ಕೆಲವರನ್ನು ಪದೇಪದೇ ಲಾಂಚ್‌ ಮಾಡಬೇಕು: ರಾಹುಲ್‌ಗೆ ಪ್ರಧಾನಿ ಮೋದಿ ಟಾಂಗ್‌

ರಾಜಕಾರಣದಲ್ಲಿ ಕೆಲವು ವ್ಯಕ್ತಿಗಳನ್ನು ಪದೇ ಪದೇ ಲಾಂಚ್‌ ಮಾಡುತ್ತಿರಬೇಕು. ಏಕೆಂದರೆ, ಒಂದು ದಾರಿ ಸರಿ ಇರದಿದ್ದರೆ ಮತ್ತೊಂದು ಹಾದಿಯಲ್ಲಿ ಸಾಗುವ ಸ್ಟಾರ್ಟಪ್‌ ಕಂಪನಿಗಳಂತೆ ಅವರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 

PM Narendra Modi Slams On Congress Leader Rahul Gandhi gvd

ನವದೆಹಲಿ (ಮಾ.21): ರಾಜಕಾರಣದಲ್ಲಿ ಕೆಲವು ವ್ಯಕ್ತಿಗಳನ್ನು ಪದೇ ಪದೇ ಲಾಂಚ್‌ ಮಾಡುತ್ತಿರಬೇಕು. ಏಕೆಂದರೆ, ಒಂದು ದಾರಿ ಸರಿ ಇರದಿದ್ದರೆ ಮತ್ತೊಂದು ಹಾದಿಯಲ್ಲಿ ಸಾಗುವ ಸ್ಟಾರ್ಟಪ್‌ ಕಂಪನಿಗಳಂತೆ ಅವರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ಅವರು ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲವಾದರೂ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಉದ್ದೇಶಿಸಿ ಮೋದಿ ಅವರು ಈ ಲೇವಡಿ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಸ್ಟಾರ್ಟಪ್‌ ಮಹಾಕುಂಭದಲ್ಲಿ ಬುಧವಾರ ಮಾತನಾಡಿದ ಪ್ರಧಾನಿ, ಹಲವಾರು ವ್ಯಕ್ತಿಗಳು ಸ್ಟಾರ್ಟಪ್‌ಗಳನ್ನು ಆರಂಭಿಸುತ್ತಾರೆ. ಆದರೆ ಅಂಥವರ ಸಂಖ್ಯೆ ರಾಜಕಾರಣದಲ್ಲಿ ಹೆಚ್ಚಿದೆ.  ಏಕೆಂದರೆ ಕೆಲವರನ್ನು ಪದೇ ಪದೇ ಲಾಂಚ್ ಮಾಡಬೇಕಾಗಿರುತ್ತದೆ ಎಂದು ಕುಟುಕಿದರು. ಚುನಾವಣೆ ಮುಗಿದ ಬಳಿಕ ತಮ್ಮ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ. ಪೂರ್ಣಾವಧಿ ಬಜೆಟ್‌ ಮಂಡಿಸಲಿದೆ. ಸಾಮಾನ್ಯವಾಗಿ ಚುನಾವಣೆ ಸಂದರ್ಭಗಳಲ್ಲಿ ಇಂತಹ ದೊಡ್ಡ ಕಾರ್ಯಕ್ರಮಗಳನ್ನು ಮುಂದೂಡಲಾಗುತ್ತದೆ. 

Lok Sabha Election 2024: ಕಾಂಗ್ರೆಸ್‌ ಟಿಕೆಟ್‌ ಕೈತಪ್ಪುವ ಆತಂಕದಲ್ಲಿ ಕಣ್ಣೀರಿಟ್ಟ ವೀಣಾ ಕಾಶಪ್ಪನವರ್‌!

