ರಾಜ್ಯದ ಸುಮಾರು 18ರಿಂದ 20 ಕ್ಷೇತ್ರಗಳು ಸೇರಿದಂತೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಅಂತಿಮಗೊಳಿಸಲು ದೆಹಲಿಯಲ್ಲಿ ಈ ಸಭೆ ನಡೆಯಬೇಕಿತ್ತು. ಅದು ಮುಂದೂಡಿಕೆಯಾಗಿರುವ ಮಾಹಿತಿಯಷ್ಟೇ ಲಭಿಸಿದ್ದು, ಮತ್ತೆ ಸಭೆ ಯಾವಾಗ ನಡೆಯಲಿದೆ ಎಂಬುದು ತಿಳಿದುಬಂದಿಲ್ಲ.
ಬೆಂಗಳೂರು(ಮಾ.10): ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರ ನೇತೃತ್ವದಲ್ಲಿ ಭಾನುವಾರ ನಡೆಯಬೇಕಿದ್ದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ದಿಢೀರ್ ಮುಂದಕ್ಕೆ ಹೋಗಿದೆ.
‘ಭಾನುವಾರ ಸಂಜೆ ದೆಹಲಿಯಲ್ಲಿ ನಡೆಯಬೇಕಿದ್ದ ಸಭೆ ಕಾರಣಾಂತರಗಳಿಂದ ಮುಂದೂಡಿಕೆಯಾಗಿದೆ. ಹೀಗಾಗಿ ನಾನೂ ಕೂಡ ದೆಹಲಿ ಭೇಟಿ ರದ್ದುಪಡಿಸಿ ರಾಜ್ಯದಲ್ಲೇ ಇದ್ದುಕೊಂಡು ಚುನಾವಣಾ ಕೆಲಸ ಮಾಡುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ಶನಿವಾರ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ 2024: ಸಮೀಕ್ಷೆ ಮಾತ್ರವಲ್ಲದೆ ಸ್ಥಳೀಯರ ಮಾತಿಗೂ ಮನ್ನಣೆ ನೀಡಿ, ಬಿಎಸ್ವೈ
ರಾಜ್ಯದ ಸುಮಾರು 18ರಿಂದ 20 ಕ್ಷೇತ್ರಗಳು ಸೇರಿದಂತೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಅಂತಿಮಗೊಳಿಸಲು ದೆಹಲಿಯಲ್ಲಿ ಈ ಸಭೆ ನಡೆಯಬೇಕಿತ್ತು. ಅದು ಮುಂದೂಡಿಕೆಯಾಗಿರುವ ಮಾಹಿತಿಯಷ್ಟೇ ಲಭಿಸಿದ್ದು, ಮತ್ತೆ ಸಭೆ ಯಾವಾಗ ನಡೆಯಲಿದೆ ಎಂಬುದು ತಿಳಿದುಬಂದಿಲ್ಲ.
‘ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ತುಂಬಾ ಚೆನ್ನಾಗಿದೆ. 28 ಕ್ಷೇತ್ರಗಳ ಪೈಕಿ 25 ಸ್ಥಾನ ಗೆಲ್ಲಲು ಎಲ್ಲಾ ರೀತಿಯ ಶ್ರಮ ಹಾಕುತ್ತಿದ್ದೇವೆ. ಅದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ. ಯಾವುದೇ ರಾಜಕೀಯ ಪಕ್ಷದಲ್ಲಿ ಪಟ್ಟಿ ಬಿಡುಗಡೆಗೆ ಮೊದಲು ಸಣ್ಣಪುಟ್ಟ ಗೊಂದಲ ಇದ್ದೇ ಇರುತ್ತದೆ. ಅದು ಸ್ವಾಭಾವಿಕ. ಪಟ್ಟಿ ಬಿಡುಗಡೆ ಆದ ಬಳಿಕ ಎಲ್ಲವೂ ಸರಿಹೋಗುತ್ತದೆ’ ಎಂದೂ ಯಡಿಯೂರಪ್ಪ ಹೇಳಿದ್ದಾರೆ.