ಕರ್ನಾಟಕ ವಿಧಾನಸಭಾ ಚುನಾವಣೆ ಬಿಜೆಪಿ ಸಕಲ ರೀತಿಯಲ್ಲಿ ಸಜ್ಜಾಗಿದೆ. 189 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಹಲವು ಹೊಸ ಪ್ರಯೋಗ ಮಾಡಿರುವ ಬಿಜೆಪಿ ಮೊದಲ ಪಟ್ಟಿಯಲ್ಲಿ 8 ಮಹಿಳೆಯರಿಗೆ ಟಿಕೆಟ್ ಘೋಷಿಸಿದೆ. 

ನವದೆಹಲಿ(ಏ.11): ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಕಳೆದೆ ಕೆಲ ದಿನಗಳಿಂದ ಸರಣಿ ಸಭೆ ನಡೆಸಿದ ಬಿಜೆಪಿ ಕೊನೆಗೂ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಬಾರಿಯ ವಿಶೇಷತೆ ಅಂದರೆ 52 ಹೊಸ ಮುಖಗಳಿಗೆ ಅವಕಾಶ ನೀಡಿದೆ. ಇಷ್ಟೇ ಅಲ್ಲ ಲಕ್ಷ್ಮಣ ಸವದಿ ಸೇರಿದಂತೆ ಹಿರಿಯರಿಗೆ ಕೊಕ್ ನೀಡಿದೆ. ಇನ್ನು ಮೊದಲ ಪಟ್ಟಿಯಲ್ಲಿ 8 ಮಹಿಳೆಯರಿಗೆ ಟಿಕೆಟ್ ಘೋಷಿಸಿದೆ. ಅದರಲ್ಲೂ ಸುಳ್ಯ ಹಾಗೂ ಪುತ್ತೂರಿನಲ್ಲಿ ಹಾಲಿ ಶಾಸಕರ ಬದಲು ಮಹಿಳೆಯರಿಗೆ ಟಿಕೆಟ್ ಘೋಷಿಸಿದೆ. 

ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಮಹಿಳೆಯರು
ಸಂಡೂರು: ಶಿಲ್ಪಾ ರಾಘವೇಂದ್ರ
ನಾಗಮಂಗಲ: ಸುಧಾ ಶಿವರಾಮೇಗೌಡ
ಪುತ್ತೂರು: ಆಶಾ ತಿಮ್ಮಪ್ಪ
ಹಿರಿಯೂರು: ಪೂರ್ಣಿಮಾ ಶ್ರೀನಿವಾಸ್
ಕಾರವಾರ: ರೂಪಾಲಿ ಸಂತೋಷ್ ನಾಯ್ಕ್
ಸುಳ್ಯ: ಭಗೀರಥಿ ಮರುಳ್ಯ
ಸೌಂದತ್ತಿ: ಯಲ್ಲಮ್ಮ ರತ್ನಾ ವಿಶ್ವನಾಥ್ ಮಾಮನಿ
ನಿಪ್ಪಾಣಿ: ಶಶಿಕಲಾ ಜೊಲ್ಲೆ

BJP Candidates List: ಕಾಂಗ್ರೆಸ್‌ ಕಲಿಗಳ ವಿರುದ್ಧ ಹೋರಾಡೋಕೆ ಸಜ್ಜಾದ ಸೋಮಣ್ಣ, ಆರ್‌.ಅಶೋಕ್‌!

