರುವ ಬಿಜೆಪಿ, ಚುನಾವಣೆ ವೇಳೆ ಕಾಂಗ್ರೆಸ್‌ ಕುಗ್ಗಿಸಲೆಂದೇ ನಮ್ಮ ಬ್ಯಾಂಕ್‌ ಖಾತೆಯಲ್ಲಿನ ಹಣ ಫ್ರೀಜ್‌ ಮಾಡಿಸಲಾಗಿದೆ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಆರೋಪಿಸಿದರು.

BJP govt freezes money in our account and trying to shrink for Congress Sonia Gandhi allegation sat

ನವದೆಹಲಿ (ಮಾ.21): ದೇಶದಲ್ಲಿರುವ ಚುನಾವಣಾ ಚಂದಾ ಬಾಂಡ್ ಗಳು ಕಾನೂನು ಬಾಹಿರ ಎಂದು ನ್ಯಾಯಾಲಯ ಹೇಳಿದೆ. ಹೆಚ್ಚು ಹಣ ಬಿಜೆಪಿಗೆ ಬಂದಿದೆ. ಜೊತೆಗೆ, ವಿಪಕ್ಷಗಳಿಗೆ ತಮ್ಮ ಖಾತೆಯಲ್ಲಿರುವ ಹಣ ಬಳಕೆ ಮಾಡಲು ಸರ್ಕಾರ ಬಿಡ್ತಾ ಇಲ್ಲ. ಇದು ಕಾಂಗ್ರೆಸ್‌ ಮೇಲೆ ಪರಿಣಾಮ ಬೀರುವುದಿಲ್ಲ. ಇಡೀ ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ ಆರೋಪ ಮಾಡಿದ್ದಾರೆ.

ನವದೆಹಲಿಯಲ್ಲಿ ಕಾಂಗ್ರೆಸ್ ಸಮಿತಿಯಿಂದ ಗುರುವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಚುನಾವಣಾ ಚಂದಾ ಬಾಂಡ್ ಗಳು ಕಾನೂನು ಬಾಹಿರ ಎಂದು ನ್ಯಾಯಾಲಯವೇ ಹೇಳಿದೆ. ಚುನಾವಣಾ ಬಾಂಡ್‌ಗಳಿಂದ ಬಿಜೆಪಿಗೆ ಹೆಚ್ಚು ಹಣ ಬಂದಿದೆ. ವಿಪಕ್ಷಗಳಿಗೆ ತಮ್ಮ ಖಾತೆಯಲ್ಲಿರುವ ಹಣ ಬಳಕೆ ಮಾಡಲು ಸರ್ಕಾರ ಬಿಡ್ತಾ ಇಲ್ಲ. ಸದ್ಯ ಉಂಟಾಗಿರುವ ಈ ಸಮಸ್ಯೆಯು ಕೇವಲ ಕಾಂಗ್ರೆಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ. ಇದು ನಮ್ಮ ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರಲಿದೆ. ಕಾಂಗ್ರೆಸ್ ಪಕ್ಷವನ್ನ ಆರ್ಥಿಕವಾಗಿ ಕುಗ್ಗಿಸಲು ಪ್ರಧಾನಿಯವರಿಂದ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಕೆಲವರನ್ನು ಪದೇಪದೇ ಲಾಂಚ್‌ ಮಾಡಬೇಕು: ರಾಹುಲ್‌ಗೆ ಪ್ರಧಾನಿ ಮೋದಿ ಟಾಂಗ್‌

ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಸ್ಥಗಿತಗೊಳಿಸಲಾಗಿದೆ. ನಮ್ಮ ಖಾತೆಗಳಲ್ಲಿನ ಹಣವನ್ನು ಬಲವಂತವಾಗಿ ತೆಗೆದುಕೊಳ್ಳುತ್ತಿದ್ದಾರೆ. ಈ ಸವಾಲಿನ ನಡುವೆಯೂ ಸಹ, ನಮ್ಮ ಚುನಾವಣಾ ಪ್ರಚಾರದ ಕಾರ್ಯಾ ಚನ್ನಾಗಿಯೇ ಇರಲಿದೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತೇವೆ. ಒಂದೆಡೆ, ಸುಪ್ರೀಂ ಕೋರ್ಟ್‌ನಿಂದ ಅಸಾಂವಿಧಾನಿಕ ಎಂದು ಹೇಳಲಾದ ಎಲೆಕ್ಟೋರಲ್ ಬಾಂಡ್ ಸಮಸ್ಯೆ ಇದೆ. ಎಲೆಕ್ಟೋರಲ್ ಬಾಂಡ್‌ಗಳು ಬಿಜೆಪಿಗೆ ಭಾರಿ ಲಾಭ ಮಾಡಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕ ಅಜೆಯ್ ಮಾಕೇನ್ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ಮೇಲೆ ದಾಳಿಯಾಗಿದೆ. ಚುನಾವಣೆ ನಡೆಸಲು ಹಣ ಇರದಂತೆ ವ್ಯವಸ್ಥೆ ಮಾಡಿದೆ. ನಮ್ಮ ಖಾತೆಯಲ್ಲಿನ ಹಣ ಬಳಕೆಗೆ ನಮ್ಮಗೆ ಅವಕಾಶ ನೀಡುತ್ತಿಲ್ಲ. ಜಾಹೀರಾತು ನೀಡಲು ಸಾಧ್ಯವಾಗುತ್ತಿಲ್ಲ. ಅಭ್ಯರ್ಥಿಗಳಿಗೆ ಹಣ ನೀಡಲು ಸಾಧ್ಯವಾಗುತ್ತಿಲ್ಲ. ಹೀಗೆಲ್ಲ ನಿರ್ಬಂಧ ಹಾಕುವುದಾದ್ರೆ ಚುನಾವಣೆ ಯಾಕೆ ಮಾಡಬೇಕು. ಸೀತರಾಮನ್ ಕೇಸರಿ ಸಮಯದ ನೋಟಿಸ್ ಈಗ ನೀಡಲಾಗುತ್ತಿದೆ ಎಂದರು.

ದನದ ಮಾಂಸ ಮಾರಾಟಕ್ಕೆ ಅಡ್ಡಿಯಾಗುತ್ತದೆಂದು, ಆಸ್ಪತ್ರೆ ರಸ್ತೆಯನ್ನೇ ಒಡೆಸಿದ ಸಂಸದ ಡಿ.ಕೆ. ಸುರೇಶ್: ಮುನಿರತ್ನ ಆರೋಪ

ಹೀಗೆಯೇ ಆದರೆ ಗಾಂಧಿ ಕಾಲದ ವಿಚಾರದಲ್ಲಿ ನೋಟಿಸ್ ನೀಡಬಹುದು. 30-40 ವರ್ಷಗಳ ಹಿಂದಿನ ವಿಷಯಗಳಿಗೆ ನೋಟಿಸ್ ನೀಡಲಾಗುತ್ತದೆ. ಅದು ಚುನಾವಣೆ ಸಂದರ್ಭದಲ್ಲಿ ನೋಟಿಸ್ ನೀಡಿ ಅಕೌಂಟ್ ಫ್ರೀಜ್ ಮಾಡಲಾಗಿದೆ. ಯಾವ ಪಕ್ಷವೂ ಆದಾಯ ತೆರಿಗೆ ಕಟ್ಟುವುದಿಲ್ಲ. ಆದರೆ ಕಾಂಗ್ರೆಸ್‌ಗೆ ಮಾತ್ರ ಯಾಕೆ ನೋಟಿಸ್ ನೀಡಲಾಗುತ್ತಿದೆ. 14.40 ಲಕ್ಷ ರೂ.ತೆರಿಗೆ ಬಾಕಿ ಉಳಿಸಿಕೊಂಡಿದೆ. ಇದಕ್ಕೆ ಕಾಂಗ್ರೆಸ್ ಮೇಲೆ 210 ಕೋಟಿ ರೂ. ದಂಡ ಹಾಕಿದ್ದಾರೆ. ಇದು ಯಾವ ರೀತಿಯ ಪ್ರಜಾಪ್ರಭುತ್ವ ಎಂದು ಅಜೆಯ್ ಮಾಕೇನ್ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios