Asianet Suvarna News Asianet Suvarna News

ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ, ನೊಣವಿನಕೆರೆ ಯಶ್ವಂತ ಗುರೂಜಿ ಸ್ಟೋಟಕ ಭವಿಷ್ಯ

ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ ಎಂದು ನೊಣವಿನಕೆರೆಯ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಸ್ಟೋಟಕ ಭವಿಷ್ಯ ನುಡಿದಿದ್ದಾರೆ.

basanagouda patil yatnal will be  opposition leader says Nonavinakere Yashwant Guruji Prediction gow
Author
First Published Aug 11, 2023, 1:13 PM IST | Last Updated Aug 11, 2023, 1:13 PM IST

ತುಮಕೂರು(ಆ.11): ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ ಎಂದು ನೊಣವಿನಕೆರೆಯ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಸ್ಟೋಟಕ ಭವಿಷ್ಯ ನುಡಿದಿದ್ದಾರೆ. ಗ್ರಹ-ಗತಿಗಳ ಬಲಾಬಲಗಳನ್ನ ತಾಳೆ ಹಾಕಿ ನೋಡಿದ್ರೆ ಯತ್ನಾಳ್‌ರೇ ವಿರೋಧ ಪಕ್ಷದ ನಾಯಕ. ಯತ್ನಾಳ್‌ಗೆ ವಿರೋಧ ಪಕ್ಷದ ನಾಯಕನ ಸ್ಥಾನ‌ವನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂಬರುವ ಅಮಾವಾಸ್ಯೆ ಬಳಿಕ ತತಕ್ಷಣವೇ ಯತ್ನಾಳ್ ವಿರೋಧ ಪಕ್ಷದ ನಾಯಕ ಆಗ್ತಾರೆ ಎಂದು ಹೇಳಿದ್ದಾರೆ. 

ವಿರೋಧ ಪಕ್ಷದ ನಾಯಕ ಯಾರು ಆಗ್ತಾರೆ ಅಂತಾ ಕೆಲವರು ನನ್ನನ್ನು ಕೇಳಿದ್ರು. ಎಲ್ಲಾ ನಾಯಕರ ಜಾತಕಗಳ ಬಲಾಬಲಗಳನ್ನ ತಾಳೆ ಹಾಕಿ, ವಿಮರ್ಶೆ ಮಾಡಿ ನೋಡಲಾಗಿದೆ. ಹಿಂದೂ ಹುಲಿ ಅಂತಾ ಏನ್ ಕರಿತಾರೆ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ ಆಗ್ತಾರೆ. ಇದು ಕಾಲಜ್ಞಾನ ಭವಿಷ್ಯವಾಣಿ ಹೇಳ್ತಿರೋದು. ಖಂಡಿತವಾಗಿಯೂ ಯತ್ನಾಳ್‌ಗೆ ವಿರೋಧ ಪಕ್ಷದ ನಾಯಕನ ಸ್ಥಾನ ಪ್ರಾಪ್ತಿ ಆಗ್ತದೆ. ಶಕ್ತಿಗಿಂತ ಗ್ರಹಗತಿಗಳ ಬಲಾಬಲಗಳ ಆಧಾರದ ಮೇಲೆ  ಯತ್ನಾಳ್‌ಗೆ ಆ ಯೋಗ ಇದೆ  ಎಂದು ತುಮಕೂರಿನ ನೊಣವಿನಕೆರೆಯಲ್ಲಿ ಯಶ್ವಂತ ಗುರೂಜಿ ಸ್ಟೋಟಕ ಭವಿಷ್ಯ ನುಡಿದಿದ್ದಾರೆ.

ಡಿಕೆಶಿ ನಂಬಿ ನಡೆವ ಸೋಮೆಕಟ್ಟೆ ಕಾಡಸಿದ್ಧೇಶ್ವರ ಮಠದ ವಿಶೇಷತೆಯೇನು?

ಇದಕ್ಕೂ ಮುನ್ನ  ಭಾರತದ ಮುಂದಿನ ಪ್ರಧಾನಿಯಾಗುವ ಯೋಗ ಒಬ್ಬ ಮಹಿಳೆಗೆ ಇದೆ ಎಂದು ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಭವಿಷ್ಯ ನುಡಿದಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಅಂತ ಗುರೂಜಿ ಈ ಹಿಂದೆ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ನಿಜವಾಗಿದೆ. ಇದೀಗ ರಾಷ್ಟ್ರ ರಾಜಕಾರಣದ ಭವಿಷ್ಯ ನುಡಿದಿದ್ದಾರೆ.

ಇಂದಿರಾಗಾಂಧಿ ನಂತರ ರಾಷ್ಟ್ರ ರಾಜಕಾರಣದ ಚುಕ್ಕಾಣಿಯನ್ನ ಮಹಿಳೆಯೇ ಹಿಡಿಯಲಿದ್ದಾರೆ. ಮಹಾಶಿವರಾತ್ರಿ ಹಬ್ಬದ ನಂತರ ಒಂದು ಶಕ್ತಿ ಅಂದರೆ, ಒಂದು ಸ್ತ್ರೀ ದೇಶವನ್ನ ಆಳ್ತಾರೆ. ಹಾಗಂತ ಕಾಲಜ್ಞಾನದ ಭವಿಷ್ಯವಾಣಿ ಭವಿಷ್ಯವನ್ನ ಹೇಳ್ತಿದೆ ಎಂದಿದ್ದರು.

ಎಲ್ಲ ಕೆಲಸಕ್ಕೂ ಈ ಅಜ್ಜಯ್ಯನ ಅಪ್ಪಣೆಗೆ ಕಾಯ್ತಾರೆ ಡಿಕೆಶಿ, ಅವರ ಮಹಾತ್ಮೆ ಏನು?

35 ವರ್ಷಗಳ ಹಿಂದಿನ ದಿನಮಾನಗಳಲ್ಲಿ ಒಂದು ಸ್ತ್ರೀ ದೇಶವನ್ನ ಆಳಿದ್ದಾರೆ. ಈಗ ಮಹಾಶಿವರಾತ್ರಿ ನಂತರ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಈ ದೇಶವನ್ನ ಒಂದು ಶಕ್ತಿ ಅಂದರೆ, ಒಂದು ಸ್ತ್ರೀ ಮಹಾಶಿವರಾತ್ರಿ ನಂತರ ದೇಶ ಆಳುತ್ತಾರೆ ಎಂದು ಹೇಳಿದ್ದರು.

ಕಾಲಜ್ಞಾನ ಭವಿಷ್ಯದ ಪ್ರಕಾರ ಒಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಅತಂತ್ರ ಪರಿಸ್ಥಿತಿ ಎದುರಾಗಲಿದೆ. ಮಿತ್ರ ಪಕ್ಷಗಳ ಸಹಾಯದಿಂದ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ಯೋಗವಿರುವ ಸ್ತ್ರೀ ಯಾರೆಂದು ಮಕರ ಸಂಕ್ರಮಣದ ಹಬ್ಬದಂದು ಹೇಳಲಾಗುತ್ತದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios