ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಬಿಸಿಲಿನ ಜತೆಗೆ ಚುನಾವಣೆ ಕಾವು ದಿನದಿನಕ್ಕೆ ಹೆಚ್ಚುತ್ತಿದೆ. ಇದೀಗ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ಸ್ಪರ್ಧೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಚಿತ್ರದುರ್ಗ (ಏ.9) : ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಬಿಸಿಲಿನ ಜತೆಗೆ ಚುನಾವಣೆ ಕಾವು ದಿನದಿನಕ್ಕೆ ಹೆಚ್ಚುತ್ತಿದೆ. ಇದೀಗ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ಸ್ಪರ್ಧೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಬಸವರಾಜನ್ ಬದಲು ಸೌಭಾಗ್ಯ ಬಸವರಾಜನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂದು ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಸವರಾಜನ್.

ಮೊಳಕಾಲ್ಮೂರು ಟಿಕೆಟ್ ಸಿಕ್ಕದ್ದಕ್ಕೆ ಯೋಗೀಶ್ ಬಾಬು ರೆಬೆಲ್, ಇದು ಶೋಭೆ ತರಲ್ಲ ಎಂದ ಕೈ ಅಭ್ಯರ್ಥಿ ಗೋಪಾಲಕೃಷ್ಣ!

ಕ್ಷೇತ್ರದಲ್ಲಿ ಶೇಕಡಾ 50 ಕ್ಕೂ ಹೆಚ್ಚು ಮಹಿಳಾ ಮತದಾರರರಿದ್ದು ಮಹಿಳಾ ಪ್ರತಿನಿಧಿಯಾಗಿ ಕಣಕ್ಕಿಳಿಯುವೆ ಎಂದಿರುವ ಸೌಭಾಗ್ಯ ಬಸವರಾಜನ್. ಈ ಹಿಂದೆ ನಾಲ್ಕು ಬಾರಿ ಜಿಪಂ ಅಧ್ಯಕ್ಷ ಳಾಗಿ ಕಾರ್ಯನಿರ್ವಹಿಸಿದ್ದೇನೆ. ಗ್ರಾಫಂ ತಾಪಂ, ಅಧ್ಯಕ್ಷಳಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಂದೂ ಸೋಲು ಕಂಡಿಲ್ಲ. ಕ್ಷೇತ್ರದ ಮಹಿಳೆಯರು ನನ್ನ ಆಯ್ಕೆ ಮಾಡುತ್ತಾರೆಂಬ ಭರವಸೆ ಇದೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಬಸವರಾಜನ್ ಸೆಳೆಯಲು ರಘು ಆಚಾರ್ ಪ್ರಯತ್ನ:

ಕಾಂಗ್ರೆಸ್‌ ಟಿಕೆಟ್‌ ತಪ್ಪಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ರಘು ಆಚಾರ್‌(Raghu achar) ಶನಿವಾರ ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌(SK Basavarajan) ನಿವಾಸಕ್ಕೆ ಭೇಟಿ ನೀಡಿ ಜೆಡಿಎಸ್‌ಗೆ ಬರುವಂತೆ ಆಹ್ವಾನ ನೀಡಿದರು ಎನ್ನಲಾಗಿದೆ.

ಹೊಸದುರ್ಗ ಇಲ್ಲವೇ ಹಿರಿಯೂರಿನಿಂದ ಕಣಕ್ಕಿಳಿಯುವಂತೆ ರಘು ಆಚಾರ್‌ ಅವರು ಬಸವರಾಜನ್‌ಗೆ ವಿನಂತಿಸಿದ್ದಾರೆ. ರಘು ಆಚಾರ್‌ ಆಹ್ವಾನ ಪರಿಶೀಲಿಸುವುದಾಗಿ ಹೇಳಿರುವ ಎಸ್‌ಕೆಬಿ ಯಾವುದೇ ನಿರ್ಧಾರ ಕೈಗೊಂಡರೂ ತಮ್ಮ ಬೆಂಬಲಿಗರ ಅಭಿಪ್ರಾಯ ಪಡೆದು ಮುಂದುವರಿಯುವುದಾಗಿ ತಿಳಿಸಿದ್ದಾರೆ ಎಂದರು.

Suvarna cover story:ರಾಗಿ ಬೆಳೆದ ರೈತರ ಕಷ್ಟ ಯಾರಿಗೂ ಬೇಡ..!

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಘು ಆಚಾರ್‌, ನಾನು ಚಿತ್ರದುರ್ಗದಿಂದ ಜೆಡಿಎಸ್‌ ಆಭ್ಯರ್ಥಿ ಆಗುತ್ತಿದ್ದೇನೆ. ಬೆಂಬಲ ನೀಡುವಂತೆ ಬಸವರಾಜನ್‌ ಬಳಿ ಮನವಿ ಮಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಏತನ್ಮಧ್ಯೆ ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ರಘು ಆಚಾರ್‌ ಅವರು ಭಾನುವಾರ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಏಪ್ರಿಲ್‌ 17ರಂದು ನಾಮಪತ್ರ ಸಲ್ಲಿಸಲು ತೀರ್ಮಾನಿಸಿರುವ ರಘು ಆಚಾರ್‌ಗೆ ಈ ಸಭೆ ಮಹತ್ವದ್ದಾಗಿದೆ.