ದನದ ಮಾಂಸ ಮಾರಾಟಕ್ಕೆ ಅಡ್ಡಿಯಾಗುತ್ತದೆಂದು, ಆಸ್ಪತ್ರೆ ರಸ್ತೆಯನ್ನೇ ಒಡೆಸಿದ ಸಂಸದ ಡಿ.ಕೆ. ಸುರೇಶ್: ಮುನಿರತ್ನ ಆರೋಪ
ಯಶವಂತಪುರದ ರೈಲ್ವೆ ನಿಲ್ದಾಣ ಹಾಗೂ ಹೆರಿಗೆ ಆಸ್ಪತ್ರೆಯ ಸಂಪರ್ಕಕ್ಕಾಗಿ ನಿರ್ಮಿಸಲಾಗಿದ್ದ ರಸ್ತೆಯನ್ನು ದನದ ಮಾಂಸ ಮಾರಾಟಕ್ಕೆ ಅಡ್ಡಿಯಾಗಲಿದೆ ಎಂದುಅನ್ಯ ಕೋಮಿಗೆ ಸೇರಿದ ಸಂಸದ ಡಿ.ಕೆ. ಸುರೇಶ್ ಬೆಂಬಲಿಗರು ಒಡೆದು ಹಾಕಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪ ಮಾಡಿದರು.
ಬೆಂಗಳೂರು (ಮಾ.21): ಯಶವಂತಪುರದ ರೈಲ್ವೆ ನಿಲ್ದಾಣ ಹಾಗೂ ಹೆರಿಗೆ ಆಸ್ಪತ್ರೆಯ ಸಂಪರ್ಕಕ್ಕಾಗಿ ನಿರ್ಮಿಸಲಾಗಿದ್ದ ರಸ್ತೆಯನ್ನು ದನದ ಮಾಂಸ ಮಾರಾಟಕ್ಕೆ ಅಡ್ಡಿಯಾಗಲಿದೆ ಎಂದುಅನ್ಯ ಕೋಮಿಗೆ ಸೇರಿದ ಸಂಸದ ಡಿ.ಕೆ. ಸುರೇಶ್ ಬೆಂಬಲಿಗರು ಒಡೆದು ಹಾಕಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪ ಮಾಡಿದರು.
ಯಶವಂತಪುರ ರೈಲ್ವೆ ನಿಲ್ದಾಣ ಯಾರಿಗೂ ತೊಂದರೆ ಆಗದಂತೆ ಒಂದು ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ, ಈ ರಸ್ತೆಯ ಬಳಿ ಅನ್ಯ ಸಮುದಾಯದವರು ದನದ ಮಾಂಸ ಮಾರಾಟ ಮಾರುಕಟ್ಟೆ ಮಾಡಿಕೊಂಡಿದ್ದಾರೆ. ಈ ರಸ್ತೆಯಲ್ಲಿ ಜನರು ಸಂಚಾರ ಮಾಡಿದರೆ ದನದ ಮಾಂಸ ಮಾರಾಟಕ್ಕೆ ಅಡ್ಡಿಯಾಗುತ್ತದೆಂದು ಸಂಸದ ಡಿ.ಕೆ. ಸುರೇಶ್ ಬೆಂಬಲದಿಂದ ರಸ್ತೆಯನ್ನೇ ಒಡೆದು ಹಾಕಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪ ಮಾಡಿದ್ದು, ಸಂಬಂಧಪಟ್ಟ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಕರ್ನಾಟಕ ಬಿಜೆಪಿಯಲ್ಲಿನ ಜಾತಿವಾದ, ಭ್ರಷ್ಟಾಚಾರ, ಕುಟುಂಬವಾದದ ಶುದ್ಧೀಕರಣ ಮಾಡ್ತೇನೆ: ಸಂಸದ ಸದಾನಂದಗೌಡ!
ರಾಜರಾಜೇಶ್ವರಿ ನಗರದಲ್ಲಿ ಮಾಧ್ಯಮಗಳೊಂದಿಗೆ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಶವಂತಪುರ ರೈಲ್ವೆ ನಿಲ್ದಾಣ ಯಾರಿಗೂ ತೊಂದರೆ ಆಗದಂತೆ ಒಂದು ರಸ್ತೆ ನಿರ್ಮಾಣ ಮಾಡಲಾಗಿತ್ತು.ಇದರಿಂದ ಯಾರಿಗೂ ತೊಂದರೆ ಆಗಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ಈ ರಸ್ತೆಯ ಪಕ್ಕದಲ್ಲಿ ಹೆರಿಗೆ ಆಸ್ಪತ್ರೆ ಮತ್ತು ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಲಾಗಿತ್ತು. ಆದರೆ, ಇದೇ ರಸ್ತೆಯ ಮುಂದೆ ದನದ ಮಾಂಸ ಮಾರಾಟ (ಬೀಫ್ ಮಾರ್ಕೆಟ್) ಇದೆ. ಆ ಬೀಫ್ ಮಾರ್ಕೆಟ್ ನವರು ಡಿಕೆಶಿ ಸುರೇಶ್ ರನ್ನ ಭೇಟಿ ಮಾಡಿ ರಸ್ತೆ ತೆರುವು ಮಾಡಿ ಎಂದು ಮನವಿ ಕೊಟ್ಟಿದ್ದಾರೆ.