ಆದರೆ ಈ ಕಾರ್ಯಕ್ರಮವನ್ನು ಚುನಾವಣೆ ಘೋಷಣೆಯಾದ ಬಳಿಕವೂ ಮಾಡಲಾಗುತ್ತಿದೆ ಎಂದರೆ ಇದು ಬದಲಾವಣೆಯ ಸಂಕೇತ ಎಂದು ಬಣ್ಣಿಸಿದರು. 2014ರಲ್ಲಿ ದೇಶದಲ್ಲಿ ಕೇವಲ 100 ಸ್ಟಾರ್ಟಪ್‌ಗಳು ಇದ್ದವು. ಅವುಗಳ ಸಂಖ್ಯೆ ಈಗ 1.25 ಲಕ್ಷಕ್ಕೇರಿಕೆಯಾಗಿದೆ. 12 ಲಕ್ಷ ಮಂದಿ ನೇರವಾಗಿ ಇವುಗಳ ಜತೆ ತೊಡಗಿಸಿಕೊಂಡಿದ್ದಾರೆ. ಸ್ಟಾರ್ಟಪ್‌ಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ ಎಂದರು.

ಕೈಗಾರಿಕಾ ಹಬ್‌ ಮಾಡ್ತೇವೆ: ಕರ್ನಾಟಕವನ್ನು ನಾವು ಕೃಷಿ ಮತ್ತು ಕೈಗಾರಿಕಾ ಹಬ್‌ ಮಾಡಬೇಕೆಂಬ ಸಂಕಲ್ಪ ಮಾಡಿದ್ದೇವೆ. ಇದು ಕೇವಲ ಒಂದು ಭರವಸೆ ಅಲ್ಲ, ಮೋದಿಯ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಕಲಬುರಗಿಯಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ''ಮೋದಿ ಮತ್ತೊಮ್ಮೆ ಸಂಕಲ್ಪ'' ಸಮಾವೇಶದಲ್ಲಿ ಮಾತನಾಡಿ, ಪಂಚ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಕಾಂಗ್ರೆಸ್‌ ಇಲ್ಲದಿದ್ದರೆ ದೇವೇಗೌಡರನ್ನು ದೇಶ ನೆನೆಸಿಕೊಳ್ತಿರಲಿಲ್ಲ: ಸಂಸದ ಡಿ.ಕೆ.ಸುರೇಶ್‌

ಕರ್ನಾಟಕದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ. ಕರ್ನಾಟಕ ರಾಜ್ಯದ ಕಾಂಗ್ರೆಸ್‌ ಸರ್ಕಾರ ದೆಹಲಿಯ ಎಟಿಎಂ ಆಗಿದೆ. ಪಕ್ಷ, ಪರಿವಾರದ ಖರ್ಚು ವೆಚ್ಚಕ್ಕೆಲ್ಲ ಕರುನಾಡಿನ ಜನರ ಶ್ರಮದ ತೆರಿಗೆ ಹಣವೇ ಬಳಕೆಯಾಗುತ್ತಿದೆ. ರಾಜ್ಯದ ತಿಜೋರಿಯ ಕೀಲಿ ಕೈ ದಿಲ್ಲಿಯವರ ಬಳಿ ಇದೆ ಎಂದು ಆರೋಪಿಸಿದರು. ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸುವಂತೆ ನೋಡಿಕೊಳ್ಳಿ. ಇದೊಂದೇ ಗ್ಯಾರಂಟಿ ನಾನು ನಿಮ್ಮಿಂದ ಬಯಸುತ್ತಿದ್ದೇನೆ. ಈ ಬಾರಿ ಕಾಂಗ್ರೆಸ್‌ ಏನೇ ಅಪಪ್ರಚಾರ, ಸುಳ್ಳುಗಳನ್ನು ಹೇಳಿದರೂ ಕರ್ನಾಟಕದಲ್ಲಿ ಅವರ ಖಾತೆ ತೆರೆಯಬಾರದು ಎಂದರು.

Latest Videos
Follow Us:
Download App:
  • android
  • ios