ಬೆಂಗಳೂರು/ರಾಣೆಬೆನ್ನೂರು, (ನ.15): ರಾಜ್ಯದ 15 ವಿಧಾಸಭಾ ಉಪಚುನಾವಣೆಗೆ ಬಿಜೆಪಿಯ ಅಂತಿಮ ಪಟ್ಟಿ ಪ್ರಕಟವಾಗಿದೆ. ಇಲ್ಲಿಯವರೆಗೆ 14 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದ ಬಿಜೆಪಿ, ಇಂದು [ಶುಕ್ರವರ] 3ನೇ ಪಟ್ಟಿಯಲ್ಲಿ ರಾಣೇಬೆನ್ನೂರು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ.

ಅನರ್ಹ ಶಾಸಕ. ಆರ್. ಶಂಕರ್ ಅವರಿಗೆ ಎಂಎಲ್ ಸಿ ಮಾಡಿ ಮಂತ್ರಿ ಮಾಡಲಾಗುವುದು ಎಂದು ಬಿಎಸ್ ವೈ ಹೇಳಿದ್ದು, ಬಳಿಕ ರಾಣೇಬೆನ್ನೂರು ಟಿಕೆಟ್ ಅನ್ನು ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಗೆ ಟಿಕೆಟ್ ಫಿಕ್ಸ್ ಎನ್ನಲಾಗಿತ್ತು. 

ಆದ್ರೆ, ಇದೀಗ ಬಿಜೆಪಿ ವರಸೆ ಬದಲಿಸಿದ್ದು, ಇಬ್ಬರ ನಡುವೆ ಅರುಣ್ ಕುಮಾರ್ ಪೂಜಾರಿ [ಗುತ್ತೂರು] ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಬಿಜೆಪಿ ಸೇರಿದ ಅನರ್ಹರ ಶಾಸಕರೆಲ್ಲರಿಗೂ ಟಿಕೆಟ್ ನೀಡುತ್ತೇವೆಂದು ಬಿಎಸ್​ವೈ ಹೇಳಿದ್ದರೂ,​ ರಾಣೆಬೆನ್ನೂರು ಕ್ಷೇತ್ರದಲ್ಲಿ ಆರ್​ ಶಂಕರ್​ ಅವರಿಗೆ ಮಾತ್ರ ಟಿಕೆಟ್​ ನೀಡಿರಲಿಲ್ಲ.

ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಅನರ್ಹ ಶಾಸಕ ಆರ್. ಶಂಕರ್!

ಟಿಕೆಟ್​ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆರ್​ ಶಂಕರ್​ ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪ ಮನೆಗೆ ಬೆಂಬಲಿಗರೊಂದಿಗೆ ಮುತ್ತಿಗೆ ಹಾಕಿ ಪ್ರಶ್ನಿಸಿದರು.ಈ ವೇಳೆ ಸಿಎಂರೊಂದಿಗೆ ಗೌಪ್ಯ ಮಾತುಕತೆ ನಡಸಿದ ಆರ್​ ಶಂಕರ್​ ಕ್ಷೇತ್ರದ ಟಿಕೆಟ್​ ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ.

ಯಡಿಯೂರಪ್ಪ ಅವರಿಗಾಗಿ ತಾವು ಕ್ಷೇತ್ರದ ಟಿಕೆಟ್​ ತ್ಯಾಗ ಮಾಡುತ್ತಿದ್ದು, ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು.ಮೂಲಗಳ ಪ್ರಕಾರ ಈ ಕ್ಷೇತ್ರದ ಟಿಕೆಟ್​ಗೆ ಸಚಿವ ಕೆಎಸ್​ ಈಶ್ವರಪ್ಪ ಕೂಡ ಲಾಬಿ ನಡೆಸಿದ್ದರು. ತಮ್ಮ ಮಗ ಕೆ.ಇ ಕಾಂತೇಶ್​ಗೆ ಟಿಕೆಟ್​ ನೀಡಬೇಕು ಎಂದು ಅವರು ಪಟ್ಟು ಹಿಡಿದಿದ್ದರು. 

ಅನರ್ಹ ಶಾಸಕಗೆ ಇಲ್ಲ ಬಿಜೆಪಿ ಟಿಕೆಟ್ : ಈಶ್ವರಪ್ಪ ಪುತ್ರನ ಕಣಕ್ಕಿಳಿಸಲು ಪ್ಲಾನ್

ಆದರೆ, ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರಿಬ್ಬರೂ ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ  ಬಂದಿತು. ಈ ಹಿನ್ನೆಲೆ ಹೈಕಮಾಂಡ್​ ಈಶ್ವರಪ್ಪ ಮಗನಿಗೂ ಟಿಕೆಟ್​ ನೀಡದೇ ರಾಣೇಬೆನ್ನೂರು ಸ್ಥಳೀಯ ನಾಯಕ ಅರುಣ್​ ಕುಮಾರ್​ ಪೂಜಾರ್​ಗೆ ಮಣೆ ಹಾಕಿದೆ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

ನವೆಂಬರ್ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: