ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಇನ್ನು 2 ದಿನ ಮಾತ್ರ ಬಾಕಿ ಇರುವಾಗ  ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಬೆಂಗಳೂರು (ಏ.11): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಇನ್ನು 2 ದಿನ ಮಾತ್ರ ಬಾಕಿ ಇರುವಾಗ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ರಾಜ್ಯದ 31 ಜಿಲ್ಲೆಗಳ ಒಟ್ಟು 224 ವಿಧಾನಸಭಾ ಕ್ಷೇತ್ರದಲ್ಲಿನ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಈ ಮೂಲಕ 35 ಕ್ಷೇತ್ರಗಳ ಪಟ್ಟಿಯನ್ನು ಉಳಿಸಿಕೊಂಡಿದೆ. ಜೊತೆಗೆ 52 ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ. ಒಬಿಸಿಗೆ 32 ಟಿಕೆಟ್, ಎಸ್‌ಸಿ ಕಳೆದ 4 ದಿನಗಳಿಂದ ಬಿಜೆಪಿ ಹೈಕಮಾಂಡ್‌ ಮೇಲಿಂದ ಮೇಲೆ ಸಿಇಸಿ ಸಭೆಗಳನ್ನು ಮಾಡಿತ್ತು. ಹಲವು ಸಭೆಗಳ ಬಳಿಕ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಇಂದು ಬಿಡುಗಡೆ ಮಾಡಿದೆ. ಈ ಬಾರಿ ಹೊಸಬರಿಗೆ ಬಿಜೆಪಿ ಮಣೆ ಹಾಕಿದ್ದು, ಹಳಬರಿಗೆ ಕೋಕ್ ನೀಡಲಾಗಿದೆ. ಈ ಮೂಲಕ ಬಿಜೆಪಿ ಯುವನಾಯಕರತ್ತ ಚಿತ್ತ ಹರಿಸಿದೆ. ಗ್ರಾಮ ಮಟ್ಟದಿಂದ ರಾಜ್ಯ ನಾಯಕರ ತನಕ ಅಭಿಪ್ರಾಯ ಸಂಗ್ರಹಿಸಿ ಲಿಸ್ಟ್ ತಯಾರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹೇಳಿಕೆ ನೀಡಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರು ಟಿಕೆಟ್ ಪಡೆದಿದ್ದಾರೆ . 

ಟಿಕೆಟ್ ಪಡೆದವರ ಜಿಲ್ಲಾವಾರು ಕ್ಷೇತ್ರ ಮಾಹಿತಿ ಇಲ್ಲಿದೆ:
ಬೆಳಗಾವಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
1. ನಿಪ್ಪಾಣಿ : ಶಶಿಕಲಾ ಜೊಲ್ಲೆ 
2. ಚಿಕ್ಕೋಡಿ-ಸದಲಗಾ: ರಮೇಶ್ ಕತ್ತಿ
3. ಅಥಣಿ : ಮಹೇಶ್ ಕುಮಟಳ್ಳಿ 
4. ಕಾಗವಾಡ : ಬಾಲಾ ಸಾಹೇಬ್ ಪಾಟೀಲ್ 
5. ಕುಡಚಿ : ಪಿ ರಾಜೀವ್ 
6. ರಾಯಭಾಗ : ದುಯೋಧನ್ ಐಹೊಳೆ
7. ಹುಕ್ಕೇರಿ : ನಿಖಿಲ್ ಕತ್ತಿ
8. ಅರಭಾವಿ : ಬಾಲಚಂದರ್ ಜಾರಕಿಹೊಳಿ
9. ಗೋಕಾಕ : ರಮೇಶ್ ಜಾರಕಿಹೊಳಿ
10. ಯಮಕನಮರಡಿ : ಬಸವರಾಜ್ ಹುಂಡ್ರಿ
11ಬೆಳಗಾವಿ ಉತ್ತರ : ರವಿ ಪಾಟೀಲ್
12ಬೆಳಗಾವಿ ದಕ್ಷಿಣ : ಅಭಯ್ ಪಾಟೀಲ್ 
13ಬೆಳಗಾವಿ ಗ್ರಾಮೀಣ : ನಾಗೇಶ್ ಮನ್ನೋಲ್ಕರ್ 
14ಖಾನಾಪುರ: ವಿಠ್ಠಲ್ ಹಾಲಗೇಕರ್ 
15ಕಿತ್ತೂರು: ಮಹಂತೇಶ್ ದೊಡ್ಡಗೌಡರ್ 
16ಬೈಲಹೊಂಗಲ : ಜಗದೀಶ್ ಚನ್ನಪ್ಪ
17ಸವದತ್ತಿ ಯಲ್ಲಮ್ಮ : ರತ್ನ ವಿಶ್ವನಾಥ್ ಮಮನಿ 
18ರಾಮದುರ್ಗ : ಚಿಕ್ಕ ರೇವಣ್ಣ

ಬಾಗಲಕೋಟೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
19ಮುಧೋಳ : ಗೋವಿಂದ್ ಕಾರಜೋಳ
20ತೇರದಾಳ : ಸಿದ್ದು ಸವದಿ
21ಜಮಖಂಡಿ : ಜಗದೀಶ್ ಗುಡಗುಂಟಿ
22ಬೀಳಗಿ : ಮುರುಗೇಶ್ ನಿರಾಣಿ 
23ಬದಾಮಿ : ಶಾಂತ ಗೌಡ ಪಾಟೀಲ್ 
24ಬಾಗಲಕೋಟೆ : ವೀರಭದ್ರಯ್ಯ
25ಹುನಗುಂದ : ದೊಡ್ಡನಗೌಡ ಪಾಟೀಲ್ 

ವಿಜಯಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
26ಮುದ್ದೇಬಿಹಾಳ : ಎ ಎಸ್ ಪಾಟೀಲ್ ನಡಹಳ್ಳಿ
27ದೇವರ ಹಿಪ್ಪರಗಿ :
28ಬಸವನ ಬಾಗೇವಾಡಿ :
29ಬಬಲೇಶ್ವರ : ವಿಜುಗೌಡ ಪಾಟೀಲ್ 
30ವಿಜಾಪುರ ನಗರ : ಬಿ ಆರ್‌ ಪಾಟೀಲ್ (ಯತ್ನಾಳ್)
31ನಾಗಠಾಣ :
32ಇಂಡಿ : 
33ಸಿಂದಗಿ : ರಮೇಶ್ ಬುಸನೂರ್

ಕಲಬುರಗಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
34ಅಫಜಲಪುರ : ಮಲ್ಲಿಕಾ ಗುತ್ತೇದಾರ್ 
35ಜೇವರ್ಗಿ : ಶಿವನಗೌಡ ಪಾಟೀಲ್ 
36ಸುರಪುರ : ನರಸಿಂಹ ನಾಯಕ್ 
37ಶಹಾಪುರ : ಅಮೀನ್ ರೆಡ್ಡಿ
38ಯಾದಗಿರಿ : ವೆಂಕಟ ರೆಡ್ಡಿ
39ಗುರುಮಠಕಲ್ :
40ಚಿತ್ತಾಪುರ : ಮಣಿಕಾಂತ್ ರಾಥೋಡ್
41ಸೇಡಂ : 
42ಚಿಂಚೋಳಿ : ಅವಿನಾಶ್ ಜಾಧವ್ 
43ಕಲಬುರಗಿ ಗ್ರಾಮೀಣ : ಬಸವರಾಜ್ ಮತ್ತಿಮೂಡ್
44ಕಲಬುರಗಿ ದಕ್ಷಿಣ : ದತ್ತಾತ್ರೆಯ ಪಾಟೀಲ್ 
45ಕಲಬುರಗಿ ಉತ್ತರ : ಚಂದ್ರಕಾಂತ್ ಪಾಟೀಲ್ 
46ಆಳಂದ : ಸುಭಾಷ್ ಗುತ್ತೇಧಾರ್

