ಬಿಜೆಪಿಯೂ ಪಡೆಯುತ್ತಿದೆ ಕೈ ಗ್ಯಾರಂಟಿ ಲಾಭ: ವೀಣಾ ಕಾಶಪ್ಪನವರ
ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಲಾಭವನ್ನು ಕೇವವ ಕಾಂಗ್ರೆಸ್‌ಗೆ ಮತ ಹಾಕಿದವರು ಪಡೆಯುತ್ತಿಲ್ಲ. ಬಿಜೆಪಿಯವರೂ ಸಹ ಇದರ ಲಾಭ ಪಡೆಯುತ್ತಿದ್ದಾರೆ. ಸರ್ಕಾರ ಆರಂಭಿಸಿರುವ ಗೃಹಲಕ್ಷ್ಮಿ ಯೋಜನೆಗೆ ಯಾವುದೇ ರೀತಿಯಲ್ಲಿ ಕೊನೆಯ ದಿನಾಂಕ ಇಲ್ಲ. ಸಾರ್ವಜನಿಕರು ಆತಂಕಪಡುವುದು ಬೇಡ. ಆ.27ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ನಾಯಕರು ಚಾಲನೆ ನೀಡಲಿದ್ದಾರೆ: ವೀಣಾ ಕಾಶಪ್ಪನವರ

ಗುಳೇದಗುಡ್ಡ(ಆ.17): ಸರ್ಕಾರದ ಶಕ್ತಿ ಯೋಜನೆಯಿಂದ ಎಲ್ಲ ಮಹಿಳೆಯರಿಗೆ ಸಾಕಷ್ಟುಅನುಕೂಲವಾಗಿದೆ. ಬಿಜೆಪಿಯವರು ಈ ಯೋಜನೆ ಬಂದ್ ಮಾಡುತ್ತೇವೆ ಅಂತಾ ಊಹಾಪೋಹ ಎಬ್ಬಿಸುತ್ತಿದ್ದು, ಯಾವುದೇ ಕಾರಣಕ್ಕೂ ಉಚಿತ ಬಸ್ ಸಂಚಾರ ಯೋಜನೆ ಬಂದ್ ಆಗುವುದಿಲ್ಲ. ಬಿಜೆಪಿಯವರಿಗೆ ಕುಣಿಯೋಕೆ ಆಗದೇ ನೆಲ ಡೊಂಕು ಎನ್ನುವಂತೆ ನಮ್ಮ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಬಿಜೆಪಿ ವಿರುದ್ಧ ಹರಿಹಾಯ್ದರು.
ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಲಾಭವನ್ನು ಕೇವವ ಕಾಂಗ್ರೆಸ್‌ಗೆ ಮತ ಹಾಕಿದವರು ಪಡೆಯುತ್ತಿಲ್ಲ. ಬಿಜೆಪಿಯವರೂ ಸಹ ಇದರ ಲಾಭ ಪಡೆಯುತ್ತಿದ್ದಾರೆ. ಸರ್ಕಾರ ಆರಂಭಿಸಿರುವ ಗೃಹಲಕ್ಷ್ಮಿ ಯೋಜನೆಗೆ ಯಾವುದೇ ರೀತಿಯಲ್ಲಿ ಕೊನೆಯ ದಿನಾಂಕ ಇಲ್ಲ. ಸಾರ್ವಜನಿಕರು ಆತಂಕಪಡುವುದು ಬೇಡ. ಆ.27ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ನಾಯಕರು ಚಾಲನೆ ನೀಡಲಿದ್ದಾರೆ. ಆಯಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಚಾಲನೆ ನೀಡುವರು. ಈ ಮೂಲಕ ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯನ್ನು ಜನರಿಗೆ ತಲುಪಿಸಲಾಗುವುದು ಎಂದು ಹೇಳಿದರು.
