* ರಾಷ್ಟ್ರೀಯ ಪಕ್ಷಗಳಿಗೆ ಅನಾಮಧೇಯ* ಮೂಲದಿಂದ 3,370 ಕೋಟಿ ದೇಣಿಗೆ* ಒಟ್ಟು ಅದಾಯದಲ್ಲಿ ಅನಾಮಧೇಯ ಪಾಲೇ ಶೇ.71ರಷ್ಟು* ಬಿಜೆಪಿಗೆ 2642 ಕೋಟಿ, ಕಾಂಗ್ರೆಸ್‌ಗೆ 526 ಕೋಟಿ ಆದಾಯ

ನವದೆಹಲಿ(ಸೆ.01): ರಾಷ್ಟ್ರೀಯ ಪಕ್ಷಗಳು 2019​-20ನೇ ಸಾಲಿನ ಹಣಕಾಸು ವರ್ಷದಲ್ಲಿ ಅನಾಮಧೇಯ ಮೂಲದಿಂದ 3,377 ಕೋಟಿ ರು. ದೇಣಿಗೆ ಸಂಗ್ರಹಿಸಿವೆ. ಇದು ಒಟ್ಟು ಆದಾಯದಲ್ಲಿ ಶೇ. ಶೇ.70.98ರಷ್ಟಾಗಿದೆ ಎಂದು ಪ್ರಜಾಪ್ರಭುತ್ವ ಸುಧಾರಣೆಗಳ ಸಂಘಟನೆ (ಎಡಿಆರ್‌)ನ ವರದಿ ತಿಳಿಸಿದೆ.

ಅನಾಮಧೇಯ ಮೂಲದಿಂದ ಬಿಜೆಪಿಗೆ 2,642 ಕೋಟಿ ರು., ಕಾಂಗ್ರೆಸ್‌ಗೆ 526 ಕೋಟಿ ರು. ದೇಣಿಗೆ ಬಂದಿದೆ. 2004ರಿಂದ 2020ರ ಅವಧಿಯಲ್ಲಿ ರಾಜಕೀಯ ಪಕ್ಷಗಳು ಅನಾಮಧೇಯ ಮೂಲದಿಂದ 14,651 ಕೋಟಿ ರು. ಸಂಗ್ರಹಿಸಿವೆ ಎಂದು ವರದಿ ಹೇಳಿದೆ.

ಆದಾಯ ತೆರಿಗೆ ಪಾವತಿ ವೇಳೆ ದೇಣಿಗೆ ನೀಡಿದ ವ್ಯಕ್ತಿಗಳ ವಿವರವನ್ನು ಬಹಿರಂಗ ಪಡಿಸದೇ ಘೋಷಿಸಿದ ಆದಾಯವನ್ನು ಅನಾಮಧೇಯ ಮೂಲದಿಂದ ಬಂದಿದ್ದು ಎಂದು ಪರಿಗಣಿಸಲಾಗುತ್ತದೆ. ನಿಯಮದ ಪ್ರಕಾರ 20 ಸಾವಿರಕ್ಕಿಂತಲೂ ಕಡಿಮೆ ದೇಣಿಗೆ ನೀಡಿದ ದಾನಿಗಳ ಹೆಸರನ್ನು ಬಹಿರಂಗ ಪಡಿಸಬೇಕಾದ ಅಗತ್ಯವಿಲ್ಲ. ಇವುಗಳನ್ನು ಎಲೆಕ್ಟೋರಲ್‌ ಬಾಂಡ್‌ಗಳು, ಕೂಪನ್‌ಗಳ ಮಾರಾಟ, ಪರಿಹಾರ ನಿಧಿಗಳ ಮೂಲಕವೂ ಸಂಗ್ರಹಿಸಬಹುದಾಗಿದೆ.