Asianet Suvarna News Asianet Suvarna News

Assets Of Political Parties : 7 ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಪಕ್ಷದ ಆಸ್ತಿಯೇ ಗರಿಷ್ಠ!

ಬಿಜೆಪಿಯ ಒಟ್ಟು ಆಸ್ತಿ 4,847.78 ಕೋಟಿ
7 ರಾಷ್ಟ್ರೀಯ ಪಕ್ಷಳ ಪೈಕಿ ಬಿಜೆಪಿಯ ಆಸ್ತಿಯೇ ಅಧಿಕ
ಪ್ರಜಾಪ್ರಭುತ್ವ ಸುಧಾರಣೆಗಳ ಸಂಘಟನೆ  ವರದಿಯಲ್ಲಿ ಬಹಿರಂಗ

BJP declared assets worth Rs 4847 crore in the financial year 2019 and 20 highest among all political parties san
Author
Bengaluru, First Published Jan 29, 2022, 12:33 AM IST

ನವದೆಹಲಿ (ಜ. 28): 2019-20ನೇ ಹಣಕಾಸು ವರ್ಷದಲ್ಲಿ (financial year 2019 and 20) ಬಿಜೆಪಿ (BJP) 4,847.78 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು(assets ) ಘೋಷಿಸಿದೆ, ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಇದು ಅತ್ಯಧಿಕವಾಗಿದೆ. ನಂತರದ ಸ್ಥಾನದಲ್ಲಿ ಬಿಎಸ್‌ಪಿ (698.33 ಕೋಟಿ ರೂ.) ಮತ್ತು ಕಾಂಗ್ರೆಸ್ (588.16 ಕೋಟಿ ರೂ.) ಪಕ್ಷವಿದೆ. ಚುನಾವಣಾ ಸುಧಾರಣೆಗಳ ಅಡ್ವೊಕಸಿ ಗ್ರೂಪ್ ಅಸೋಸಿಯೇಷನ್ ಪ್ರಜಾಪ್ರಭುತ್ವ ಸುಧಾರಣೆಗಳ ಸಂಘಟನೆ  (ADR) ಪ್ರಕಾರ, ಅದರ ವರದಿಯು 2019-20ರಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಆಸ್ತಿ ಮತ್ತು ಸಾಲ ಬಾಧ್ಯತೆಗಳ ವಿಶ್ಲೇಷಣೆಯನ್ನು ಆಧರಿಸಿದೆ.

 ವಿಶ್ಲೇಷಣೆಯ ಪ್ರಕಾರ, ಆರ್ಥಿಕ ವರ್ಷದಲ್ಲಿ ಏಳು ರಾಷ್ಟ್ರೀಯ ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಆಸ್ತಿ ಕ್ರಮವಾಗಿ 6,988.57 ಕೋಟಿ ಮತ್ತು 2,129.38 ಕೋಟಿ ರೂಪಾಯಿ ಆಗಿದೆ. ಏಳು ರಾಷ್ಟ್ರೀಯ ಪಕ್ಷಗಳ ಪೈಕಿ ಗರಷ್ಠ ಆಸ್ತಿಯನ್ನು ಘೋಷಣೆ ಮಾಡಿರುವ ಪಕ್ಷ ಬಿಜೆಪಿ ಆಗಿದೆ. ಭಾರತೀಯ ಜನತಾ ಪಕ್ಷವು 4847.78 ಕೋಟಿ ರೂಪಾಯಿ ಅಂದರೆ ಶೇ. 69.37ರಷ್ಟು ಆಸ್ತಿಯನ್ನು ಹೊಂದಿದೆ. ಬಳಿಕ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷವಿದ್ದು ಶೇ.9.99ರಷ್ಟು ಪಾಲು ಹೊಂದಿದೆ. ಕಾಂಗ್ರೆಸ್ ಪಕ್ಷವು 588.16 ಕೋಟಿಯೊಂದಿಗೆ ಶೇ.8.42ರಷ್ಟು ಪಾಲು ಹೊಂದಿದೆ ಎಂದು ಎಡಿಆರ್ (Association for Democratic Reforms) ವರದಿ ಹೇಳಿದೆ.

