Asianet Suvarna News Asianet Suvarna News

ಕಾಂಗ್ರೆಸ್ ತೊರೆದವರು ಹೆಚ್ಚು, ಬಿಜೆಪಿ ಸೇರಿದವರು ಮತ್ತಷ್ಟು; 2014-21ರ ವಲಸೆ ನಾಯಕರ ಅಧ್ಯಯನ ವರದಿ!

  • 2014 ರಿಂದ 2021ರ ವರೆಗಿನ ಅವಧಿಯಲ್ಲಿ ನಾಯಕರ ವಲಸೆ ರಿಪೋರ್ಟ್
  • ಕಾಂಗ್ರೆಸ್‌ನಿಂದ ಅತೀ ಹೆಚ್ಚು ಮಂದಿ ಇತರ ಪಕ್ಷಕ್ಕೆ ವಲಸೆ
  • ನಾಯಕರ ಕಳೆದುಕೊಂಡು ದುರ್ಬಲವಾದ ಕಾಂಗ್ರೆಸ್, ಅತೀ ಹೆಚ್ಚು ನಾಯಕರು ಬಿಜೆಪಿ ಸೇರ್ಪಡೆ
     
Congress saw maximum candidates leaving party to join other political parties says ADR study ckm
Author
Bengaluru, First Published Sep 9, 2021, 3:59 PM IST

ನವದೆಹಲಿ(ಸೆ.09): ಚುನಾವಣೆ ಸಮೀಪಿಸುತ್ತಿದ್ದಂತೆ ಇತ್ತೀಚೆಗೆ ಪಕ್ಷ ತೊರೆದು ಬೇರೆ ಪಕ್ಷ ಸೇರುವವರ ಸಂಖ್ಯೆ ಹೆಚ್ಚಿದೆ. ಕೆಲ ನಾಯಕರು ಮಂತ್ರಿಗಿರಿ ಸಿಗುವ ವರೆಗೂ ಪಕ್ಷ ಬದಲಾಯಿಸಿ ತಮ್ಮ ಬೇಳೆ ಬೇಯಿಸಿಕೊಂಡವರಿದ್ದಾರೆ. ಇದೀಗ ನಾಯಕರ ವಲಸೆ ಪರ್ವ ಕುರಿತು ಅಧ್ಯಯನ ವರದಿ ಬಿಡುಗಡೆಯಾಗಿದೆ. ಈ ವರದಿಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬೇರೆ ಪಕ್ಷ ಸೇರಿದವರ ಸಂಖ್ಯೆ ಅತೀ ಹೆಚ್ಚು.

ಜೆಡಿಎಸ್‌ ನಡೆಗೆ ದತ್ತಾ ಅಸಮಾಧಾನ: ಕಾಂಗ್ರೆಸ್‌ ಸೇರ್ತಾರಾ ದೇವೇಗೌಡ್ರ ಮಾನಸ ಪುತ್ರ?

ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಬಿಡುಗಡೆ ಮಾಡಿದ ಅಧ್ಯಯನ ವರದಿ ರಾಜಕೀಯ ಪಕ್ಷಗಳು ಹಾಗೂ ನಾಯಕರ ಪಕ್ಷ ತೊರೆಯುವಿಕೆ, ಬೇರೆ ಪಕ್ಷ ಸೇರ್ಪಡೆ ಕುರಿತು ಕುತೂಹಲ ಮಾಹಿತಿಯನ್ನು ಹೊರಹಾಕಿದೆ.  

ಅಧ್ಯಯನದ ಪ್ರಕಾರ 2014-2021ರ ಅವದಿಯಲ್ಲಿನ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳ ಪೈಕಿ ಕಾಂಗ್ರೆಸ್ ಅತೀ ಹೆಚ್ಚು ನಾಯಕರನ್ನು ಕಳೆದುಕೊಂಡು ನಷ್ಟ ಅನುಭವಿಸಿದೆ. 2014ರಿಂದ 2021ರ ಅವದಿಯಲ್ಲಿ ಬರೋಬ್ಬರಿ 222 ನಾಯಕರು(ಶೆ.20) ಕಾಂಗ್ರೆಸ್ ತೊರೆದು ಇತರ ಪಕ್ಷ ಸೇರಿಕೊಂಡಿದ್ದಾರೆ.  ಇನ್ನು ಬಿಎಸ್‌ಪಿ ಪಕ್ಷದಿಂದ 153(ಶೇ.14) ನಾಯಕರು ಪಕ್ಷ ತೊರೆದು ಇತರ ಪಕ್ಷ ಸೇರಿಕೊಂಡಿದ್ದಾರೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರು : ಸ್ವಾಗತಿಸಿದ ಶಾಸಕರು

ಪಕ್ಷ ತೊರೆದು ಇನ್ನೊಂದು ಪಕ್ಷ ಸೇರಿಕೊಳ್ಳುವ ಪೈಕಿ ಬಿಜೆಪಿ ಮುಂದಿದೆ. ಹೆಚ್ಚಿನ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. 2014-2021ರ ಅವದಿಯಲ್ಲಿ 253 ನಾಯಕರು ಇತರ ಪಕ್ಷದಿಂದ ಬಿಜೆಪಿ ಸೇರಿಕೊಂಡಿದ್ದಾರೆ. 2014 ರಿಂದ 2021ರೊಳಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ 175 ಸಂಸದರು ಹಾಗೂ ಶಾಸಕರು ಪಕ್ಷ ತೊರೆದು ಇತರ ಪಕ್ಷ ಸೇರಿಕೊಂಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಇತರ ಪಕ್ಷ ಸೇರಿದ ಸಂಸದರು, ಶಾಸಕರ ಸಂಖ್ಯೆ 33.  ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ 1133 ಪ್ರಮಾಣ ವಚನ ಸ್ವೀಕರಿಸಿದ ನಾಯಕರು, ಮೇಲೆ ಅಧ್ಯಯನ ನಡೆಸಿದೆ. 2014ರ ಬಳಿಕ ನಡೆದ ಚುನಾವಣೆಗಳಲ್ಲಿ 500 ಅಭ್ಯರ್ಥಿಗಳು ಪಕ್ಷ ಬದಲಿಸಿ ಸ್ಪರ್ಧಿಸಿದ್ದಾರೆ ಎಂದು ಅಧ್ಯಯನ ವರದಿ ಹೇಳುತ್ತಿದೆ.
 

Follow Us:
Download App:
  • android
  • ios