Asianet Suvarna News Asianet Suvarna News

ನಿತಿನ್ ಗಡ್ಕರಿ, ದೇವೇಂದ್ರ ಫಡ್ನವೀಸ್ ತವರು ನೆಲ ನಾಗ್ಪುರದಲ್ಲಿ ಬಿಜೆಪಿಗೆ ದೊಡ್ಡ ಹೊಡೆತ..!

ಎಂವಿಎಯ ಸುಧಾಕರ್ ಅಡ್ಬಲೆ ನಾಗಪುರ ಶಿಕ್ಷಕರ ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಬೆಂಬಲಿತ ನಾಗೋ ಗನಾರ್ ಅವರನ್ನು ಸೋಲಿಸಿದರು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

big blow to bjp on nitin gadkari devendra fadnaviss home turf nagpur ash
Author
First Published Feb 2, 2023, 10:42 PM IST

ನಾಗ್ಪುರ (ಫೆಬ್ರವರಿ 2, 2023): ಮಹಾರಾಷ್ಟ್ರದಲ್ಲಿ ತನ್ನ ಪ್ರಮುಖ ಭದ್ರಕೋಟೆಗಳಲ್ಲಿ ಒಂದಾದ ನಾಗ್ಪುರದಲ್ಲಿ ಬಿಜೆಪಿಗೆ ಪ್ರಮುಖ ಚುನಾವಣಾ ಹಿನ್ನಡೆಯಾಗಿದ್ದು, ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟದ ಅಭ್ಯರ್ಥಿ ಗುರುವಾರ ಮಹಾರಾಷ್ಟ್ರ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ಸ್ಪರ್ಧಿಯನ್ನು ಸೋಲಿಸಿದ್ದಾರೆ. ನಾಗ್ಪುರದಲ್ಲಿ ಸೈದ್ಧಾಂತಿಕ ಮೂಲ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನ ಕೇಂದ್ರ ಕಚೇರಿಯನ್ನು ಹೊಂದಿದೆ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರಂತಹ ಪ್ರಮುಖ ನಾಯಕರ ತವರು ಕ್ಷೇತ್ರವಾಗಿದೆ.

ಏಕನಾಥ್‌ ಶಿಂಧೆ (Eknath Shinde) ಶಿವಸೇನೆಯ (Shiv Sena) ಉದ್ಧವ್‌ ಠಾಕ್ರೆ (Uddhav Thackeray) ಬಣದಿಂದ ದೂರವಾಗಿ ಬಿಜೆಪಿಯೊಂದಿಗೆ (BJP) ಸೇರಿಕೊಂಡು ಸಿಎಂ ಆದ ನಂತರ ಮೊದಲ ಬಾರಿಗೆ ಜೂನ್‌ನಲ್ಲಿ ರಾಜ್ಯದಲ್ಲಿ ನಡೆದ ಪ್ರಮುಖ ಚುನಾವಣೆಯಲ್ಲಿ (Election) ಎಂವಿಎಯ (MVA) ಸುಧಾಕರ್ ಅಡ್ಬಲೆ ನಾಗಪುರ ಶಿಕ್ಷಕರ ಸ್ಥಾನದಲ್ಲಿ (Nagpur Teacher Seat) ಗೆಲುವು ಸಾಧಿಸಿದ್ದು, ಬಿಜೆಪಿ ಬೆಂಬಲಿತ ನಾಗೋ ಗನಾರ್ ಅವರನ್ನು ಸೋಲಿಸಿದರು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಪ್ರಧಾನಿ ಮೋದಿ ರಾಷ್ಟ್ರಪಿತ; ದೇಶದಲ್ಲಿ ಇಬ್ಬರು ರಾಷ್ಟ್ರಪಿತರು ಎಂದ ದೇವೇಂದ್ರ ಫಡ್ನವೀಸ್‌ ಪತ್ನಿ ಅಮೃತಾ

ಮಹಾರಾಷ್ಟ್ರ ಶಾಸಕಾಂಗದ ಮೇಲ್ಮನೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗಳು ಬಿಜೆಪಿ ಮತ್ತು ಏಕನಾಥ್‌ ಶಿಂಧೆ ಬೆಂಬಲಿತ ಅಭ್ಯರ್ಥಿ ಹಾಗೂ ಉದ್ಧವ್‌ ಠಾಕ್ರೆ, ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಒಳಗೊಂಡಿರುವ ಎಂವಿಎ ಬೆಂಬಲಿತ ಅಭ್ಯರ್ಥಿಗಳ ನಡುವೆ ನಡೆಯಿತು. ಮೂರು ಶಿಕ್ಷಕರು ಮತ್ತು ಇಬ್ಬರು ಪದವೀಧರ ಕ್ಷೇತ್ರಗಳ ಐದು ಕೌನ್ಸಿಲ್ ಸದಸ್ಯರ 6 ವರ್ಷಗಳ ಅವಧಿ ಫೆಬ್ರವರಿ 7 ರಂದು ಮುಕ್ತಾಯಗೊಳ್ಳುತ್ತಿದ್ದು, ಈ ಹಿನ್ನೆಲೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸೋಮವಾರ ಮತದಾನ ನಡೆದಿದೆ.

ಶಿಕ್ಷಕರು ಮತ್ತು ಪದವೀಧರರು ಕೆಲವು ಮಾನದಂಡಗಳನ್ನು ಪೂರೈಸುತ್ತಾರೆ ಮತ್ತು ಮತದಾರರಾಗಿ ನೋಂದಾಯಿಸಲ್ಪಟ್ಟವರು ಈ ಚುನಾವಣೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು. ಈ ಪೈಕಿ ಕೊಂಕಣ ಶಿಕ್ಷಕರ ಕ್ಷೇತ್ರದಲ್ಲಿ ಶೇ. 91.02 ಅತಿ ಹೆಚ್ಚು ಮತದಾನವಾಗಿದ್ದರೆ, ನಾಸಿಕ್ ವಿಭಾಗದ ಪದವೀಧರರ ಸ್ಥಾನವು ಅತಿ ಕಡಿಮೆ ಮತದಾನವಾಗಿದ್ದು, ಶೇ.49.28ರಷ್ಟು ಮತದಾನವಾಗಿದೆ. ಇನ್ನು, ಔರಂಗಾಬಾದ್, ನಾಗ್ಪುರ ಮತ್ತು ಕೊಂಕಣ ವಿಭಾಗದ ಶಿಕ್ಷಕರ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ.86, ಶೇ.86.23 ಮತ್ತು ಶೇ.91.02 ರಷ್ಟು ಮತದಾನವಾಗಿದೆ.

ಇದನ್ನೂ ಓದಿ: ನೀವ್ಯಾಕೆ ಕಾಂಗ್ರೆಸ್‌ಗೆ ಸೇರಬಾರ್ದು ಎಂದು ಕೇಳಿದ್ದಕ್ಕೆ ನಿತಿನ್‌ ಗಡ್ಕರಿ ಉತ್ತರ ಇದು..!

ನಾಗ್ಪುರ ಹೊರತುಪಡಿಸಿದರೆ, ನಾಸಿಕ್ ವಿಭಾಗದ ಪದವೀಧರರ ಸೀಟು ಸಹ ತೀವ್ರ ಜಿದ್ದಾಜಿದ್ದಿಯ ಪೈಪೋಟಿಯ ಕ್ಷೇತ್ರವಾಗಿದ್ದು, ಅಲ್ಲಿ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್‌ನಲ್ಲಿ ಬಂಡಾಯವೆದ್ದಿತ್ತು. 3 ಬಾರಿ ಪರಿಷತ್ ಸದಸ್ಯರಾಗಿರುವ ಸುಧೀರ್ ತಾಂಬೆ ಈ ಸ್ಥಾನಕ್ಕೆ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು, ಆದರೆ ಅವರು ನಾಮಪತ್ರ ಸಲ್ಲಿಸಲಿಲ್ಲ.
ಅವರು ಸ್ಪರ್ಧೆಯಿಂದ ಹೊರಗುಳಿಯುತ್ತಿದ್ದಂತೆ, ಅವರ ಮಗ ಸತ್ಯಜೀತ್ ತಾಂಬೆ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದರು. ಬಳಿಕ ಕಾಂಗ್ರೆಸ್ ಇಬ್ಬರನ್ನೂ ಅಮಾನತು ಮಾಡಿತ್ತು. ಸತ್ಯಜೀತ್ ತಾಂಬ್ಡೆ ಅವರು ಪ್ರಸ್ತುತ ಚುನಾವಣೆಯಲ್ಲಿ ಮುನ್ನಡೆಯಲ್ಲಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜಕೀಯವೆಂದರೆ ಈಗ ಕೇವಲ ಅಧಿಕಾರದಲ್ಲಿರುವುದಷ್ಟೇ: ನಿತಿನ್‌ ಗಡ್ಕರಿ

Follow Us:
Download App:
  • android
  • ios