ಪರ-ವಿರೋಧದ ನಡುವೆ ರಾತ್ರೋರಾತ್ರಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ!

ರಾತ್ರೋರಾತ್ರಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಘಟನೆ ಬಾಗಲಕೋಟೆಯ ಲಯನ್ಸ್ ವೃತ್ತದ ಬಳಿ ನಡೆದಿದೆ. ಶಿವಾಜಿ ಮೂರ್ತಿ ಸ್ಥಾಪನೆಯ ಸ್ಥಳ ವಿಚಾರವಾಗಿ ಮರಾಠ ಸಮುದಾಯದ ನಾಯಕರಲ್ಲಿ ಪರ ವಿರೋಧವಿತ್ತು.

Shivaji Maharajl statue installed overnight in lion circle at bagalkote rav

ಬಾಗಲಕೋಟೆ (ಆ.14) : ರಾತ್ರೋರಾತ್ರಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಘಟನೆ ಬಾಗಲಕೋಟೆಯ ಲಯನ್ಸ್ ವೃತ್ತದ ಬಳಿ ನಡೆದಿದೆ.

ಶಿವಾಜಿ ಮೂರ್ತಿ ಸ್ಥಾಪನೆಯ ಸ್ಥಳ ವಿಚಾರವಾಗಿ ಮರಾಠ ಸಮುದಾಯದ ನಾಯಕರಲ್ಲಿ ಪರ ವಿರೋಧವಿತ್ತು. ಆದರೆ ಮರಾಠ ಸಮುದಾಯದಲ್ಲೇ ಕೆಲವರು ಸ್ಥಳ ಬದಲಾವಣೆಗೆ ಸೂಚಿಸಿದರೆ ಇನ್ನೂ ಕೆಲವರಿಂದ ನಿಗದಿಯಾದ ಸ್ಥಳದಲ್ಲೇ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸುವಂತೆ ಒತ್ತಾಯಿಸಿದ್ದರು. ಈ ವಿಚಾರ ಚರ್ಚೆಯಲ್ಲಿರುವಾಗಲೇ ಇಂದು ದಿಢೀರ್ ನಿಗದಿಯಾದ ಸ್ಥಳದಲ್ಲೇ ಬೇರೊಂದು ಶಿವಾಜಿ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಿರುವ ಒಂದು ಗುಂಪು.

ಬಿಜೆಪಿಗೆ ಬಿಸಿ ತುಪ್ಪವಾದ ಪುತ್ತಿಲ; ಪುತ್ತಿಲ ಪರಿವಾರದಿಂದ ಸೌಜನ್ಯ ಪರ ಹೋರಾಟ

ಈಗಾಗಲೇ ಪ್ರತಿಷ್ಠಾಪನೆಗೆ ಸಿದ್ದಗೊಂಡಿರೋ ಬೃಹತ್ ಶಿವಾಜಿ ಮೂರ್ತಿ. ಅದರ ಬದಲಾಗಿ ಬೇರೊಂದು ಚಿಕ್ಕದಾದ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣ ಭಾಂಡಗೆ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು,  ಶಿವಾಜಿ ಮೂರ್ತಿಯನ್ನ ಅಭಿಮಾನಿಗಳು ಸ್ಥಾಪನೆ ಮಾಡಿರೋದಕ್ಕೆ ಸ್ವಾಗತ ಎಂದರು.

ಭೈರಾಪುರ ಸೇತುವೆ ಬಳಿ ಹಳೇ ಕಾಲದ ನಾಣ್ಯ, ಮಣಿನಾಲ್ಮೂರುನಲ್ಲಿ ಶಿಲಾಮಯ ದೇಗುಲ ಕುರುಹು ಪತ್ತೆ!

ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನ ವಿಚಾರವಾಗಿ ಸರ್ಕಾರದ ಅನುಮತಿ ಪಡೆದೆ ನಿರ್ಧಾರ ಮಾಡಲಾಗಿತ್ತು. ಆದ್ರೆ ಕೆಲವರು ಅಭಿಮಾನಿಗಳು ಇಂದು ಮೂರ್ತಿ ಸ್ಥಾಪನೆ ಮಾಡಿದ್ದಾರೆ. ಸ್ಥಾಪನೆ ಮಾಡಿರುವುದು ಸಂತೋಷ. ಆದರೆ ನಿಗದಿಯಾಗಿರೋ ಸ್ಥಳದಲ್ಲೇ  ಬೃಹತ್ ಶಿವಾಜಿ ಮೂರ್ತಿಯನ್ನು ಶೀಘ್ರದಲ್ಲಿಯೇ ಸ್ಥಾಪನೆ ಮಾಡಲಾಗುವುದೆಂದು ಎಂದು ಭರವಸೆ ನೀಡಿದರು.

Latest Videos
Follow Us:
Download App:
  • android
  • ios