ವಿಪಕ್ಷ ನಾಯಕನಾಗಲು ಏನೇನೋ ಮಾತನಾಡುತ್ತಿರುವ ಯತ್ನಾಳ್: ಸಚಿವ ತಿಮ್ಮಾಪೂರ
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಏನಾದರೂ ಗೊಂದಲಗಳಿದ್ದರೆ, ಏನಾದರೂ ಸಮಸ್ಯೆ ಕಂಡು ಬಂದಲ್ಲಿ ನಾವು ಹೆಲ್ಪಲೈನ್ ಮಾಡಿದ್ದು, ಹೆಲ್ಪಲೈನ್ ಸಂಖ್ಯೆ 9019742727 ಸಂಪರ್ಕಿಸಿ ಗೊಂದಲ ಬಗೆಹರಿಸಿಕೊಳ್ಳಬಹುದು. ಕಾಂಗ್ರೆಸ್ ಪಕ್ಷಾತೀತವಾಗಿ ಒಳ್ಳೆಯ ಯೋಜನೆ ಜಾರಿಗೆ ತಂದಿದೆ. ಬಿಜೆಪಿಯವರು ನಮ್ಮ ಯೋಜನೆ ಲಾಭ ಪಡೆದುಕೊಂಡು ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ, ಒಬ್ಬ ಬಿಜೆಪಿ ಕಾರ್ಯಕರ್ತ ಕೂಡ ಇದು ಕಾಂಗ್ರೆಸ್ ಯೋಜನೆ ನಮಗೆ ದರ ಲಾಭ ಬೇಡ ಎನ್ನುತ್ತಿಲ್ಲ ಎಂದು ವೀಣಾ ವ್ಯಂಗ್ಯವಾಡಿದರು.
ನಾನು ಲೋಕಸಭಾ ಸ್ಪರ್ಧೆಯ ಆಕಾಂಕ್ಷಿ:
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಮತ್ತೆ ಲೋಕಸಭೆಯ ಅಭ್ಯರ್ಥಿಯಾಗುವ ಅಭಿಲಾಸೆ ಹೊಂದಿದ್ದು, ಪಕ್ಷದ ಮುಖಂಡರು, ಹೈಕಮಾಂಡ್ ಮತ್ತೊಮ್ಮೆ ಅವಕಾಶ ಕೊಟ್ಟರೆ ಮತ್ತೆ ಸ್ಪರ್ಧಿಸುವೆ ಎಂದು ವೀಣಾ ಕಾಶಪ್ಪನವರ ಇದೇ ಸಂದರ್ಭದಲ್ಲಿ ಹೇಳಿದರು.
ಪರ-ವಿರೋಧದ ನಡುವೆ ರಾತ್ರೋರಾತ್ರಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ!
ನಾನು ನಿರಂತರವಾಗಿ ಕ್ಷೇತ್ರದ ಜಿಲ್ಲೆಯ ಜನರ ಜೊತೆಗೆ ಒಡನಾಟದಲ್ಲಿದ್ದೇನೆ. ಪಕ್ಷದಲ್ಲಿ ನನ್ನ ಬಿಟ್ಟು ಇನ್ನೂ ಅನೇಕರು ಆಕಾಂಕ್ಷಿಗಳಿರಬಹುದು. ಯಾರು ಸ್ಪರ್ಧಿಸಬೇಕೆಂಬುದುರ ಬಗ್ಗೆ ನಮ್ಮ ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದೇನೆ. ಕಳೆದ ಬಾರಿ ನನಗೆ 5 ಲಕ್ಷ ಮತಗಳನ್ನು ಮತದಾರರು ನೀಡಿದ್ದಾರೆ. ಈ ಬಾರಿಯೂ ಮತ್ತೊಮ್ಮೆ ಸ್ಪರ್ಧಿಸುವಂತೆ ಅನೇಕ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಹೀಗಾಗಿ, ಮತ್ತೊಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂದು ನಾನು ನಿರ್ಧರಿಸಿದ್ದೇನೆ ಎಂದು ವೀಣಾ ಕಾಶಪ್ಪನವರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಲಣ್ಣ ಯಲಿಗಾರ, ರಮೇಶ ಬೂದಿಹಾಳ, ಕೆಲೂರ ಗ್ರಾಪಂ ಅಧ್ಯಕ್ಷ ಮಹಾಲಿಂಗೇಶ ನಾಡಗೌಡ, ಸಲೀಂ ಮೋಮನಿ, ರಜಾಕ್ ಕುದರಿ, ರಾಜು ಸಂಗಮ, ಸಲೀಂ ಇಲಕಲ್, ಇತರರು ಇದ್ದರು.