ಇನ್ನು ಪ್ರಾದೇಶಿಕ ಪಕ್ಷಗಳ ಪೈಕಿ ಗರಿಷ್ಠ ಆಸ್ತಿ ಹೊಂದಿರುವ ಪಕ್ಷ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ (Samajwadi Party ). ಸಮಾಜವಾದಿ ಪಾರ್ಟಿ ಒಟ್ಟು 563.47 ಕೋಟಿ ರೂಪಾಯಿ (ಶೇ.26.46) ಆಸ್ತಿ ಹೊಂದಿದ್ದರೆ, ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ, ತೆಲಂಗಾಣದ ಟಿಆರ್ ಎಸ್ (TRS) ಇದ್ದು 301.47 ಕೋಟಿ ರೂಪಾಯಿ ಆಸ್ತಿ ಹೊಂದಿದೆ. ತಮಿಳುನಾಡಿನ ಎಐಡಿಎಂಕೆ (AIDMK) ಪಕ್ಷವು 267.61 ಕೋಟಿ ರೂಪಾಯಿಯೊಂದಿಗೆ ಮೂರನೇ ಸ್ಥಾನದಲ್ಲಿದೆ.
 


ಫಿಕ್ಸ್ ಡೆಪಾಸಿಟ್/ಎಫ್ ಡಿಆರ್ ಗಳು ಬಹುತೇಕ ಪಕ್ಷಗಳ ಆಸ್ತಿಯಲ್ಲಿ ಗರಿಷ್ಠ ಪ್ರಮಾಣದ ಪಾಲು ಹೊಂದಿದೆ. ಒಟ್ಟಾರೆ 44 ಪ್ರಾದೇಶಿಕ ಪಕ್ಷಗಳು ಘೋಷಣೆ ಮಾಡಿರುವ ಒಟ್ಟು ಆಸ್ತಿಯಲ್ಲಿ 1639.51 ಕೋಟಿ ರೂಪಾಯಿ ಮೊತ್ತವನ್ನು ಫಿಕ್ಸಡ್ ಡೆಪಾಸಿಟ್ ಆಗಿ ಇರಿಸಿವೆ. ಇನ್ನು ಬಿಜೆಪಿ ಪಕ್ಷವು 3253 ಕೋಟಿ ರೂಪಾಯಿಯನ್ನು ಫಿಕ್ಸ್ ಡೆಪಾಸಿಟ್/ಎಫ್ ಡಿಆರ್ ಆಗಿ ಇರಿಸಿದ್ದರೆ, ಬಿಎಸ್ ಪಿ 619 ಕೋಟಿ ರೂಪಾಯಿ ಹಾಗೂ ಕಾಂಗ್ರೆಸ್ ಪಕ್ಷವು 241 ಕೋಟಿ ರೂಪಾಯಿಯನ್ನು ಫಿಕ್ಸ್ ಡೆಪಾಸಿಟ್/ಎಫ್ ಡಿಆರ್ ಆಗಿ ಇರಿಸಿವೆ.

