ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ನಡುವಿನ ಜಟಾಪಟಿ ಮುಂದಿವರೆದಿದೆ. 

ಬೆಳಗಾವಿ, (ಫೆ.13): ಗೋಕಾಕದಿಂದ ಸ್ಪರ್ಧಿಸುವುದಾಗಿ ಪಂಥಾಹ್ವಾನ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಚಿವ ರಮೇಶ ಜಾರಕಿಹೊಳಿ ಮತ್ತೆ ತಿರುಗೇಟು ಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಇಂದು (ಶನಿವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹೆಬ್ಬಾಳ್ಕರ್​ಗೆ ಮೈಂಡ್​​ ಔಟ್​ ಆಗಿದೆ ಎಂದು ಟಾಂಗ್ ಕೊಟ್ಟರು.

ನನ್ನ ಕ್ಷೇತ್ರ ಟಾರ್ಗೆಟ್ ಮಾಡಿದ್ರೆ ನಾನು ಗೋಕಾಕ್ ಟಾರ್ಗೆಟ್ ಮಾಡುತ್ತೇನೆ. ಪಕ್ಷ ಬಯಸಿದ್ರೆ ಗೋಕಾಕ್​ನಿಂದ ನಾನೇ ಸ್ಪರ್ಧೆ ಮಾಡ್ತೀನಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು. ಇದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ್ದ ಸಚಿವ ರಮೇಶ್ ಜಾರಕಿಹೊಳಿ.. ಮೋಸ್ಟ್​ ವೆಲ್​ಕಮ್ ಎಂದಿದ್ದರು.

ಸಾಹುಕಾರ್‌ಗೆ ಟಕ್ಕರ್ ಕೊಟ್ಟ ಲಕ್ಷ್ಮೀ: ರಾಜಕಾರಣದಲ್ಲಿ ಸಂಚಲನ

 ಬಜೆಟ್​​ ವಿಷಯದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ 'ಸರ್​​ ಗೋಕಾಕ್ ಕ್ಷೇತ್ರದ ಅಖಾಡಕ್ಕೆ ಮತ್ತೊಬ್ಬರು ಪ್ರತಿಸ್ಪರ್ಧಿ ಬರ್ತಿದ್ದಾರಂತೆ' ಅಂತಾ ವರದಿಗಾರರು ಪ್ರಶ್ನೆ ಮಾಡಿದ್ರು. ಅದಕ್ಕೆ ತುಂಬಾ ಜೋಶ್​​ನಿಂದ ಉತ್ತರಿಸಿದ ರಮೇಶ್ ಜಾರಕಿಹೊಳಿ, ನಾನು ನಿನ್ನೆಯೇ ಮೋಸ್ಟ್​ ವೆಲ್​​ಕಮ್ ಅಂದಿದ್ದೀನಿ.. ಯಾರ್ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಮೈಂಡ್ ಔಟ್ ಆಗಿದೆ. ಆ ವಿಚಾರವನ್ನ ಬಿಟ್ಟುಬಿಡಿ ಎಂದರು.

 ಅಂದ್ರೆ ಏನು ಅಂತಾ ವರದಿಗಾರರು ಕೇಳಿದಾಗ.. ಹೆಬ್ಬಾಳ್ಕರ್​ಗೆ ಔಟ್ ಆಪ್ ಮೈಂಡ್ ಆಗಿದೆ. ಅದಕ್ಕೆ ಹೀಗೆ ಮಾತಾನಡುತ್ತಿದ್ದಾರೆ. ಔಟ್ ಆಪ್ ಮೈಂಡ್ ಆದರೆ ಬಸ್ ಸ್ಟಾಂಡ್​​ನಲ್ಲಿ ಹುಡಕಬೇಕು ಎಂದು ಜಾರಕಿಹೊಳಿ ಟಾಂಗ್ ನೀಡಿ ನಕ್ಕರು.