Asianet Suvarna News Asianet Suvarna News

BJP Politics: ಈಶ್ವರಪ್ಪ ಭವಿಷ್ಯ ಸುಳ್ಳಾಗಲಿದೆ, ನಿರಾಣಿ ಸಿಎಂ ಆಗಲ್ಲ: ಯತ್ನಾಳ್‌

*   ಕರ್ನಾಟಕ ಉಳಿಸುವವರು, ಯೋಗ್ಯರು, ಸಮರ್ಥರು ಈ ರಾಜ್ಯದ ಸಿಎಂ ಆಗಬೇಕು
*   ಈಶ್ವರಪ್ಪ ಅವರಿಗೆ ಏನಾಗಿದೆಯೋ ಗೊತ್ತಿಲ್ಲ
*   ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ
 

Basanagouda Patil Yatnal React on Minister KS Eshwarappa Statement grg
Author
Bengaluru, First Published Dec 10, 2021, 11:27 AM IST | Last Updated Dec 10, 2021, 11:27 AM IST

ಬಾಗಲಕೋಟೆ(ಡಿ.10):  ಕೈಗಾರಿಕಾ ಸಚಿವ ಮುರುಗೇಶ ನಿರಾಣಿ(Murugesh Nirani)  ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿರುವ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa)  ಅವರ ಭವಿಷ್ಯ ಸುಳ್ಳಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌(Basanagouda Patil Yatnal) ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ಕರ್ನಾಟಕ(Karnataka) ಉಳಿಸುವವರು, ಯೋಗ್ಯರು, ಸಮರ್ಥರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು(Chief Minister). ಹಿರಿಯರಾದ ಈಶ್ವರಪ್ಪ ಅವರ ಬಗ್ಗೆ ಗೌರವವಿದೆ. ಅವರಿಗೆ ಏನಾಗಿದೆಯೋ ಗೊತ್ತಿಲ್ಲ. ಅವರ ಮಾತಿಗೆ ನನ್ನದು ಮಾತ್ರವಲ್ಲ, ವಿಜಯಪುರ(Vijayapura) ಹಾಗೂ ಬಾಗಲಕೋಟೆಯ(Bagalkot) ಯಾವುದೇ ಶಾಸಕರ ಸಹಮತವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Karnataka Congress Politics: ಬಾದಾಮಿ ಬಿಟ್ಟು ಕೊಡಲ್ವಂತೆ ಚಿಮ್ಮನಕಟ್ಟಿ: ಸಿದ್ದು ಎಲ್ಲಿಂದ ಸ್ಪರ್ಧೆ?

ದೇಶದ ಗೃಹ ಸಚಿವರೇ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ಚುನಾವಣೆಗೆ ಹೋಗಲಿದ್ದೇವೆ ಎಂದು ಹೇಳಿರುವಾಗ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಚಿವ ಈಶ್ವರಪ್ಪ ನನ್ನ ಕಿವಿಯಲ್ಲೂ ನೀವೇ ಮುಖ್ಯಮಂತ್ರಿ ಅಂತ ಹೇಳುತ್ತಿದ್ದರು. ಆದರೆ ಬೀಳಗಿಯಲ್ಲಿ ಆ ರೀತಿ ಯಾಕೆ ಹೇಳಿದರು ಎಂದು ತಿಳಿಯುತ್ತಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ(BS Yediyurappa) ಅವರು ತಮ್ಮ ಪುತ್ರನಿಗೆ ಮಂತ್ರಿ ಸ್ಥಾನ ಕೊಡಿಸಬಹುದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ನಾನು ಕುಟುಂಬ ರಾಜಕಾರಣವನ್ನು(Family Politics) ವಿರೋಧಿಸುವವ. ಕುಟುಂಬದ ಎಲ್ಲರನ್ನು ಅಧಿಕಾರಕ್ಕೆ ತರಲೆಂದೇ ದೇವೇಗೌಡ, ಲಾಲು ಪ್ರಸಾದ್‌ ಯಾದವ್‌, ಮುಲಾಯಂ ಸಿಂಗ್‌ ಅವರ ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷ ಇದೆ. ಆದರೆ ಬಿಜೆಪಿಯಲ್ಲಿ(BJP) ಇದಕ್ಕೆ ಅವಕಾಶ ಇಲ್ಲ ಎಂದು ಹೇಳಿದರು. ಇದೇ ವೇಳೆ, ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಮೀಸಲಾತಿ ಕುರಿತು ದಿನಾಂಕ ನಿಗದಿ ಮಾಡಿ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

