ಅನರ್ಹ ಶಾಸಕಗೆ ಇಲ್ಲ ಬಿಜೆಪಿ ಟಿಕೆಟ್ : ಈಶ್ವರಪ್ಪ ಪುತ್ರನ ಕಣಕ್ಕಿಳಿಸಲು ಪ್ಲಾನ್
ರಾಣೇಬೆನ್ನೂರು ಕ್ಷೇತ್ರದಿಂದ ಅನರ್ಹ ಶಾಸಕ ಆರ್. ಶಂಕರ್ ಗೆ ಬಿಜೆಪಿ ಟಿಕೆಟ್ ಸಿಗುವುದು ಅನುಮಾನವಾಗಿದ್ದು, ಸಚಿವರ ಪುತ್ರಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ.
ರಾಣೆಬೆನ್ನೂರು [ನ.14]: ರಾಜ್ಯದಲ್ಲಿ ಅನರ್ಹರಾದ ಶಾಸಕರ 15 ಕ್ಷೇತ್ರಗಳಿಗೆ ಚುನಾವಣೆ ನಿಧಿಯಾಗಿದೆ. 15 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ರಾಜಕೀಯ ಚಟುವಟಿಕೆಗಳು ಬಿರುಸಾಗಿದೆ.
ಇತ್ತ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಲ್ಲಿ ಕೆಪಿಜೆಪಿಯಿಂದ ಆಯ್ಕೆಯಾಗಿದ್ದ ಶಂಕರ್ ಅನರ್ಹತೆ ಚುನಾವಣೆ ನಡೆಯುತ್ತಿದ್ದು, ಇಲ್ಲಿ ಬಿಜೆಪಿ ಅಭ್ಯರ್ಥಿ ಇನ್ನೂ ಫೈನಲ್ ಆಗಿಲ್ಲ.
ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿ ರಾಜ್ಯದ 17 ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದಿದ್ದು, ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಅವಕಾಶ ನೀಡಿದೆ.
ಆದರೆ ರಾಣೆಬೆನ್ನೂರು ಮುಖಂಡ ಆರ್. ಶಂಕರ್ ಸ್ಪರ್ಧೆ ಡೌಟ್ ಆಗಿದೆ. ಬಿಜೆಪಿ ಸೇರಿದರೂ ಕೂಡ ಶಂಕರ್ ಗೆ ಬಿಜೆಪಿ ಟಿಕೆಟ್ ಸಿಗೋದು ಅನುಮಾನವಾಗಿದೆ.
ಸುಪ್ರೀಂಕೋರ್ಟನಿಂದ ತಮ್ಮ ಅನರ್ಹತೆ ರದ್ದಾಗುತ್ತದೆ ಎಂದಿದ್ದ ಶಂಕರ್ ನಿರೀಕ್ಷೆ ಹುಸಿಯಾಗಿದ್ದು, ಅವರು ಚುನಾವಣೆ ಎದುರಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಬಿಜೆಪಿ ಹೈ ಕಮಾಂಡ್ ಗಮನಕ್ಕೆ ತಂದಿದ್ದು, ಪರಿಷತ್ ಸ್ಥಾನ ನೀಡುವ ಮೂಲಕ ಮತ್ತೊಬ್ಬರಿಗೆ ಟಿಕೆಟ್ ನೀಡಲು ಬಿಜೆಪಿ ಪ್ಲಾನ್ ಮಾಡುತ್ತಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇತ್ತ ಕ್ಷೇತ್ರದ ಟಿಕೆಟ್ ಪಡೆಯಲು ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಲಾಬಿ ಮಾಡುತ್ತಿದ್ದು, ಕುರುಬ ಮತದಾರರ ಸಂಖ್ಯೆ ಹೆಚ್ಚಿದ್ದು ಈ ನಿಟ್ಟಿನಲ್ಲಿ ಶಂಕರ್ ಹಿಂದೆ ಸರಿದರೆ ಕಾಂತೇಶ್ ಗೆ ಲಾಭವಾಗುವ ಸಾಧ್ಯತೆ ಇದೆ.