‘ಬಿಹಾರದಲ್ಲಿ ಎನ್‌ಡಿಎಗೆ ದೊರೆತ ಅಗಾಧ ಜನಾದೇಶವು ಅಭಿವೃದ್ಧಿ, ಮಹಿಳಾ ಸುರಕ್ಷತೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಮಾಡಿದ ಕಾರ್ಯಗಳಿಗೆ ಜನರ ಅನುಮೋದನೆಯ ಮುದ್ರೆಯಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

ನವದೆಹಲಿ: ‘ಬಿಹಾರದಲ್ಲಿ ಎನ್‌ಡಿಎಗೆ ದೊರೆತ ಅಗಾಧ ಜನಾದೇಶವು ಅಭಿವೃದ್ಧಿ, ಮಹಿಳಾ ಸುರಕ್ಷತೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಮಾಡಿದ ಕಾರ್ಯಗಳಿಗೆ ಜನರ ಅನುಮೋದನೆಯ ಮುದ್ರೆಯಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

ಎಕ್ಸ್‌ನಲ್ಲಿ ಸರಣಿ ಪೋಸ್ಟ್‌

ಬಿಹಾರ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಅವರು, ‘ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಹಾರಕ್ಕಾಗಿ ಪೂರ್ಣ ಹೃದಯದಿಂದ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯವನ್ನು ಜಂಗಲ್‌ ರಾಜ್‌ನ ಕತ್ತಲೆಯಿಂದ ಹೊರತರಲು ಯತ್ನಿಸಿದ್ದಾರೆ.

ನಂಬಿಕೆಯ ಸಂಕೇತ

ಬಿಹಾರದ ಜನರ ಪ್ರತಿ ಮತವೂ ಭಾರತದ ಭದ್ರತೆಗೆ ಬೆದರಿಕೆ ಹಾಕುವವರ ವಿರುದ್ಧ ಮೋದಿ ಸರ್ಕಾರದ ನೀತಿಯ ಮೇಲಿನ ನಂಬಿಕೆಯ ಸಂಕೇತವಾಗಿದೆ. ಜ್ಞಾನ, ಕಠಿಣ ಪರಿಶ್ರಮ ಮತ್ತು ಪ್ರಜಾಪ್ರಭುತ್ವದ ರಕ್ಷಕರಾದ ಬಿಹಾರದ ನೆಲದ ಜನರಿಗೆ ಹೃತ್ಪೂರ್ವಕ ನಮನಗಳು’ ಎಂದರು.