Asianet Suvarna News Asianet Suvarna News

Karnataka Congress Politics: ಬಾದಾಮಿ ಬಿಟ್ಟು ಕೊಡಲ್ವಂತೆ ಚಿಮ್ಮನಕಟ್ಟಿ: ಸಿದ್ದು ಎಲ್ಲಿಂದ ಸ್ಪರ್ಧೆ?

*   ಹಲವು ಕ್ಷೇತ್ರಗಳಿಂದ ಸ್ಪರ್ಧೆಗೆ ನನಗೆ ಆಹ್ವಾನವಿದೆ
*   ಎಲ್ಲಾ ಕಡೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ
*   ನಮ್ಮ ಪಕ್ಷದ ಬಗ್ಗೆ ಪ್ರಶ್ನಿಸಲು ಸಿ.ಟಿ.ರವಿ ಯಾರು?
 

Where Siddaramaiah Contest in Next  Karnataka Assemble Polls  grg
Author
Bengaluru, First Published Dec 10, 2021, 10:23 AM IST

ಬೆಂಗಳೂರು(ಡಿ.10):  ನಾನು ಪ್ರಸ್ತುತ ಬಾದಾಮಿ(Badami) ಕ್ಷೇತ್ರದ ಶಾಸಕ. ರಾಜ್ಯದ(Karnataka) ಹಲವು ಕ್ಷೇತ್ರಗಳಿಂದ ಸ್ಪರ್ಧಿಸಲು ನನಗೆ ಆಹ್ವಾನ ನೀಡುತ್ತಿದ್ದಾರೆ. ಎಲ್ಲಾ ಕಡೆಯೂ ನಾನು ಸ್ಪರ್ಧಿಸಲು ಸಾಧ್ಯವಿಲ್ಲ. ಹೀಗಾಗಿ ಹೈಕಮಾಂಡ್‌ ಸೂಚಿಸಿದ ಕಡೆ ಸ್ಪರ್ಧೆ ಮಾಡುತ್ತೇನೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.

ಬೆಂಗಳೂರಿನಲ್ಲಿ(Bengaluru) ಸುದ್ದಿಗಾರರೊಂದಿಗೆ ಮಾತನಾಡಿ ಚಾಮರಾಜಪೇಟೆಯಿಂದ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಆಗಾಗ ಚಾಮರಾಜಪೇಟೆಗೆ ಬರುತ್ತಾ ಇರುತ್ತೇನೆ. ಹೀಗಾಗಿ ಚಾಮರಾಜಪೇಟೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳುತ್ತಾರೆ. ಆದರೆ, ನನಗೆ ಕೋಲಾರ, ಕೊಪ್ಪಳ, ಚಾಮರಾಜಪೇಟೆ, ಚಿಕ್ಕನಾಯಕನಹಳ್ಳಿ, ಅರಕಲಗೂಡು, ಹುಣಸೂರು ಕ್ಷೇತ್ರಗಳಿಂದಲೂ ಸ್ಪರ್ಧೆಗೆ ಆಹ್ವಾನ ನೀಡುತ್ತಿದ್ದಾರೆ. ಆದರೆ ಎಲ್ಲಾ ಕಡೆಯೂ ನಾನು ನಿಲ್ಲಲಾಗದು. ಹೀಗಾಗಿ ಹೈಕಮಾಂಡ್‌(Highcommand) ಎಲ್ಲಿ ನಿಲ್ಲಲು ಸೂಚಿಸುತ್ತದೆಯೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

Suvarna Special : ಸಿದ್ದುಗೆ ಬಾದಾಮಿ ಬಾಗಿಲು ಬಂದ್,  ವಿಪಕ್ಷ ನಾಯಕನಿಗೆ ಕ್ಷೇತ್ರವಿಲ್ವಾ!?

ಸಿಟಿ.ರವಿ ಯಾರು?:

‘ಬಾದಾಮಿ ಕ್ಷೇತ್ರ ಬಿಟ್ಟು ಕೊಡುವುದಿಲ್ಲ ಎಂಬ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ(BB Chimmanakatti) ಅವರ ಹೇಳಿಕೆ ಹಿಂದೆ ಯಾರೋ ಇದ್ದಾರೆ’ ಎಂದಿದ್ದ ಬಿಜೆಪಿ(BJP) ನಾಯಕ ಸಿ.ಟಿ. ರವಿ(CT Ravi) ಹೇಳಿಕೆಗೆ ಕಿಡಿ ಕಾರಿದ ಸಿದ್ದರಾಮಯ್ಯ, ನಮ್ಮ ಪಕ್ಷದ ಬಗ್ಗೆ ಮಾತನಾಡಲು ಸಿ.ಟಿ. ರವಿ ಯಾರು? ಎಂದು ಪ್ರಶ್ನಿಸಿದರು.

ಸಿ.ಟಿ. ರವಿ ನಮ್ಮ ಪಕ್ಷದ ವಿಚಾರ ಮಾತನಾಡುವ ಅಗತ್ಯವಿಲ್ಲ. ಬಿ.ಬಿ. ಚಿಮ್ಮನಕಟ್ಟಿ ವಿಧಾನ ಪರಿಷತ್‌ ಚುನಾವಣೆ(Vidhan Parishat Election) ಟಿಕೆಟ್‌ ಕೇಳಿದ್ದು ನಿಜ. ಟಿಕೆಟ್‌ ಕೇಳಿದವರೆಗೆಲ್ಲರಿಗೂ ಕೊಡಲು ಆಗುವುದಿಲ್ಲ. ಪರಿಷತ್‌ ಚುನಾವಣೆ ಟಿಕೆಟ್‌ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಈ ಬಗ್ಗೆ ನಮ್ಮ ಪಕ್ಷದವರ ನಡುವೆ ನಡೆಯುವ ಚರ್ಚೆಗಳ ಕುರಿತು ಸಿ.ಟಿ. ರವಿ ಅವರಿಗೆ ಉತ್ತರ ಕೊಡಲು ಆಗುವುದಿಲ್ಲ ಎಂದು ಹೇಳಿದರು.

15 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ:

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದಲ್ಲಿ ಮತದಾರರ ಒಲವು ಕಾಂಗ್ರೆಸ್‌(Congress) ಪರವಾಗಿದೆ. ಹೀಗಾಗಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳನ್ನು ಸಶಕ್ತ ಮಾಡಿದ್ದು ಕಾಂಗ್ರೆಸ್‌. ಅನುದಾನ, ಸಾಮಾಜಿಕ ನ್ಯಾಯ ನೀಡಿದ್ದು ಕಾಂಗ್ರೆಸ್‌. ಬಿಜೆಪಿ ಆಗಲಿ, ಸಮ್ಮಿಶ್ರ ಸರ್ಕಾರವಾಗಲಿ(Coalition Government) ಬಡವರಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ. ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಪರ ಒಲವಿದೆ. ಹೀಗಾಗಿ ಹದಿನೈದು ಸ್ಥಾನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದರು.

Karnataka Politics : ಸಿದ್ದು ಸ್ಪರ್ಧಿಸುವ ಕಡೆ ಕಾಂಗ್ರೆಸಲ್ಲೇ ಸುಂಟರಗಾಳಿ

2ನೇ ಅಲೆಯಂತೆ ಮೂರ್ಖತನ ಬೇಡ: ಸಿದ್ದರಾಮಯ್ಯ

ರಾಜ್ಯದಲ್ಲಿ ಒಮಿಕ್ರೋನ್‌(Omicron) ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರ(Government of Karnataka) ಎರಡನೇ ಅಲೆಯಲ್ಲಿ ಮಾಡಿದಂತಹ ಮೂರ್ಖತನ ಮಾಡದೆ ಒಮಿಕ್ರೋನ್‌ ಹರಡದಂತೆ ನೋಡಿಕೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿ. ಈ ವೈರಸ್‌(Virus) ಅತಿ ವೇಗವಾಗಿ ಹರಡುತ್ತದೆ ಎಂದು ತಜ್ಞರು(Experts) ಹೇಳುತ್ತಿದ್ದಾರೆ. ಹೀಗಾಗಿ ಸರ್ಕಾರ ಯಾವ ರೀತಿಯ ನಿಯಮಗಳನ್ನಾದರೂ ಮಾಡಲಿ.ಒಟ್ಟಿನಲ್ಲಿ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದರು.

ವಿಜಯನಗರದಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯಗೆ ಆಹ್ವಾನ!

ಹೊಸಪೇಟೆ: ಮಾಜಿ ಸಿಎಂ ಸಿದ್ದರಾಮಯ್ಯಗೆ ವಿಜಯನಗರ (Hosapete) ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಅಭಿಮಾನಿಗಳು ಆಹ್ವಾನ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿಜಯನಗರ ಜಿಲ್ಲೆಯ ವಿಜಯನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಅವರ ಅಭಿಮಾನಿಗಳಾದ ಸೋಮಶೇಖರ್‌ ಬಣ್ಣದಮನೆ ಆಹ್ವಾನ ನೀಡಿದ್ದಾರೆ. ‘ಅಣ್ಣ’ರಾಮಯ್ಯ ವಿಜಯನಗರ ಕ್ಷೇತ್ರಕ್ಕೆ ಸ್ಪರ್ಧಿಸಿದ್ರೆ ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತೇವೆ. ವಿಜಯನಗರ ಜಿಲ್ಲೆಗೂ ವಿಜಯನಗರದ ಗತಕಾಲದ ವೈಭವ, ಇತಿಹಾಸ ಮರುಕಳಿಸುವಂತಾಗಲಿದೆ ಎಂದು ಫೇಸ್‌ಬುಕ್‌ನಲ್ಲಿ(Facebook) ಸೋಮಶೇಖರ್‌ ಬಣ್ಣದಮನೆ ಪೋಸ್ಟ್‌ ಮಾಡಿದ್ದಾರೆ. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌(Anand Singh) ಅವರು ಶಾಸಕರಾಗಿರುವ ಕ್ಷೇತ್ರಕ್ಕೆ ಸಿದ್ದರಾಮಯ್ಯನವರನ್ನು ಆಹ್ವಾನಿಸಿರುವುದರಿಂದ, ಈ ಪೋಸ್ಟ್‌ ಭಾರಿ ವೈರಲ್‌ ಆಗುತ್ತಿದೆ.
 

Follow Us:
Download App:
  • android
  • ios