MLC Election Karnataka : ಈಶ್ವರಪ್ಪ, ಹಾಲಪ್ಪ ಸಮ್ಮುಖ BJP ಸೇರ್ಪಡೆ : ಸಂಜೆ ಗೋಪಾಲಕೃಷ್ಣ ಸಮ್ಮುಖ ಮರಳಿ ಕೈಗೆ

ಈಶ್ವರಪ್ಪನವರಿಗೆ ಋಣಿ ಎಂದ ನಿರಾಣಿ

ತಾವು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನನ್ನ ಮೇಲೆ  ಪ್ರೀತಿ, ವಿಶ್ವಾಸವಿಟ್ಟು ಅವರು ಹೇಳಿರಬಹುದು ಎಂದರು. ಬಾಗಲಕೋಟೆಯಲ್ಲಿಂದು (Bagalakote) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನನ್ನ ತವರು ಕ್ಷೇತ್ರವಾದ ಬೀಳಗಿಯಲ್ಲಿ ಬಿಜೆಪಿಯ (BJP) ಹಿಂದುಳಿದ ವರ್ಗಗಳ ಮೊರ್ಚಾ ಸಭೆಯನ್ನು ಆಯೋಜಿಸಲಾಗಿತ್ತು .ಆ ವೇಳೆ ಮಾತನಾಡುವಾಗ ಈಶ್ವರಪ್ಪನವರು ನಾನು  ಮುಂದಿನ ಸಿಎಂ ಎಂದು ಹೇಳಿದ್ದರು. ಇದು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಕಳೆದ ಹಲವು ವರ್ಷಗಳಿಂದ ನಾವು ಮಾಡಿಕೊಂಡು ಬಂದಿರುವ ಸಾರ್ವಜನಿಕ ಸೇವೆ, ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಅವರು ಅಭಿಮಾನದಿಂದ ಹೇಳಿರಬಹುದೆಂದು ಸಚಿವ ಮುರುಗೇಶ್ ನಿರಾಣಿ  ಅಭಿಪ್ರಾಯಪಟ್ಟರು. 
ಕಳೆದ 5 ದಶಕಗಳಿಂದ ರಾಜ್ಯದಲ್ಲಿ ಮಾಜಿ ಸಿಎಂ ಹಾಗೂ ನಮ್ಮ ನಾಯಕರಾದ ಯಡಿಯೂರಪ್ಪ, ಕೇಂದ್ರ ಮಾಜಿ ಸಚಿವ ದಿವಂಗತ ಅನಂತ ಕುಮಾರ್ (Ananth Kumar) ಅವರ ಜೊತೆ ಈಶ್ವರಪ್ಪನವರು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರೊಬ್ಬ ಹಿರಿಯ ನಾಯಕರು.  ನನ್ನ ಮೇಲಿನ  ಅಭಿಮಾನಕ್ಕೆ ನಾನು ಋಣಿ ಎಂದ ಅವರು, ನನಗೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಣಿ ಖಾತೆಯನ್ನು ನೀಡಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರು ಕೈಗಾರಿಕೆ ಖಾತೆಯನ್ನು ನೀಡಿದ್ದಾರೆ. ಯಾವುದೇ ಖಾತೆ ನೀಡಿದರೂ ನಾನು ತೃಪ್ತಿಯಿಂದ ಕೆಲಸ ಮಾಡುತ್ತೇನೆ. ಈಗಲೂ ಅತ್ಯಂತ  ಸಂತೋಷದಿಂದ  ಇಲಾಖೆಯನ್ನು ನಿರ್ವಹಣೆ ಮಾಡುತ್ತಿದ್ದೇನೆ ಅಂತ ಹೇಳಿದ್ದರು.
 

Latest Videos
Follow Us:
Download App:
  • android
  • ios