ಬೀದರ್ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
47ಬಸವಕಲ್ಯಾಣ : ಶರಣು ಸಲಗಾರ್
48ಹುಮ್ನಾಬಾದ್ : ಸಿದ್ದು ಪಾಟೀಲ್ 
49ಬೀದರ ದಕ್ಷಿಣ : ಶೈಲೇಂದ್ರ
50ಬೀದರ :
51ಭಾಲ್ಕಿ : 
52ಔರಾದ್ : ಪ್ರಭು ಚೌಹ್ಹಾಣ್ 

ರಾಯಚೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
53ರಾಯಚೂರು ಗ್ರಾಮೀಣ : ತಿಪ್ಪರಾಜು ಹವಾಲ್ದಾರ್
54ರಾಯಚೂರು : ಶಿವರಾಜ್ ಪಾಟೀಲ್ 
55ಮಾನ್ವಿ :
56ದೇವದುರ್ಗ : ಶಿವನಗೌಡ ನಾಯಕ್ 
57ಲಿಂಗಸೂಗೂರು : ಮನಪ್ಪ ವಜ್ಜಲ್
58ಸಿಂಧನೂರು : ಕೆ ಕರಿಯಪ್ಪ
59ಮಸ್ಕಿ : ಪ್ರತಾಪ್ ಗೌಡ ಪಾಟೀಲ್ 

ಕೊಪ್ಪಳ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
60ಕುಷ್ಟಗಿ : ದೊಡ್ಡನ ಗೌಡ ಪಾಟೀಲ್ 
61ಕನಕಗಿರಿ : ಬಸವರಾಜ್ ದಡೇಸಗೂರು
62ಗಂಗಾವತಿ :
63ಯಲಬುರ್ಗಾ : ಹಾಲಪ್ಪ ಆಚಾರ್
64ಕೊಪ್ಪಳ :

ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
65ಶಿರಹಟ್ಟಿ : ಚಂದ್ರು ಲಮಣಿ
66ಗದಗ : ಅನಿಲ್ ಮೆಣಸಿಕಾಯ
67ರೋಣ :
68ನರಗುಂದ : ಸಿಸಿ ಪಾಟೀಲ್ 

ಧಾರವಾಡ ನವಲಗುಂದ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
65ಶಿರಹಟ್ಟಿ : ಚಂದ್ರು ಲಮಣಿ
69ನವಲಗುಂದ : ಶಂಕರ್ ಪಾಟೀಲ್ ಮನೆಕೊಪ್ಪ
70ಕುಂದಗೋಳ : ಎಂ ಆರ್ ಪಾಟೀಲ್ 
71ಧಾರವಾಡ : ಅಮೃತ್ ಅಯ್ಯಪ್ಪ ದೇಸಾಯಿ 
72ಹುಬ್ಬಳ್ಳಿ-ಧಾರವಾಡ(E) : ಡಾ. ಕ್ರಾಂತಿ ಕಿರಣ್ 
73ಹುಬ್ಬಳ್ಳಿ-ಧಾರವಾಡ(C) :
74ಹುಬ್ಬಳ್ಳಿ ಧಾರವಾಡ(W) : ಅರವಿಂದ್ ಬೆಲ್ಲದ್ 
75ಕಲಘಟಗಿ :


ಉತ್ತರ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
76ಹಳಿಯಾಳ : ಸುನಿಲ್ ಹೆಗ್ಡೆ
77ಕಾರವಾರ : ರೂಪಾಲಿ ನಾಯಕ್ 
78ಕುಮಟಾ : ದಿನಕರ್ ಶೆಟ್ಟಿ 
79ಭಟ್ಕಳ : ಸುನೀಲ್ ಬಾಲಿಯಾ ನಾಯಕ್ 
80ಶಿರಸಿ : ವಿಶ್ವೇಶ್ವರ ಹೆಗ್ಡೆ ಕಾಗೇರಿ
81ಯಲ್ಲಾಪುರ : ಶಿವರಾಮ್ ಹೆಬ್ಬಾರ್

ಹಾವೇರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
82ಹಾನಗಲ್ :
83ಶಿಗ್ಗಾಂವಿ : ಬಸವರಾಜ್ ಬೊಮ್ಮಾಯಿ
84ಹಾವೇರಿ :
85ಬ್ಯಾಡಗಿ : ವಿರೂಪಾಕ್ಷ ಬಳ್ಳಾರಿ
86ಹಿರೇಕೇರೂರು : ಬಿಸಿ ಪಾಟೀಲ್ 
87ರಾಣಿಬೆನ್ನೂರು : ಅರುಣ್ ಕುಮಾರ್ ಪೂಜಾರ್ 

ವಿಜಯನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
88ಹಡಗಲಿ : ಕೃಷ್ಣ ನಾಯಕ್ 
89ಹಗರಿಬೊಮ್ಮನಹಳ್ಳಿ :
90ವಿಜಯನಗರ : ಸಿದ್ದಾರ್ಥ್ ಸಿಂಗ್ 
91ಕೂಡ್ಲಿಗಿ : ಲೋಕೇಶ್ ನಾಯಕ್ 
92ಹರಪನಹಳ್ಳಿ : 

ಬಳ್ಳಾರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
93ಕಂಪ್ಲಿ : ಟಿ ಹೆಚ್‌ ಸುರೇಶ್ ಬಾಬು
94ಸಿರಗುಪ್ಪ : ಸೋಮಲಿಂಗಪ್ಪ
95ಬಳ್ಳಾರಿ : ಶ್ರೀರಾಮುಲು 
96ಬಳ್ಳಾರಿ ನಗರ : ಗಾಲಿ ಸೋಮಶೇಖರ ರೆಡ್ಡಿ
97ಸಂಡೂರು : ಶಿಲ್ಪಾ ರಾಘವೇಂದ್ರ

ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
98ಮೊಳಕಾಲ್ಮೂರು : ತಿಪ್ಪೇಸ್ವಾಮಿ 
99ಚಳ್ಳಕೆರೆ : ಅನಿಲ್ ಕುಮಾರ್ 
100ಚಿತ್ರದುರ್ಗ : ತಿಪ್ಪರೆಡ್ಡಿ 
101ಹಿರಿಯೂರು : ಪೂರ್ಣಿಮಾ ಶ್ರೀನಿವಾಸ್ 
102ಹೊಸದುರ್ಗ : ಲಿಂಗಮೂರ್ತಿ
103ಹೊಳಲ್ಕೆರೆ : ಚಂದ್ರಪ್ಪ 

ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
104ಜಗಳೂರು : ಎಸ್‌ ವಿ ರಾಮಚಂದ್ರ
105ಹರಿಹರ : ಬಿ ಪಿ ಹರೀಶ್ 
106ದಾವಣಗೆರೆ ಉತ್ತರ :
107ದಾವಣಗೆರೆ ದಕ್ಷಿಣ :
108ಮಾಯಕೊಂಡ :
109ಚನ್ನಗಿರಿ :
110ಹೊನ್ನಾಳಿ : ಎಂ ಪಿ ರೇಣುಕಾಚಾರ್ಯ

ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
111ಶಿವಮೊಗ್ಗ ಗ್ರಾಮೀಣ : ಅಶೋಕ್ ನಾಯಕ್ 
112ಭದ್ರಾವತಿ : ಮಂಗೋಟಿ ರುದ್ರೇಶ್
113ಶಿವಮೊಗ್ಗ :
114ತೀರ್ಥಹಳ್ಳಿ : ಆರಗ ಜ್ಞಾನೇಂದ್ರ
115ಶಿಕಾರಿಪುರ : ಬಿ ವೈ ವಿಜಯೇಂದ್ರ 
116ಸೊರಬ : ಕುಮಾರ್ ಬಂಗಾರಪ್ಪ
117ಸಾಗರ : ಹರತಾಳು ಹಾಲಪ್ಪ

ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
118ಬೈಂದೂರು :
119ಕುಂದಾಪುರ : ಕಿರಣ್ ಕುಮಾರ್ ಕೊಡ್ಗಿ
120ಉಡುಪಿ : ಯಶ್‌ಪಾಲ್ ಸುವರ್ಣ
121ಕಾಪು : ಗುರ್ಮೆ ಸುರೇಶ್ ಶೆಟ್ಟಿ
122ಕಾರ್ಕಳ : ಸುನೀಲ್ ಕುಮಾರ್ 

ಚಿಕ್ಕಮಗಳೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
123ಶೃಂಗೇರಿ : ಜೀವರಾಜ್ 
124ಮೂಡಿಗೆರೆ :
125ಚಿಕ್ಕಮಗಳೂರು : ಸಿಟಿ ರವಿ 
126ತರೀಕೆರೆ : ಡಿಎಸ್ ಸುರೇಶ್ 
127ಕಡೂರು : ಕೆ ಎಸ್ ಪ್ರಕಾಶ್ 

ತುಮಕೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
128ಚಿಕ್ಕನಾಯಕನಹಳ್ಳಿ : ಜೆ ಸಿ ಮಾಧುಸ್ವಾಮಿ
129ತಿಪಟೂರು : ಬಿಸಿ ನಾಗೇಶ್ 
130ತುರುವೇಕೆರೆ : ಮಸಾಲ ಜಯರಾಮ್ 
131ಕುಣಿಗಲ್ : ಡಿ ಕೃಷ್ಣ ಕುಮಾರ್
132ತುಮಕೂರು ನಗರ : ಜ್ಯೋತಿಗಣೇಶ್ 
133ತುಮಕೂರು ಗ್ರಾಮೀಣ : ಬಿ ಸುರೇಶ್ ಗೌಡ
134ಕೊರಟಗೆರೆ : ಅನೀಲ್ ಕುಮಾರ್ (ನಿವೃತ್ತ ಐಎಎಸ್)
135ಗುಬ್ಬಿ :
136ಶಿರಾ : ರಾಜೇಶ್ ಗೌಡ
137ಪಾವಗಡ : ಕೃಷ್ಣಾ ನಾಯ್ಕ್ 
138ಮಧುಗಿರಿ : ಎಲ್‌ ಸಿ ನಾಗರಾಜ್ 

ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
139ಗೌರಿಬಿದನೂರು : ಶಶಿಧರ್
140ಬಾಗೇಪಲ್ಲಿ : ಸಿ ಮುನಿರಾಜು
141ಚಿಕ್ಕಬಳ್ಳಾಪುರ : ಕೆ ಸುಧಾಕರ್ 
142ಶಿಡ್ಲಘಟ್ಟ : 
143ಚಿಂತಾಮಣಿ : ವೇಣು ಗೋಪಾಲ್ 

ಕೋಲಾರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
144ಶ್ರೀನಿವಾಸಪುರ : ಗುಂಜೂರು ಶ್ರೀನಿವಾಸ್ ರೆಡ್ಡಿ
145ಮುಳಬಾಗಿಲು : ಸೀಗೇಹಳ್ಳಿ ಸುಂದರ್ 
146ಕೆಜಿಎಫ್ :
147ಬಂಗಾರಪೇಟೆ : ಎಂ ನಾರಾಯಣ ಸ್ವಾಮಿ
148ಕೋಲಾರ : ವರ್ತೂರು ಪ್ರಕಾಶ್ 
149ಮಾಲೂರು : ಕೆ ಎಸ್ ಮಂಜುನಾಥ್ ಗೌಡ

