*  ಬೆಳ​ಗಾವಿ, ಮೈಸೂರು, ಮಂಗ​ಳೂ​ರಲ್ಲಿ ಬಿಜೆ​ಪಿ ವಿಭಾ​ಗೀಯ ಮಟ್ಟದ ಸಭೆ ಮುಕ್ತಾ​ಯ*  ಮೈಸೂರು ಭಾಗ​ದಲ್ಲಿ ಹೆ​ಚ್ಚಿನ ಸ್ಥಾನ ಗೆಲ್ಲ​ಲು, ಪಕ್ಷದ ಶಕ್ತಿ ಸದ್ಬ​ಳ​ಕೆಗೆ ನಾಯ​ಕರ ಸಲ​ಹೆ*  ಕಾಂಗ್ರೆ​ಸ್‌​ನಲ್ಲಿ ಪರಿ​ವಾ​ರದ ಕಲ್ಪನೆ ಇಲ್ಲ, ಸಿದ್ದು ನರ​ಹಂತಕ ಹುಲಿ  

ಬೆಳಗಾವಿ/ಮೈಸೂ​ರು/​ಮಂಗ​ಳೂ​ರು(ಏ.14): ಮುಂಬ​ರುವ ವಿಧಾ​ನ​ಸ​ಭಾ ಚುನಾ​ವ​ಣೆ​ಯನ್ನು(Karnataka Assembly Election) ದೃಷ್ಟಿ​ಯ​ಲ್ಲಿ​ಟ್ಟು​ಕೊಂಡು ರಾಜ್ಯದ ಬೆಳ​ಗಾವಿ, ಮಂಗ​ಳೂರು ಮತ್ತು ಮೈಸೂ​ರಲ್ಲಿ ನಡೆದ ಬಿಜೆಪಿ(BJP) ವಿಭಾ​ಗೀಯ ಮಟ್ಟದ ಎರಡು ದಿನ​ಗಳ ಸಭೆ ಬುಧ​ವಾರ ಸಮಾ​ರೋ​ಪ​ಗೊಂಡಿ​ತು.

ರಾಜ್ಯ ಬಿಜೆಪಿ ಉಸ್ತು​ವಾರಿ ಅರುಣ್‌ ಸಿಂಗ್‌(Arun Singh), ಮುಖ್ಯ​ಮಂತ್ರಿ ಬೊಮ್ಮಾಯಿ(Basavaraj Bommai) ಮತ್ತು ಪಕ್ಷದ ರಾಜ್ಯಾ​ಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nanli Kumar Kateel) ನೇತೃ​ತ್ವದ ಮೂರು ಪ್ರತ್ಯೇಕ ತಂಡದ ನೇತೃ​ತ್ವ​ದಲ್ಲಿ ನಡೆದ ಸಭೆ​ಯಲ್ಲಿ ಚುನಾ​ವ​ಣೆ​ಗೆ ಪಕ್ಷ​ದ ಸಿದ್ಧ​ತೆಯನ್ನು ಪರಿ​ಶೀ​ಲಿ​ಸ​ಲಾ​ಯಿತು. 150 ಸ್ಥಾನದ ಗುರಿ ಸಾಧ​ನೆಗೆ ಅಗತ್ಯ ಸಲ​ಹೆ-ಸೂಚ​ನೆ​ಗ​ಳನ್ನು ನೀಡ​ಲಾ​ಯಿತು. ಭಿನ್ನ​ಮತ ಬದಿ​ಗಿಟ್ಟು, ಒಗ್ಗ​ಟ್ಟಿ​ನಿಂದ ಕೆಲಸ ಮಾಡಿ, ಫಲಾ​ನು​ಭ​ವಿ​ಗಳ ಸಮಾ​ವೇಶ ಏರ್ಪ​ಡಿಸಿ ಮತ​ದಾ​ರ​ರನ್ನು ಸೆಳೆ​ಯುವ ಪ್ರಯತ್ನ ನಡೆಸಿ ಎಂಬಿ​ತ್ಯಾದಿ ಸಲ​ಹೆ​ಗ​ಳನ್ನು ಜಿಲ್ಲಾ ಮುಖಂಡ​ರಿಗೆ ನೀಡ​ಲಾ​ಯಿ​ತು.

ಭಾರತೀಯರೆಂದು ಸಾಬೀತಿಗೆ ಹಿಂದಿ ಕಲೀಬೇಕಿಲ್ಲ: ಅಣ್ಣಾಮಲೈ

ಬೆಳ​ಗಾ​ವಿ​ಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ(BS Yediyurappa) ನೇತೃತ್ವದಲ್ಲಿ ನಡೆದ ಸಭೆ​ಯಲ್ಲಿ ಪಕ್ಷ​ದೊ​ಳ​ಗಿನ ಭಿನ್ನ​ಮ​ತವೇ ಪ್ರಮು​ಖ​ವಾಗಿ ಚರ್ಚೆಗೆ ಬಂತು. ಮುಂದಿನ ಚುನಾ ವ​ಣೆ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ಮುಖಂಡರು ಭಿನ್ನ​ಮತ ಮರೆತು ಪಕ್ಷದ ಗೆಲು​ವಿಗೆ ಶ್ರಮಿ​ಸ​ಬೇಕು ಎಂಬ ಸಂದೇ​ಶ​ವನ್ನು ರವಾ​ನಿ​ಸ​ಲಾ​ಯಿ​ತು.

ಮೈಸೂ​ರಲ್ಲಿ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಸಚಿವ ಜಗ​ದೀಶ್‌ ಶೆಟ್ಟರ್‌, ಸಚಿವರಾದ ಕೆ.ಎ​ಸ್‌.​ಈಶ್ವರಪ್ಪ, ಎಸ್‌.​ಟಿ.​ಸೋ​ಮ​ಶೇ​ಖರ್‌, ವಿ.ಸೋ​ಮಣ್ಣ ಉಪ​ಸ್ಥಿ​ತಿ​ಯಲ್ಲಿ ನಡೆದ ಸಭೆ​ಯಲ್ಲಿ ಪಕ್ಷದ ಸ್ಥಳೀಯ ಮುಖಂಡರಿಗೆ ಬಿಜೆ​ಪಿ ಶಕ್ತಿ ಸದ್ಬ​ಳಕೆ ಕುರಿತು ಸಲಹೆ ನೀಡ​ಲಾ​ಯಿತು. 2023ರಲ್ಲಿ ರಾಜ್ಯ​ದಲ್ಲಿ ಮತ್ತು 2024ರಲ್ಲಿ ಕೇಂದ್ರ​ದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿ​ಕಾ​ರಕ್ಕೆ ಬರ​ಬೇಕು, ಮೈಸೂರು ಭಾಗ​ದಲ್ಲಿ ಪಕ್ಷಕ್ಕೆ ಪ್ರಾಬ​ಲ್ಯ​ವಿಲ್ಲ ಎಂಬ ಭಾವನೆ ಅಳಿ​ಸಿ​ಹಾ​ಕ​ಬೇಕು ಎಂದು ತಿಳಿ​ಸ​ಲಾ​ಯಿ​ತು.

ಅಭಿ​ವೃದ್ಧಿ ಜತೆಗೆ ಹಿಂದು​ತ್ವ: 

ದಕ್ಷಿಣ ಕನ್ನ​ಡದ ಬಂಟ್ವಾ​ಳ​ದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಭೆ​ಯಲ್ಲಿ ಮುಖ್ಯ​ಮಂತ್ರಿ ಬೊಮ್ಮಾಯಿ ಅವರು ಪಕ್ಷ ಸಂಘ​ಟ​ನೆ​ಗೆ ಸಂಬಂಧಿಸಿ ಹಲವು ಸಲಹೆಗಳನ್ನು ನೀಡಿ​ದರು. ಅಭಿವೃದ್ಧಿ ಜತೆ ಹಿಂದುತ್ವ(Hindutva) ಕರಾವಳಿ ಬಿಜೆಪಿ ಜತೆಗಿದ್ದು, ಇದರ ಆಧಾರದಲ್ಲೇ ಮುಂದಿನ ಅಸೆಂಬ್ಲಿ ಚುನಾವಣೆಗೆ ಸಜ್ಜಾಗಬೇಕು ಎಂದು ತಿಳಿ​ಸಿ​ದ​ರು.