ರಾಷ್ಟ್ರೀಯ ಪಕ್ಷಗಳಿಗೆ ಅನಾಮಧೇಯರಿಂದ 3,370 ಕೋಟಿ ರೂ ದೇಣಿಗೆ!
ಪ್ರಾದೇಶಿಕ ಪಕ್ಷಗಳ ಪೈಕಿ ಎಸ್‌ಪಿ (435 ಕೋಟಿ ರೂ.), ಟಿಆರ್‌ಎಸ್ (256.01 ಕೋಟಿ ರೂ.), ಎಐಎಡಿಎಂಕೆ (ರೂ. 246.90 ಕೋಟಿ), ಡಿಎಂಕೆ (ರೂ. 162.425 ಕೋಟಿ), ಶಿವಸೇನೆ (ರೂ. 148.46 ಕೋಟಿ), ಬಿಜೆಡಿ (ರೂ. 118.425 ಕೋಟಿ) ಎಫ್‌ಡಿಆರ್/ಫಿಕ್ಸೆಡ್ ಡೆಪಾಸಿಟ್‌ಗಳ ಅಡಿಯಲ್ಲಿ ಅತ್ಯಧಿಕ ಆಸ್ತಿಗಳನ್ನು ಘೋಷಣೆ ಮಾಡಿದ ಪಕ್ಷಗಳಾಗಿವೆ.  2019-20ನೇ ಹಣಕಾಸು ವರ್ಷದಲ್ಲಿ ಏಳು ರಾಷ್ಟ್ರೀಯ ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಸಾಲ ಬಾಧ್ಯತೆಗಳು 134.93 ಕೋಟಿ ರೂ.ಆಗಿದೆ. ರಾಷ್ಟ್ರೀಯ ಪಕ್ಷಗಳು 74.27 ಕೋಟಿ ರೂ.ಗಳ ಒಟ್ಟು ಸಾಲ ಬಾಧ್ಯತೆಗಳನ್ನು ಘೋಷಿಸಿದರೆ, ಪ್ರಾದೇಶಿಕ ಪಕ್ಷಗಳು ಒಟ್ಟು 60.66 ಕೋಟಿ ರೂಪಾಯಿ ಘೋಷಣೆ ಮಾಡಿವೆ. 

ಕಾಂಗ್ರೆಸ್ ತೊರೆದವರು ಹೆಚ್ಚು, ಬಿಜೆಪಿ ಸೇರಿದವರು ಮತ್ತಷ್ಟು; 2014-21ರ ವಲಸೆ ನಾಯಕರ ಅಧ್ಯಯನ ವರದಿ!
ಕಳೆದ ವರ್ಷ ರಾಷ್ಟ್ರೀಯ ಪಕ್ಷಗಳಿಗೆ ಅನಾಮಧೇಯರಿಂದ ಬಂದ ದೇಣಿಗೆಗಳ ವರದಿಯನ್ನೂ ಕೂಡ ಎಡಿಆರ್ ಬಹಿರಂಗ ಮಾಡಿತ್ತು. ರಾಷ್ಟ್ರೀಯ ಪಕ್ಷಗಳು 2019​-20ನೇ ಸಾಲಿನ ಹಣಕಾಸು ವರ್ಷದಲ್ಲಿ ಅನಾಮಧೇಯ ಮೂಲದಿಂದ 3,377 ಕೋಟಿ ರು. ದೇಣಿಗೆ ಸಂಗ್ರಹಿಸಿವೆ. ಇದು ಒಟ್ಟು ಆದಾಯದಲ್ಲಿ ಶೇ. ಶೇ.70.98ರಷ್ಟಾಗಿದೆ ಎಂದು ಹೇಳಿತ್ತು. ಅನಾಮಧೇಯ ಮೂಲದಿಂದ ಬಿಜೆಪಿಗೆ 2,642 ಕೋಟಿ ರು., ಕಾಂಗ್ರೆಸ್‌ಗೆ 526 ಕೋಟಿ ರು. ದೇಣಿಗೆ ಬಂದಿದೆ. 2004ರಿಂದ 2020ರ ಅವಧಿಯಲ್ಲಿ ರಾಜಕೀಯ ಪಕ್ಷಗಳು ಅನಾಮಧೇಯ ಮೂಲದಿಂದ 14,651 ಕೋಟಿ ರು. ಸಂಗ್ರಹಿಸಿವೆ ಎಂದು ವರದಿ ಹೇಳಿತ್ತು.

Follow Us:
Download App:
  • android
  • ios