Asianet Suvarna News Asianet Suvarna News

ನಾಲ್ಕು ತಿಂಗಳ ತಡೀರಿ, ನಮ್ದೇ ಸರ್ಕಾರ ಬರ್ತದ ನಿಮಗೆಲ್ಲಾ ಸಹಾಯ ಮಾಡ್ತೀನಿ; ರೈತರಿಗೆ ಎಚ್‌ಡಿಕೆ ಅಭಯ

ಪಂಚರತ್ನ ಯಾತ್ರೆಯಲ್ಲಿರುವ ಅವರು ತಿಳಿಗೊಳ ಹಾಗೂ ಹೊನ್ನಕಿರಣಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಕ್ಕು ಪತ್ರ ವಿತರಣೆ ಎಂದು ಪ್ರಧಾನಿ ಬರೋದಾದರೆ ಸಚಿವರು, ಶಾಸಕರು ಯಾಕಿರಬೇಕು? ಬೆಳೆ ಹಾಳಾಗಿ ರೈತರು ಅಳುತ್ತಿರೋವಾಗ ಮೋದಿ ಅದ್ಯಾವ ಮುಖದೊಂದಿಗೆ ಇಲ್ಲಿಗೆ ಬರ್ತಾರೆ ಎಂದು ಪ್ರಶ್ನಿಸಿದರು.

BJP government invits PM Modi even for a small meeting say hdk at kalaburagi rav
Author
First Published Jan 13, 2023, 7:00 AM IST

ಕಲಬುರಗಿ (ಜ.13) : ಬಿಜೆಪಿಗೆ ಜನರ ಮುಂದೆ ಹೇಳಿಕೊಳ್ಳಲು ಯಾವುದೇ ದೊಡ್ಡ ವಿಷಯಗಳಿಲ್ಲ. ಹೀಗಾಗಿ ಅವರು ಸಣ್ಣಪುಟ್ಟಸಮಾರಂಭಗಳಿಗೂ ಪ್ರಧಾನಿಯನ್ನು ಕರೆದು ಆ ಹುದ್ದೆಯ ಘನತೆಯನ್ನೇ ಕೆಳಗಿಳಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಪಂಚರತ್ನ ಯಾತ್ರೆ(Pancharatna yatre)ಯಲ್ಲಿರುವ ಅವರು ತಿಳಿಗೊಳ ಹಾಗೂ ಹೊನ್ನಕಿರಣಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಕ್ಕು ಪತ್ರ ವಿತರಣೆ ಎಂದು ಪ್ರಧಾನಿ ಬರೋದಾದರೆ ಸಚಿವರು, ಶಾಸಕರು ಯಾಕಿರಬೇಕು? ಬೆಳೆ ಹಾಳಾಗಿ ರೈತರು ಅಳುತ್ತಿರೋವಾಗ ಮೋದಿ ಅದ್ಯಾವ ಮುಖದೊಂದಿಗೆ ಇಲ್ಲಿಗೆ ಬರ್ತಾರೆ ಎಂದು ಪ್ರಶ್ನಿಸಿದರು.

Pancharatna Rath Yatra: ಕಲ್ಯಾಣ ಕರ್ನಾಟಕಕ್ಕೇ ಬರುತ್ತಿರುವ ಅನುದಾನ ಎಲ್ಲಿ ಹೋಗುತ್ತಿದೆ?: ಎಚ್‌ಡಿಕೆ ಪ್ರಶ್ನೆ

ಸಾವಿನ ದಾರಿ ತುಳಿಯದಿರಿ: ‘ನಮಗ ಸ್ವಂತ ಹೊಲ ಇಲ್ಲ, ಬ್ಯಾರೆಯವರದ್ದು. ಎಕರೆಗೆ 12 ಸಾವಿರದ್ಹಂಗ ಕಡಿ (ಲೀಸ್‌) ಹಾಕ್ಕೊಂಡೀವಿ, ಬಿತ್ತಿದ ಬೆಳಿ ಬರ್ಲಿ, ಬಿಡ್ಲಿ ನಾವು ಯಜಮಾನಗ ಮಾತಿನಂಗ ದುಡ್ಡ ಕೊಡಬೇಕ್ರಿ. ನೆಟೆ ರೋಗಕ್ಕ ತೊಗರಿ ಹಾಳಾಗ್ಯದ. ಯಾನ್‌ ಮಾಡೋಣ, ನಮ್ಮ ಗೋಳು ಕೇಳೋರಿಲ್ಲ..’ಹೀಗೆಂದು ಹೊನ್ನಕಿರಣಗಿ, ತಿಳಗೂಳ ರೈತ ಮಹಿಳೆಯರು ಗುಂಪಾಗಿ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಕಂಡು ತಮ್ಮ ಗೋಳು ತೋಡಿಕೊಂಡರು.

‘ನಾಲ್ಕು ತಿಂಗಳ ತಡೀರಿ, ನಮ್ದೇ ಸರ್ಕಾರ ಬರ್ತದ. ನಿಮಗೆಲ್ಲಾ ಸಹಾಯ ಆಗೋ ತರಹ ಮಾಡ್ತೀನಿ, ನೆಟೆರೋಗಕ್ಕೆ ಪರಿಹಾರ ನೀಡೋದು ನಿಶ್ಚಿತ, ಆತ್ಮಹತ್ಯೆ ಬೇಡ, ಒಳ್ಳೆ ದಿನಗಳಿಗೆ ಕಾಯಿರಿ ಎಂದು ರೈತರಿಗೆ ಕುಮಾರಸ್ವಾಮಿ ಅಭಯ ನೀಡಿದರು. ಗುರುವಾರ ಯಾತ್ರೆಯ ದಿನಾಂತ್ಯಕ್ಕೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ಎಚ್‌.ಡಿ.ಕುಮಾರ ಸ್ವಾಮಿ ವಾಸ್ತವ್ಯ ಹೂಡಿದರು.

ಕನ್ನಡ ಏನು ತಬ್ಬಲಿ ಮಕ್ಕಳ ಭಾಷೆಯೇ?: ಎಚ್‌ಡಿಕೆ ಕಿಡಿ

ಜ.17ರಿಂದ ಪಂಚರತ್ನ 3ನೇ ಹಂತ

ಸಂಕ್ರಾಂತಿ ನಂತರದ ಜ.17ರಿಂದ ಸಿಂದಗಿಯಿಂದಲೇ ರಥಯಾತ್ರೆ 3ನೇ ಹಂತ ಶುರುವಾಗಲಿದ್ದು, ಮಾಚ್‌ರ್‍ 20ರವರೆಗೆ ನಿರಂತರವಾಗಿ ರಥಯಾತ್ರೆ ನಡೆಯಲಿದೆ ಎಂದ ಅವರು, ಉತ್ತರ ಕರ್ನಾಟಕದಲ್ಲಿ ಈ ಬಾರಿ ಕನಿಷ್ಠ 35 ಕ್ಷೇತ್ರ ಗೆಲ್ಲುವ ಗುರಿ ಹೊಂದಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios