Asianet Suvarna News Asianet Suvarna News

ರಾತ್ರಿಯೊಳಗೆ 170ಕ್ಕೂ ಅಧಿಕ ಕ್ಷೇತ್ರಗಳ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ ಮಾಹಿತಿ

ರಾಜ್ಯ ವಿಧಾನಸಭಾ ಚುನಾವಣೆಯ ಮೊದಲ ಹಂತದ ಪಟ್ಟಿ ಸಿದ್ಧವಾಗಿದ್ದು, 170ಕ್ಕೂ ಅಧಿಕ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾತ್ರಿಯೊಳಗೆ ಬಿಡುಗಡೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

BJP 170 constituencies Candidates released into the night CM Bommai information sat
Author
First Published Apr 11, 2023, 6:00 PM IST | Last Updated Apr 11, 2023, 6:00 PM IST

ನವದೆಹಲಿ (ಏ.11): ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಯ ಮೊದಲ ಹಂತದ ಪಟ್ಟಿ ಸಿದ್ಧವಾಗಿದ್ದು, 170ಕ್ಕೂ ಅಧಿಕ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾತ್ರಿಯೊಳಗೆ ಬಿಡುಗಡೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಸಭೆ ಚುನಾವಣೆ ಕುರಿತಂತೆ ಹಲವು ಸತ್ತಿನ ಮಾತುಕತೆ ನಂತರ ಅಂತಿಮವಾಗಿ ಎಲ್ಲವೂ ನಿರ್ಣಯ ಆಗಿದೆ. ನಮ್ಮ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ಸಂಜೆ ದೆಹಲಿಗೆ ಬಂದ ನಂತರ ಅವರೊಂದಿಗೆ ಮಾತುಕತೆ ನಡೆಸಿ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಮೊದಲ ಹಂತದಲ್ಲಿ ದೊಡ್ಡ ಪಟ್ಟಿಯನ್ನು ಹಾಗೂ ಎರಡನೇ ಹಂತದಲ್ಲಿ ಉಳಿದ ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. 

ರಾಜ್ಯದ 35 ಹಾಲಿ ಶಾಸಕರಿಗೆ ಬಿಜೆಪಿ ಕೊಕ್‌?: ಯಾರಿಗೆಲ್ಲಾ ಮಿಸ್‌ ಆಯ್ತು ಟಿಕೆಟ್!

ನಾನು ಚುನಾಣಾ ರಾಜಕಾರಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ನಮ್ಮ ರಾಷ್ಟ್ರೀಯ ಜಾಯಕರಿಗೆ ಪತ್ರ ಬರೆದಿದ್ದಾರೆ. ಈ ಮಾತನ್ನು ಅವರು ಖಾಸಗಿಯಾಗಿ ನಮಗೆ ಹೇಳುತ್ತಿದ್ದರು. ಆದರೆ, ನಾವು ನಿಮ್ಮ ಅನುಭವ ಮತ್ತು ಸೇವೆ ಪಕ್ಷಕ್ಕೆ ಬೇಕಾಗಿದ್ದು ನೀವು ಜೊತೆಗಿರಬೇಕು ಎಂದು ಹೇಳಿದ್ದೆವು. ಈಗ ದೀರ್ಘ ಚಿಂತನೆ ಮಾಡಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ನಮಗೆ ಒಂದು ಹಂತದ ಸೀನಿಯಾರಿಟಿ ಬಂದ ನಂತರ ನಾವು ಯುವಕರಿಗೆ ಅವಕಾಶ ಮಾಡಿಕೊಡಬೇಕು ಎಂಬ ನಿಯಮವನ್ನು ಬಿಜೆಪಿ ಹುಟ್ಟುಹಾಕಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಅನ್ವಯ ಮಾಡಲಾಗಿದ್ದು, ಈಗ ರಾಜ್ಯದಲ್ಲೂ ಅನ್ವಯ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಕಾಂಗ್ರೆಸ್‌ಗಿರುವ ವ್ಯತ್ಯಾಸ ನೋಡಿ:  ಇನ್ನು ದಾವಣಗೆರೆಯಲ್ಲಿ 92 ವರ್ಷದ ಹಿರಿಯ ವ್ಯಕ್ತಿ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಬೇರೆ ಪಕ್ಷಕ್ಕೂ ನಮಗೂ ಇರುವ ವ್ಯತ್ಯಾಸ ಇದಾಗಿದೆ. ಹೊಸ ನಿಯಮವನ್ನು ನಾವು ಜಾರಿಗೆ ತರಲಾಗುತ್ತಿದ್ದು, ಇದಕ್ಕೆ ಸ್ವತಃ ಈಶ್ವರಪ್ಪ ಅವರು ಚುನಾವಣಾ ರಾಜಕೀಯ ನೀಡಿದ್ದಾರೆ. ಅವರು ಈಗ ಬಿಜೆಪಿಗೆ ಮಾದರಿ ಆಗಿದ್ದಾರೆ. ಇದೇ ಬಿಜೆಪಿಗೂ ಮತ್ತು ಕಾಂಗ್ರೆಸ್‌ಗೆ ಇರುವ ವ್ಯತ್ಯಾಸವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಎದುರಿಸುತ್ತೇವೆ:  ಜಗದೀಶ್‌ ಶೆಟ್ಟರ್‌ ಅವರು ಕೂಡ ಹಿರಿಯ ನಾಯಕರಿದ್ದಾರೆ. ನಾನು ಅವರಿಗೆ ಕರೆ ಮಾಡಿದಾಗ ಹಲವು ಕೆಲಸ ಮಾಡುವುದು ಬಾಕಿಯಿದ್ದು, ಇದೊಂದು ಬಾರಿ ಸ್ಪರ್ಧೆ ಮಾಡಿ ತಮ್ಮ ಕೆಲಸವನ್ನು ಮುಗಿಸಿ ಗೌರವವಾಗಿಯೇ ನಿವೃತ್ತಿ ಹೊಂದುತ್ತೇನೆ ಎಂಬುದನ್ನು ತಿಳಿಸಿದ್ದಾರೆ. ಇನ್ನು ಬೇರೆ ಯಾರು ನಿವೃತ್ತಿ ಘೋಷಣೆ ಮಾಡುತ್ತಾರೆ ಎಂಬುದು ತಿಳಿದಿಲ್ಲ. ಇನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹೈಕಮಾಂಡ್‌ನಿಂದ ಯಾವುದೇ ಕರೆಯನ್ನು ಮಾಡಿಲ್ಲ ಎಂದು ಮಾಹಿತಿ ನೀಡಿದರು. 

'ಸಾವಿರ ತಲೆ ತಗೆದು ಪ್ರಲ್ಹಾದ್‌ ಜೋಶಿ, ಬಿಎಲ್‌ ಸಂತೋಷ್‌ಗೆ ಜಾಗ..' ಬಿಜೆಪಿ ಟಿಕೆಟ್‌ ಬೆಂಕಿಗೆ ಕಾಂಗ್ರೆಸ್‌ ಟಾಂಗ್‌!

ಆತುರದ ನಿರ್ಧಾರ ಮಾಡದಂತೆ ಸವದಿಗೆ ಸೂಚನೆ:  ಲಕ್ಷ್ಮಣ ಸವದಿ ಅವರು ಅಥಣಿಯಿಂದ ಟಿಕೆಟ್‌ ಕೊಡುವಂತೆ ಕೇಳಿರುವುದು ನಿಜ. ಆದರೆ, ಮಹೇಶ್‌ ಕುಮಟಹಳ್ಳಿ ಅವರು ಬಿಜೆಪಿ ಸರ್ಕಾರ ರಚನೆ ಮಾಡಲು ಪ್ರಮುಖ ಪಾತ್ರವನ್ನು ವಹಿಸಿರುವ ಹಿನ್ನೆಲೆಯಲ್ಲಿ ಅವರೊಂದಿಗೆ ಚರ್ಚೆ ಮಾಡಲಾಗುತ್ತಿದೆ. ಆದರೆ, ಲಕ್ಷ್ಮಣ ಸವದಿ ಅವರಿಗೆ ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ಸೂಚನೆ ನೀಡಿದ್ದೇವೆ. ಆದರೆ, ಲಕ್ಷ್ಮಣ ಸವದಿ ಬಿಜೆಪಿಗೆ ಹೈಕಮಾಂಡ್‌ ಮಾತು ಕೇಳದೇ ಬಂಡಾಯವೇಳುವ ಎಲ್ಲ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

Latest Videos
Follow Us:
Download App:
  • android
  • ios