ಕೈತಪ್ಪಿದ ಬಿಜೆಪಿ ಟಿಕೆಟ್, ಜೆಡಿಎಸ್ ಗಾಳಕ್ಕೆ ಸಿಕ್ಕಿದ ರಾಮದಾಸ್!?
ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಅಭ್ಯರ್ಥಿ ರಾಮದಾಸ್ ಗೆ ಜೆಡಿಎಸ್ ಗಾಳ ಹಾಕಿದ್ದು, ತಡರಾತ್ರಿ ವರೆಗೆ ಶಾಸಕ ಸಾರಾ.ಮಹೇಶ್ ಅವರು ರಾಮದಾಸ್ ಜೊತೆ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು (ಏ.18): ಒಂದೆಡೆ ಕರ್ನಾಟಕ ವಿಧಾನಸಭೆ ಚುನಾವಣೆ ಕಾವು, ಇನ್ನೊಂದೆಡೆ ನಾಯಕರ ಪಕ್ಷಾಂತರ ಪರ್ವ, ಇದೀಗ ಆಪರೇಷನ್ ಜೆಡಿಎಸ್‌ಗೆ ಎಸ್ ಎ. ರಾಮದಾಸ್ ಒಳಗಾಗಿದ್ದಾರೆ. ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಅಭ್ಯರ್ಥಿ ರಾಮದಾಸ್ ಗೆ ಜೆಡಿಎಸ್ ಗಾಳ ಹಾಕಿದ್ದು, ತಡರಾತ್ರಿ ವರೆಗೆ ಶಾಸಕ ಸಾರಾ.ಮಹೇಶ್ ಅವರು ರಾಮದಾಸ್ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ರಾಮದಾಸ್ ಪರ ಕುಮಾರಸ್ವಾಮಿ ಬಳಿ ಸಾರಾ.ಮಹೇಶ್ ವಕಾಲತ್ತು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ದಳಪತಿಗಳ ಅಂಗಳದಲ್ಲಿ ರಾಮದಾಸ್ ಚೆಂಡು ಇದೆ. ಇತ್ತ ಕೃಷ್ಣರಾಜ ರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕೆವಿ.ಮಲ್ಲೇಶ್ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ಜೆಡಿಎಸ್ ಅಭ್ಯರ್ಥಿಯನ್ನು ಇಲ್ಲಿ ಪ್ರಕಟಿಸಿದೆ.
ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ: ರಾಮ್‌ದಾಸ್ ಬೇಸರ
ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕ ರಾಮದಾಸ್, ಮಂಗಳವಾರ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, 30 ವರ್ಷಗಳಿಂದ ತಾಯಿ ಮನೆಯಲ್ಲಿದ್ದೆ. ಈಗ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ತಾಯಿ ಮನೆಯಲ್ಲಿ ಇರಬೇಕಾ? ಬೇಡವಾ? ಎಂದು ಮಂಗಳವಾರ ಸಂಜೆ ತೀರ್ಮಾನಿಸುತ್ತೇನೆ. ನಾನು ಯಾರನ್ನೂ ಭೇಟಿ ಮಾಡುವುದಿಲ್ಲ. ಯಾರ ಜೊತೆಗೂ ಮಾತುಕತೆ ನಡೆಸುವುದಿಲ್ಲ. ನನ್ನ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಮಂಗಳವಾರ ಅವರುಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದರು.
ಕಾದು ಕಾದು ಹಿಂತಿರುಗಿದ ಸಿಂಹ, ಶ್ರೀವತ್ಸ: ಇನ್ನು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ ಮತ್ತು ಸಂಸದ ಪ್ರತಾಪ ಸಿಂಹ ಅವರು ಶಾಸಕ ಎಸ್.ಎ. ರಾಮದಾಸ್ ಭೇಟಿಯಾಗಲು ಸೋಮವಾರ ವಿಫಲ ಯತ್ನ ನಡೆಸಿದರು. ಅಷ್ಟರಲ್ಲಾಗಲೇ ಟಿಕೆಟ್ ಕೈತಪ್ಪಿದ ಬೇಸರದಲ್ಲಿದ್ದ ರಾಮದಾಸ್ ಅವರು, ಬೆಂಬಲಿಗರೊಡನ ಮೊದಲ ಮಹಡಿಯಲ್ಲಿ ಸಭೆ ನಡೆಸುತ್ತಿದ್ದರು. ಆದರೆ ಸಭೆಗೆ ಸಂಸದರನ್ನಾಗಲಿ, ಅಭ್ಯರ್ಥಿಯನ್ನಾಗಲಿ ಬಿಡಲಿಲ್ಲ.
ಶಿವಮೊಗ್ಗದಲ್ಲಿ ಈಶ್ವರಪ್ಪ ಸೊಸೆಗೆ ಟಿಕೆಟ್ ಸಾಧ್ಯತೆ!?
ಮೊದಲ ಮಹಡಿಯ ಮೆಟ್ಟಿಲ ಬಳಿಯೇ ರಾಮದಾಸ್ ಬೆಂಬಲಿಗರು ಮತ್ತು ಕಚೇರಿ ಸಹಾಯಕರು, ರಾಮದಾಸ್ ಅವರು ಕಾರ್ಯಕರ್ತರ ಸಭೆಯಲ್ಲಿದ್ದು, ಯಾರನ್ನೂ ಬಿಡಬಾರದು ಎಂದು ಹೇಳಿದ್ದಾರೆ. ಆದ್ದರಿಂದ ಅವರನ್ನು ಈಗ ಭೇಟಿಯಾಗಲು ಸಾಧ್ಯವಿಲ್ಲ. ನಾಳೆ ಅವರೇ ಬಂದು ಭೇಟಿ ಆಗುತ್ತಾರಂತೆ ಎಂದು ತಿಳಿಸಿದರು.
ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ನೀಡುವಂತೆ ಖರ್ಗೆ ಮುಂದೆ ಸಿದ್ದರಾಮಯ್ಯ ಬಿಗಿ ಪಟ್ಟು
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.