ಮಂಗಳೂರು ಬಾಂಬರ್ ಶರಣಾಗತಿ: ಹೇಗಿದೆ ರಾಜಕೀಯ ನಾಯಕರ ಮನಸ್ಥಿತಿ..?

ಮಂಗಳೂರಿನಲ್ಲಿ ಸಿಕ್ಕ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೊಲೀಸರ ಮುಂದೆ ಶರಣಾಗತಿಯಾಗಿದ್ದಾನೆ. ಆದ್ರೆ, ಇದಕ್ಕೆ ರಾಜಕೀಯ ನಾಯಕರ ಕೆಸರೆರಚಾಟ ನಡೆಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒಂದು ಕಡೆಯಾದರೆ. ಇವರಿಗೆ ಬಿಜೆಪಿ ನಾಯಕರು ತಿರುಗೇಟು ನೀಡುತ್ತಿದ್ದಾರೆ. ಹಾಗಾದ್ರೆ ಯಾರೆಲ್ಲ ಏನು ಹೇಳಿದ್ದಾರೆ ಎನ್ನುವುದನ್ನು ನೋಡಿ..

BJP Congress JDS Leaders War Of Words On Mangaluru Airport Bomb Accused Aditya Rao

ಮಂಗಳೂರು,(ಜ.22): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್ ಶರಣಾಗತಿಯಾಗಿದ್ದಾನೆ. ಬೆಂಗಳೂರಿನಲ್ಲಿರುವ ಡಿಜಿ ಮತ್ತು ಐಜಿಪಿ ನೀಲಾಮಣಿ ರಾಜು ಮುಂದೆ  ಇಂದು (ಬುಧವಾರ) ಶರಣಾಗಿದ್ದಾನೆ. ಬಳಿ ಆರೋಪಿ ಆದಿತ್ಯ ರಾವ್‌ನನ್ನು ಬೆಂಗಳೂರಿನ  ಹಲಸೂರು ಗೇಟ್ ಪೊಲೀಸರು ವಿಚಾರಣೆ ನಡೆಸಿ ಬಳಿಕ ಕೋರ್ಟ್ ಗೆ ಹಾಜರುಪಡಿಸಿದರು.

ಇದೀಗ ಕೋರ್ಟ್ ಆರೋಪಿಯನ್ನು ಮಂಗಳೂರು ಪೊಲೀಸರಿಗೆ ಒಪ್ಪಿಸಿದ್ದು ನಾಳೆ ಅಂದ್ರೆ ಗುರುವಾರ ಸಂಜೆ 5.50ರೊಳಗೆ ಮಂಗಳೂರಿನ 6ನೇ ಎಸಿಎಂಎಂ ನ್ಯಾಯಾಲಕ್ಕೆ ಹಾಜರುಪಡಿಸುವಂತೆ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಧೀಶ ಜಗದೀಶ್ ಆದೇಶ ಹೊರಡಿಸಿದ್ದಾರೆ.

ಬಾಂಬರ್‌ ಕೋರ್ಟ್‌ಗೆ: ಮಂಗಳೂರು ಪೊಲೀಸರಿಗೆ ಜಡ್ಜ್ ಮಹತ್ವದ ಸೂಚನೆ

ಅದರಂತೆ ಮಂಗಳೂರು ಪೊಲೀಸರು ಆರೋಪಿ ಆದಿತ್ಯ ರಾವ್‌ನನ್ನು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಕರೆದೊಯ್ಯುತ್ತಿದ್ದಾರೆ. ಆದ್ರೆ,ಈ ಪ್ರಕರಣದಲ್ಲಿ ರಾಜಕೀಯ ನಾಯಕರು ಒಬ್ಬರಿಗೊಬ್ಬರು ಕಿತ್ತಾಡುಕೊಳ್ಳುತ್ತಿದ್ದಾರೆ. ಹಾಗಾದ್ರೆ ಯಾರು ಏನು ಹೇಳಿದ್ದಾರೆ ಎನ್ನುವುದನ್ನು ಈ ಕೆಳಗಿನಂತಿದೆ ನೋಡಿ.

ಯುಟಿ ಖಾದರ್ ಹೇಳಿಕೆ
ಮಂಗಳೂರಿನಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, 'ಆರಾಮವಾಗಿ ಆದಿತ್ಯ ಪೊಲೀಸರ ಮುಂದೆ ಶರಣಾಗಿದ್ದಾನೆ. ಆದ್ರೆ, ಆರೋಪಿ ಬೆಂಗಳೂರು ತಲುಪುವ ವರೆಗೆ ಪೊಲೀಸರು ಎಲ್ಲಿದ್ದರು? ಹಿಂದೆ ದೊಡ್ಡ ಸಂಚಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.  ಆರೋಪಿಗೆ ತಲೆ ಸರಿಯಿಲ್ಲ ಅಂತಾ ಹೇಳ್ತಾರೆ. ಆರೋಪಿಗೆ ಬಾಂಬ್ ಫಿಕ್ಸ್ ಮಾಡೋಕೆ  ತಲೆ ಸರಿಯಾಗಿ ಇದೆಯಾ. ಒಬ್ಬನೇ ಬಾಂಬ್ ಫಿಕ್ಸ್ ಮಾಡಲು ಸಾಧ್ಯವಿಲ್ಲ. ಈ ಸಂಚಿನ ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಮಂಗಳೂರು ಬಾಂಬರ್ ಆದಿತ್ಯ ರಾವ್ 15 ವರ್ಷದಲ್ಲಿ...18 ಕೆಲಸ