ಪೂತ್ತೂರಿನಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಚುನಾವಣೆ ಸಮೀಪಿಸುತ್ತದ್ದಂತೆ ವಿವಾದಕ್ಕೆ ಗುರಿಯಾಗಿದ್ದರು. ಮಹಿಳೆ ಜೊತೆಗಿನ ಖಾಸಗಿ ಫೋಟೋಗಳು ಬಹಿರಂಗವಾಗಿತ್ತು. ಇದೀಗ ಬಿಜೆಪಿ ಹೈಕಮಾಂಡ್ ಹಾಲಿ ಶಾಸಂಕ ಸಂಜೀವ ಮಠಂದೂರು ಬದಲು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಅಶಾ ತಿಮ್ಮಪ್ಪಗೆ ಟಿಕೆಟ್ ನೀಡಿದೆ. ಇನ್ನು ಸುಳ್ಯದಲ್ಲಿ ಸೋಲಿಲ್ಲದ ಸರದಾರನಾಗಿ ಗುರುತಿಸಿಕೊಂಡಿದ್ದ ಅಂಗಾರ ವಿರುದ್ಧ ಕಾರ್ಯಕರ್ತರಿಂದಲೇ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಬಿಜೆಪಿ ಅಂಗಾರ ಬದಲು ಭಗೀರತಿ ಮುರುಳ್ಯಗೆ ಟಿಕೆಟ್ ನೀಡಿದೆ. 

Breaking: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, 189 ಮಂದಿಗೆ ಟಿಕೆಟ್ ಘೋಷಣೆ, 52 ಹೊಸ ಮುಖ!

ಸಂಡೂರು ಕ್ಷೇತ್ರದಿಂದ ಶಿಲ್ವಾ ರಾಘವೇಂದ್ರಗೆ ಟಿಕೆಟ್ ನೀಡಲಾಗಿದೆ. ಕಳೆದ ಬಾರಿ ಶಿಲ್ಪಾ ಪತಿ ರಾಘವೇಂದ್ರ ಅಭ್ಯರ್ಥಿಯಾಗಿದ್ದರು. ಆದರೆ ಮಹಾಮಾರಿ ಕೊರೋನಾ ವೇಳೆ ರಾಘವೇಂದ್ರ ಕೊರೋನಾಗೆ ಬಲಿಯಾಗಿದ್ದರು. ಹಿರಿಯೂ ಕ್ಷೇತ್ರದಿಂದ ಪೂರ್ಣಿಮಾ ಶ್ರೀನಿವಾಸ್‌ಗೆ ಟಿಕೆಟ್ ಘೋಷಿಲಾಗಿದೆ. ಸೌಂದತ್ತಿ ಯಲ್ಲಮಾ ಕ್ಷೇತ್ರದಿಂದ ರತ್ನಾ ವಿಶ್ವನಾಥ್ ಮಾಮನಿಗೆ ಟಿಕೆಟ್ ಸಿಕ್ಕಿದೆ. ಸಚಿವೆ ಶಶಿಕಲಾ ಜೊಲ್ಲಗೆ ನಿಪ್ಪಾಣಿಯಿಂದ ಟಿಕೆಟ್ ನೀಡಲಾಗಿದೆ. ಕಾರವಾರ ಕ್ಷೇತ್ರದಿಂದ ರೂಪಾಲಿ ಸಂತೋಷ್ ನಾಯ್ಕ್‌ಗೆ ಟಿಕೆಟ್ ನೀಡಲಾಗಿದೆ.ನಾಗಮಂಗಲದಿಂದ ಸುಧಾರ ಶಿವರಾಮೇಗೌಡಗೆ ಟಿಕೆಟ್ ನೀಡಲಾಗಿದೆ.

189 ಕ್ಷೇತ್ರಗಳಿದೆ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿರುವ ಬಿಜೆಪಿ ಇನ್ನುಳಿದ ಕ್ಷೇತ್ರಗಳಿಗೆ ಶೀಘ್ರದಲ್ಲೇ ಟಿಕೆಟ್ ಘೋಷಿಸಲು ಬಿಜೆಪಿ ತಯಾರಿ ನಡೆದಿದೆ. ಮೇ.10ಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಒಂದೇ ಹಂತದಲ್ಲಿ ಕರ್ನಾಟಕ ಚುನಾವಣೆ ನಡೆಯಲಿದೆ. ಇನ್ನು ಮೇ. 13ಕ್ಕೆ ಫಲಿತಾಂಶ ಘೋಷಣೆಯಾಗಲಿದೆ.