ಆರ್.ಆರ್.ನಗರಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿದ ಸಂಸದ ಡಿ.ಕೆ. ಸುರೇಶ್ ಅವರು ದನದ ಮಾಂಸ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದಾರೆ. ಆದರೆ, ಅಧಿಕಾರಿಗಳು ಇದನ್ನ ಮಾಡಲು ಆಗೋದಿಲ್ಲ. ಕಾರಣ ಇದು ಆಸ್ಪತ್ರೆ ರಸ್ತೆ ಎಂದು ಹೇಳ್ತಾರೆ. ಆದರೆ, ನೀತಿ ಸಂಹಿತೆ ಜಾರಿಯಾದ ಬಳಿಕ ದನದ ಮಾಂಸ ವ್ಯಾಪಾರಸ್ಥರು ಜೆಸಿಬಿ ತಗೆದುಕೊಂಡು ಯಾವ ಅಧಿಕಾರಿಗಳು ಇಲ್ಲದಿರುವ ವೇಳೆ ಸದರಿ ರಸ್ತೆಯನ್ನ ಒಡೆದು ಹಾಕಿದ್ದಾರೆ. ಅಲ್ಲದೇ ರಸ್ತೆಗೆ ಅಳವಡಿಲಕೆ ಮಾಡಿದ್ದ ಕಬ್ಬಿಣ ರಾಡ್ ಗಳನ್ನ ಕಳ್ಳತನ ಮಾಡಿದ್ದಾರೆ. ರಸ್ತೆ ಒಡೆದುಹಾಕಿರುವ ವೀಡಿಯೋ ನನ್ನ ಬಳಿಯಿದೆ. ಜೊತೆಗೆ, ಕಾಂಗ್ರೆಸ್ ನಾಯಕ ಹನುಮಂತರಾಯಪ್ಪ ರಸ್ತೆ ಒಡೆಯುವುದನ್ನು ವೀಕ್ಷಣೆ ಮಾಡುವ ಫೋಟೋ ಇದೆ ಎಂದು ವಿಡಿಯೋ ಮತ್ತು ಫೋಟೋ ರಿಲೀಸ್ ಮಾಡಿದರು.
ಲೋಕಸಭಾ ಚುನಾವಣೆ 2024: ಕರ್ನಾಟಕದಲ್ಲಿ 5.85 ಕೋಟಿ ನಗದು ಜಪ್ತಿ
ಮಸೀದಿ ಹೋಗಿ ನಾಮಜ್ ಮಾಡಿ ರಸ್ತೆ ಒಡೆಸೋದು ನಮ್ಮಜವಾಬ್ದಾರಿ ಎಂದು ಕಾಂಗ್ರೆಸ್ ನಾಯಕ ಹನುಮಂತರಾಯಪ್ಪ ರಸ್ತೆ ಒಡೆಸಿ ಹಾಕಿದ್ದಾರೆ. ಕಾಂಗ್ರೆಸ್ ಹೆಚ್ಚು ಮತಕೊಡಿ ನಾವು ಒಡೆಸಿಕೊಡ್ತೀವಿ ಎಂದು ಅವರಿಗೆ ಮಾತು ಕೊಟ್ಟಿದ್ದಾರೆ. ರೈಲ್ವೆ ಸ್ಟೇಷನ್ ಮತ್ತು ಆಸ್ಪತ್ರೆಗೆ ಹೋಗೋದಕ್ಕಿಂತ ಇವರಿಗೆ ದನದ ಮಾಂಸದ ಆಂಗಡಿಗಳಿಗೆ ಮುಖ್ಯವಾಯ್ತಾ? ಒಂದು ಕೋಮಿನ ಒಲೈಕೆಗಾಗಿ ಇವರು ಈ ರೀತಿ ಮಾಡಿದ್ದಾರೆ ಎಂದು ಶಾಸಕ ಮುನಿರತ್ನ ಅವರು ಆರೋಪ ಮಾಡಿದರು.