ಮತ​ದಾ​ರ​ರನ್ನು ಬಿಜೆಪಿ ಕಡೆಗೆ ಸೆಳೆಯಲು ಫಲಾನುಭವಿಗಳ ಸಮಾವೇಶ ಏರ್ಪಡಿಸಬೇಕು, ಪ್ರತಿ ಮನೆಯಲ್ಲೂ ಒಬ್ಬೊಬ್ಬರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಫಲಾನುಭವಿ ಇದ್ದಾರೆ. ಅವರನ್ನು ಸಂಪರ್ಕಿಸಿ, ಬಿಜೆಪಿಗೆ ಸೆಳೆ​ಯುವ ಕೆಲ​ಸ ತಕ್ಷಣದಿಂದ ಶುರುವಾಗಬೇಕು. ಈ ಬಾರಿ ಬಹುಮತಕ್ಕೆ ಕೊರತೆಯಾಗದಂತೆ ಸರ್ಕಾರ ರಚನೆಯಾಗುವಂತಾಗಬೇಕು ಎಂದು ಸಲಹೆ ನೀಡಿ​ದ​ರು.

ಕಾಂಗ್ರೆ​ಸ್‌​ನಲ್ಲಿ ಪರಿ​ವಾ​ರದ ಕಲ್ಪನೆ ಇಲ್ಲ, ಸಿದ್ದು ನರ​ಹಂತಕ ಹುಲಿ-ಕಟೀ​ಲ್‌

ಮೈಸೂರು: ರಾಜ್ಯದಲ್ಲಿ ನರಹಂತಕ ಹುಲಿ ಇದ್ದರೆ ಅದು ಸಿದ್ದರಾಮಯ್ಯ. ಕಾಂಗ್ರೆಸ್‌ನಲ್ಲಿ(Congress) ಪರಿವಾರದ ಕಲ್ಪನೆ ಇಲ್ಲ, ಬರೀ ಕುಟುಂಬದ ಚಿಂತನೆ ಅಡಗಿದೆ ಎಂದು ಬಿಜೆಪಿ ರಾಜ್ಯಾ​ಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋ​ಪಿ​ಸಿ​ದರು.

'40% ಕಮಿಷನ್‌ ಕೈ ಸೃಷ್ಟಿಸಿದ ಟೂಲ್‌ಕಿಟ್‌: ಕಾಂಗ್ರೆಸ್‌ ‘ಬೇನಾಮಿ ಅಧ್ಯಕ್ಷೆ’ಯ ಮಹಾ ಕೈವಾಡವೇ?'

ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಮೈಸೂರು ವಿಭಾಗ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ನದು ಆಡಳಿತ ಮಹಿಷಾಸುರನ ಆಡಳಿತ. ರಾಜು, ಕುಟ್ಟಪ್ಪ, ಶರತ್‌ ಹತ್ಯೆಯಾದಾಗ ಸಿದ್ದರಾಮಯ್ಯ ಯಾರ ಮನೆಗೂ ಹೋಗಲಿಲ್ಲ. 24 ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಆದರೂ ಯಾರಿಗೂ ಪರಿಹಾರ ನೀಡಲಿಲ್ಲ. ಸೋನಿಯಾ, ರಾಹುಲ್‌, ವಾದ್ರಾ, ಡಿ.ಕೆ. ಶಿವಕುಮಾರ್‌ ಜಾಮೀನಿನ​ಲ್ಲಿ​ದ್ದಾ​ರೆ. ಅವ​ರೇನು ಸ್ವಾತಂತ್ರ್ಯ ಹೋರಾಟಗಾರರು ಅಂತ ಜಾಮೀನು ಪಡೆ​ದು​ಕೊಂಡಿ​ದ್ದಾ​ರೆಯೇ ಎಂದು ಪ್ರಶ್ನಿ​ಸಿ​ದ​ರು.

ರಾಜ್ಯ​ದ​ಲ್ಲೀಗ ಪರಿವರ್ತನೆ ಯುಗ ಆರಂಭವಾಗಿದೆ. ಕಾಂಗ್ರೆಸ್‌ ಮನೆ ಖಾಲಿ ಆಗುತ್ತಿದ್ದು, ಬಿಜೆಪಿ ಮನೆ ತುಂಬುತ್ತಿದೆ. ಚಾಮುಂಡೇಶ್ವರಿ ದೇವಿ ಆಶೀರ್ವಾದ, ವರುಣನ ವರದೊಂದಿಗೆ ಮೈಸೂರು ನಗರದಿಂದ ನಾವು ಸಭೆ ಮತ್ತು ಸಂಘಟನೆ ಆರಂಭಿಸಿದ್ದೇವೆ. 150ಕ್ಕೂ ಹೆಚ್ಚು ಸ್ಥಾನಗಳಿಸುವುದು ಮೈಸೂರು ನಗರದಿಂದ ಆರಂಭವಾಗಲಿದೆ ಎಂದ​ರು.