ದೆಹಲಿ ಸ್ಫೋಟ ಸಂಬಂಧ ಓರ್ವ ಶಂಕಿತ ಪೊಲೀಸ್ ವಶಕ್ಕೆ, ಎನ್ಐಎ ತನಿಖೆಗೆ ಆದೇಶಿಸಿದ ಅಮಿತ್ ಶಾ , ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಎನ್ಐಎ ಜೊತೆ ಎನ್‌ಎಸ್‌ಜಿ ಕೂಡ ತನಿಖೆ ನಡೆಸಲಿದೆ. ಸ್ಥಳಕ್ಕೆ ಅಮಿತ್ ಶಾ ಭೇಟಿ ನೀಡುತ್ತಿದ್ದಾರೆ.

ನವದೆಹಲಿ (ನ.10) ದೆಹಲಿ ಕೆಂಪು ಕೋಟೆ ಬಳಿಯ ಟ್ರಾಫಿಕ್ ಸಿಗ್ನಲ್ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಓರ್ವ ಶಂಕಿತನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತು ಮಾತನಾಡಿದ ಅಮಿತ್ ಶಾ, ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಸದ್ಯ ಅಮಿತ್ ಶಾ ಗಾಯಾಳುಗಳನ್ನು ದಾಖಲಿಸಿರುವ ಆಸ್ಪತ್ರೆಗೆ ದೌಡಾಯಿಸಿದ್ದಾರೆ.ಗಾಯಾಳುಗಳ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಎಲ್ಲಾ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ಸೂಚಿಸಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಎನ್ಐಎ, ಎನ್‌ಎಸ್‌ಜಿಯಿಂದ ದೆಹಲಿ ಬ್ಲಾಸ್ಟ್ ತನಿಖೆ

ದೆಹಲಿ ಕಾರು ಸ್ಫೋಟದ ಹಿಂದೆ ಭಯೋತ್ಪಾದಕರ ಕೃತ್ಯದ ಅನುಮಾನ ಹೆಚ್ಚಾಗುತ್ತಿದೆ. ಹೀಗಾಗಿ ಕೇಂದ್ರ ಸಚಿವ ಅಮಿತ್ ಶಾ ಎರಡು ತನಿಖಾ ಸಂಸ್ಥೆಗಳಿಗೆ ಪ್ರಕರಣ ವಹಿಸಿದ್ದಾರೆ. ಎನ್ಐಎ ಹಾಗೂ ಎನ್‌ಎಸ್‌ಜಿಗೆ ತನಿಖೆ ಹೊಣೆ ನೀಡಿದ್ದಾರೆ. ದೆಹಲಿ ಕ್ರೈಂ ಬ್ರ್ಯಾಂಚ್, ದೆಹಲಿ ಪೊಲೀಸ್, ಎನ್ಎಸ್‌ಜಿ, ಎನ್ಐಎ ಹಾಗೂ ಎಫ್ಎಸ್ಎಲ್ ತಂಡ ಸ್ಥಳದಲ್ಲಿದೆ.

ಐ20 ಕಾರಿನಲ್ಲಿ ಸ್ಫೋಟ

ಅಮಿತ್ ಶಾ ಮಾಧ್ಯಮಕ್ಕ ನೀಡಿದ ಹೇಳಿಕೆಯಲ್ಲಿ ಸ್ಫೋಟ ಹ್ಯುಂಡೈ ಐ20 ಕಾರಿನಲ್ಲಿ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಿಗ್ನಲ್ ಬಳಿ ಬಂದ ಕಾರು ಸ್ಫೋಟಗೊಂಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಗಂಭೀರ ಪ್ರಕರಣ ಇದಾಗಿದ್ದು, ತೀವ್ರ ತನಿಖೆಗೆ ಸೂಚನೆ ನೀಡಲಾಗಿದೆ.

ಹರ್ಯಾಣ ಉಗ್ರ ಕೃತ್ಯಕ್ಕೂ ದೆಹಲಿ ಬ್ಲಾಸ್ಟ್‌ ಲಿಂಕ್

ಹರ್ಯಾಣದ ಫರೀದಾಬಾದ್‌ನಲ್ಲಿ 2,900 ಕೆಜಿ ಸ್ಫೋಟಕ ಪತ್ತೆಯಾಗಿತ್ತು. ತನಿಖಾ ಎಜೆನ್ಸಿಗಳು ಈ ಪ್ರಕರಣ ಸಂಬಂಧ ಶಂಕಿತ ಉಗ್ರರನ್ನು ಅರೆಸ್ಟ್ ಮಾಡಲಾಗಿದೆ. ಇದೀಗ ದೆಹಲಿಯಲ್ಲಿ ಸಂಭವಿಸಿದ ಸ್ಫೋಟಕ್ಕೂ ಹರ್ಯಾಣ ಸ್ಫೋಟಕ ಪತ್ತೆಗೂ ಲಿಂಕ್ ಇದೆಯಾ ಅನ್ನೋ ಅನುಮಾನ ಹೆಚ್ಚಾಗುತ್ತಿದೆ. ಕಾರಣ ದೆಹಲಿ ಕೆಂಪು ಕೋಟೆ ಬಳಿ ಸ್ಫೋಟದಲ್ಲಿ ಬಳಕೆಯಾಗಿದ್ದು ಹರ್ಯಾಣ ನೋಂದಣಿ ಇರುವ ಐ20 ಕಾರು. ಇದು ಭಯೋತ್ಪಾದಕ ಕೃತ್ಯ ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ಹೈ ಅಲರ್ಟ್

ದೆಹಲಿ ಸ್ಫೋಟ ಪ್ರಕರಣ ಬೆನ್ನಲ್ಲೇ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕಾರು, ಹೊರಗಿನಿಂದ ಆಗಮಿಸುವರು, ವಾಹನಗಳು, ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ, ಜನನಿಬಿಡಿ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಬೀಟ್ ಪೊಲೀಸರಿಗೂ ಅಲರ್ಟ್ ನೀಡಲಾಗಿದೆ. ತೀವ್ರ ತಪಾಸಣೆ, ಭದ್ರತೆ ಹೆಚ್ಚಳಕ್ಕೆ ಸೂಚನೆ ನೀಡಲಾಗಿದೆ.

ಕೇಂದ್ರ ಸರ್ಕಾರ ಈಗಗಾಗಲೇ ಎಲ್ಲಾ ನಗರ ಹಾಗೂ ಪಟ್ಟಣಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಮುಂಬೈ, ಕೋಲ್ಕತಾ ಸೇರಿದಂತೆ ಪ್ರಮುಖ ನಗರಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.