ಬೆಂಗಳೂರು ನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
150ಯಲಹಂಕ : ಎಸ್‌ ಆರ್ ವಿಶ್ವನಾಥ್ 
151ಕೆ.ಆರ್.ಪುರಂ : ಬಿಎ ಬಸವರಾಜ್ 
152ಬ್ಯಾಟರಾಯನಪುರ : ತಮ್ಮೇಶ್ ಗೌಡ
153ಯಶವಂತಪುರ : ಎಸ್‌ ಟಿ ಸೋಮಶೇಖರ್
154ರಾಜರಾಜೇಶ್ವರಿನಗರ : ಮುನಿರತ್ನ ನಾಯ್ಡು
155ದಾಸರಹಳ್ಳಿ : ಎಸ್‌ ಮುನಿರಾಜು 
156ಮಹಾಲಕ್ಷ್ಮಿ ಲೇಔಟ್ : ಗೋಪಾಲಯ್ಯ
157ಮಲ್ಲೇಶ್ವರಂ : ಸಿ ಎನ್‌ ಅಶ್ವಥ ನಾರಾಯಣ
158ಹೆಬ್ಬಾಳ :
159ಪುಲಕೇಶಿನಗರ : ಮುರಳಿ
160ಸರ್ವಜ್ಞನಗರ : ಪದ್ಮನಾಭ ರೆಡ್ಡಿ
161ಸಿ.ವಿ.ರಾಮನ್ ನಗರ : ಎಸ್‌ ರಘು
162ಶಿವಾಜಿನಗರ : ಎನ್ ಚಂದ್ರ
163ಶಾಂತಿನಗರ : ಶಿವಕುಮಾರ್ 
164ಗಾಂಧಿನಗರ : ಸಪ್ತಗಿರಿ ಗೌಡ
165ರಾಜಾಜಿನಗರ : ಸುರೇಶ್ ಕುಮಾರ್ 
166ಗೋವಿಂದರಾಜ ನಗರ : 
167ವಿಜಯನಗರ : ಹೆಚ್‌ ಹವೀಂದ್ರ
168ಚಾಮರಾಜಪೇಟೆ : ಭಾಸ್ಕರ್ ರಾವ್ (ಐಪಿಎಸ್‌)
169ಚಿಕ್ಕಪೇಟೆ : ಉದಯ ಗರುಡಾಚಾರ್ 
170ಬಸವನಗುಡಿ : ರವಿ ಸುಬ್ರಹ್ಮಣ್ಯ
171ಪದ್ಮನಾಭನಗರ : ಆರ್ ಅಶೋಕ್ 
172ಬಿ.ಟಿ.ಎಂ.ಲೇಔಟ್ : ಶ್ರೀಧರ್ ರೆಡ್ಡಿ
173ಜಯನಗರ : ಸಿ ಕೆ ರಾಮಮೂರ್ತಿ 
174ಮಹಾದೇವಪುರ :
175ಬೊಮ್ಮನಹಳ್ಳಿ : ಸತೀಶ್ ರೆಡ್ಡಿ
176ಬೆಂಗಳೂರು ದಕ್ಷಿಣ : ಎಂ ಕೃಷ್ಣಪ್ಪ
177ಆನೇಕಲ್ : ಹುಲ್ಲಳ್ಳಿ ಶ್ರೀನಿವಾಸ್ 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
178ಹೊಸಕೋಟೆ : ಎಂಟಿಬಿ ನಾಗರಾಜ್ 
179ದೇವನಹಳ್ಳಿ : ಮುನಿಸಾಮಪ್ಪ
180ದೊಡ್ಡಬಳ್ಳಾಪುರ : ಧೀರಜ್ ಮುನಿರಾಜು
181ನೆಲಮಂಗಲ : ಸಪ್ತಗಿರಿ ನಾಯಕ್ 

ರಾಮನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
182ಮಾಗಡಿ : ಶ್ರೀ ಪ್ರಸಾದ್ ಗೌಡ
183ರಾಮನಗರ : ಗೌತಮ್ ಗೌಡ
184ಕನಕಪುರ : ಆರ್ ಅಶೋಕ್ 
185ಚನ್ನಪಟ್ಟಣ : ಯೋಗೇಶ್ವರ್ 

ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
186ಮಳವಳ್ಳಿ : ಮುನಿರಾಜು 
187ಮದ್ದೂರು : ಎಸ್‌ ಪಿ ಸ್ವಾಮಿ
188ಮೇಲುಕೋಟೆ : ಇಂದ್ರೇಶ್ ಕುಮಾರ್ 
189ಮಂಡ್ಯ : ಅಶೋಕ್ ಜಯರಾಂ
190ಶ್ರೀರಂಗಪಟ್ಟಣ : ಸಚ್ಚಿದಾನಂದ
191ನಾಗಮಂಗಲ : ಸುಧಾ ಶಿವರಾಮ್ 
192ಕೃಷ್ಣರಾಜಪೇಟೆ : ನಾರಾಯಣ ಗೌಡ

ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
193ಶ್ರವಣಬೆಳಗೊಳ :
194ಅರಸೀಕೆರೆ :
195ಬೇಲೂರು : ಕೆ ಸುರೇಶ್ 
196ಹಾಸನ : ಜೆ ಪ್ರೀತಂ ಗೌಡ
197ಹೊಳೆನರಸೀಪುರ : ದೇವರಾಜೇ ಗೌಡ
198ಅರಕಲಗೂಡು : ಯೋಗ ರಮೇಶ್ 
199ಸಕಲೇಶಪುರ : ಸಿಮೆಂಟ್ ಮಂಜು

ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
200ಬೆಳ್ತಂಗಡಿ : ಹರೀಶ್ ಪೂಂಜಾ
201ಮೂಡುಬಿದಿರೆ : ಉಮಾನಾಥ್ ಕೋಟ್ಯಾನ್ 
202ಮಂಗಳೂರು ನಗರ ಉತ್ತರ : ಭರತ್ ಶೆಟ್ಟಿ
203ಮಂಗಳೂರು ನಗರ ದಕ್ಷಿಣ : ವೇದವ್ಯಾಸ್ ಕಾಮತ್ 
204ಮಂಗಳೂರು : ಸತೀಶ್ ಕಂಪಲ
205ಬಂಟ್ವಾಳ : ರಾಜೇಶ್ ನಾಯ್ಕ್
206ಪುತ್ತೂರು : ಆಶಾ ತಿಮ್ಮಪ್ಪ
207ಸುಳ್ಯ : ಭಾಗೀರಥಿ ಮುರುಳ್ಯ

ಕೊಡಗು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
208ಮಡಿಕೇರಿ : ಅಪ್ಪಚ್ಚು ರಂಜನ್ 
209ವಿರಾಜಪೇಟೆ : ಕೆಜಿ ಬೋಪಯ್ಯ

ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
210ಪಿರಿಯಾಪಟ್ಟಣ : ವಿಜಯಶಂಕರ್ 
211ಕೃಷ್ಣರಾಜನಗರ : ವೆಂಕಟೇಶ್ ಹೊಸಳ್ಳಿ
212ಹುಣಸೂರು : ದೇವರಹಳ್ಳೀ ಸೋಮಶೇಖರ್
213ಹೆಗ್ಗಡದೇವನಕೋಟೆ : 
214ನಂಜನಗೂಡು : ಹರ್ಷವರ್ಧನ್ 
215ಚಾಮುಂಡೇಶ್ವರಿ : ಕವಿಶೇಗೌಡ
216ಕೃಷ್ಣರಾಜ :
217ಚಾಮರಾಜ : ಎಲ್ ನಾಗೇಂದ್ರ
218ನರಸಿಂಹರಾಜ : ಸಂದೇಶ್ ಸ್ವಾಮಿ
219ವರುಣಾ : ವಿ ಸೋಮಣ್ಣ
220ಟಿ.ನರಸೀಪುರ : ಡಾ. ರೇವಣ್ಣ

ಚಾಮರಾಜನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
221ಹನೂರು : ಪ್ರೀತಮ್ ನಾಗಪ್ಪ
222ಕೊಳ್ಳೇಗಾಲ : ಎನ್ ಮಹೇಶ್
223ಚಾಮರಾಜನಗರ : ವಿ ಸೋಮಣ್ಣ
224ಗುಂಡ್ಲುಪೇಟೆ : ಸಿಎಸ್ ನಿರಂಜನ್ ಕುಮಾರ್