ಕುಮಾರಸ್ವಾಮಿ ಹೇಳಿದ್ದೇನು..?
ಮತ್ತೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಆದಿತ್ಯ ರಾವ್ ಬಂಧನ ನಾಟಕೀಯ ಅಂತ ಅನಿಸುತ್ತದೆ.
ಅವನು ಹೇಗೆ ಬೆಂಗಳೂರಿಗೆ ಬಂದ ?  ಅವನು ಡಿಜಿ ಕಚೇರಿಗೆ ಬಂದಿದ್ದೇಕೆ? ಆದಿತ್ಯ ಶರಣಾಗ್ತಾನೆ ಅಂತ ಡಿಜಿಗೆ ಹೇಗೆ ಮಾಹಿತಿ ಬಂತು? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ 
ಆರೋಪಿ ಶರಣಾಗತಿ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿಕ್ಕಿರುವ ಮಟಿರೀಯಲಗಳನ್ನ FSLಗೆ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕ ಎಲ್ಲಾ ಗೊತ್ತಾಗಲಿದೆ. ಪ್ರಕರಣ ಹಿನ್ನೆಲೆಯನ್ನ ಪತ್ತೆ ಹಚ್ಚುವ ಕೆಲಸ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದು, ಮಂಗಳೂರು ಘಟನೆಯಲ್ಲಿ ರಾಜಕೀಯ ನಡೆಯುತ್ತಿದೆ. ಕುಮಾರಸ್ವಾಮಿ, ಕಾಂಗ್ರೆಸನವರು ಅಲ್ಪಸಂಖ್ಯಾತರ ಓಲೈಕೆಗೆ ಪೈಪೋಟಿ ನಡೆಸಿದ್ದಾರೆ ಎಂದು ಕಿಡಿಕಾರಿದರು. ರಾಜಕೀಯ ಮಾಡುವ ಭರಾಟೆಯಲ್ಲಿ ದೇಶದ್ರೋಹಿ ಕೃತ್ಯಗಳಿಗೆ ಪ್ರಚೋದನೆ ಕೊಡಬಾರದು. ಮಾಜಿ ಸಿಎಂ ಕುಮಾರಸ್ವಾಮಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯ ಸರಿನಾ ಅಂತಾ ಗೆ ಇಡೀ ರಾಜ್ಯದ ಜನತೆನೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದರು.

H.D.ಕುಮಾರಸ್ವಾಮಿ ವಿರುದ್ಧ ಯತ್ನಾಳ್ ವಾಗ್ದಾಳಿ
ಕುಮಾರಸ್ವಾಮಿಯನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕಿದೆ. ಸರ್ಕಾರದ ವೆಚ್ಚದಲ್ಲೇ HDKಗೆ ಚಿಕಿತ್ಸೆ ಕೊಡಿಸಬೇಕಿದೆ ಎಂದು ವ್ಯಂಗ್ಯವಾಡಿದರು. ಕುಮಾರಸ್ವಾಮಿ ಜೀವನವೇ ಒಂದು ಅಣಕು ರೀತಿ ಇದೆ. ಪಾಕಿಸ್ತಾನದ ಲೀಡರ್ ಮಾತಾಡಿದಂತೆ ಮಾತಾಡಿದ್ದಾರೆ. ಎಚ್ಡಿಕೆ ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ. ಇಮ್ರಾನ್ ಖಾನ್ನ ಅಳಿಯ ಎಚ್.ಡಿ.ಕುಮಾರಸ್ವಾಮಿ ಎಂದು ತಿರುಗೇಟು ನೀಡಿದರು.

ದಿನೇಶ್ ಗುಂಡೂರಾವ್
ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್ ಅಲ್ಲದೇ ಬೇರೆ ಯಾರಾದರೂ ಮುಸ್ಲಿಂ ವ್ಯಕ್ತಿಯಾಗಿದಿದ್ದರೆ ಬಿಜೆಪಿ ನಾಯಕರ ವರ್ತನೆಯೇ ಬೇರೆಯಾಗಿರುತ್ತಿತ್ತು.  ಅರೋಪಿ ಆದಿತ್ಯರಾವ್ ಹಿಂದೆಯೂ ಕೆಲ ಘಟನೆಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಆರೋಪಿತನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆ ಹಾಕಬೇಕಿದೆ. ಆದಿತ್ಯರಾವ್ ಬಂಧನ‌ದ ಸುದ್ದಿ ಬಿಜೆಪಿಯವರಿಗೆ ಸಂತೋಷ ತಂದಿರಲಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.

ಆದಿತ್ಯರಾವ್ ಜಾಗದಲ್ಲಿ ಬೇರೆಯವರಿದ್ದರೆ ಬಿಜೆಪಿ ನಾಯಕರ ಅಭಿಪ್ರಾಯಗಳೇ ವಿಭಿನ್ನವಾಗಿರುತ್ತಿತ್ತು. ಈಗ ರಾವ್ ಇರುವುದರಿಂದ ಬಿಜೆಪಿ ನಾಯಕರಿಂದ ಯಾವ ಹೇಳಿಕೆ ಹೊರಬೀಳಲಿಲ್ಲ. ಬಹುಶಃ ಬಿಜೆಪಿ ಭಕ್ತರಿಗೆ ಇದು ಸಂತೋಷ ತಂದಿಲ್ಲ. ತಾನಾಗಿಯೇ ಬಂದು  ಪೊಲೀಸರಿಗೆ ಶರಣಾಗಿರುವ ಕುರಿತು ಸಮಗ್ರ ತನಿಖೆಯಾಗಬೇಕು‌ ಎಂದು ಆಗ್ರಹಿಸಿದರು‌.

Latest Videos
Follow Us:
Download App:
  • android
  • ios