ಲೋಕಸಭೆ ಸಂದರ್ಭದಲ್ಲಿ ಶೆಟ್ಟರ್ ಮತ್ತೆ ಬಿಜೆಪಿ ಸೇರಿದ ಬೆಳವಣಿಗೆ ಸರಿಯಲ್ಲ: ಜನಾರ್ದನ ಪೂಜಾರಿ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಬಂದು ಈಗ ಮತ್ತೆ ಬಿಜೆಪಿ ಸೇರಿದ ಬಗ್ಗೆ ಹಿರಿಯ ಕಾಂಗ್ರೆಸಿಗ, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಖೇದ ವ್ಯಕ್ತಪಡಿಸಿದ್ದಾರೆ.
ಮಂಗಳೂರು (ಜ.26): ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಬಂದು ಈಗ ಮತ್ತೆ ಬಿಜೆಪಿ ಸೇರಿದ ಬಗ್ಗೆ ಹಿರಿಯ ಕಾಂಗ್ರೆಸಿಗ, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಖೇದ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆ ಬರುತ್ತಿರುವ ಸಂದರ್ಭದಲ್ಲಿ ಶೆಟ್ಟರ್ ಅವರು ಮತ್ತೆ ಬಿಜೆಪಿ ಸೇರಿದ ಬೆಳವಣಿಗೆ ಸರಿಯಲ್ಲ.
ಬಿಜೆಪಿಯಲ್ಲಿ ಅವರಿಗಾದ ಅನ್ಯಾಯದ ವಿರುದ್ಧ ಧ್ವನಿಎತ್ತಿ ಕಾಂಗ್ರೆಸ್‌ಗೆ ಬಂದ್ದಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಅವರು ಪರಾಭವಗೊಂಡರೂ, ಅನೇಕ ಕಾಂಗ್ರೆಸ್ ಹಿರಿಯ ಕಾರ್ಯಕರ್ತರು ಇರುವಾಗ ಅದನ್ನು ಬದಿಗಿಟ್ಟು, ಜಗದೀಶ್ ಶೆಟ್ಟರ್‌ರನ್ನು ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ಗೆ ಆಯ್ಕೆ ಮಾಡಲಾಯಿತು. ಈ ರೀತಿ ಪಕ್ಷಾಂತರ ಮಾಡುವುದು ದ್ರೋಹದ ಕೆಲಸ ಎಂದು ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸಕೋಟೆ-ಚಿಂತಾಮಣಿ ರಾಜ್ಯ ಹೆದ್ದಾರಿ ಮೇಲ್ದರ್ಜೆಗೆ ಪ್ರಸ್ತಾವನೆ: ಸಂಸದ ಬಿ.ಎನ್.ಬಚ್ಚೇಗೌಡ
ಕಾಂಗ್ರೆಸ್ಸಿನವರು ಇಟಲಿ ತಳಿ: ಕಾಂಗ್ರೆಸ್ಸಿನಲ್ಲಿರುವ ಎಲ್ಲರೂ ಇಟಲಿ ತಳಿಗಳೆ ಆಗಿದ್ದಾರೆ. ಅವರಿಗೆ ನಮ್ಮ ಶ್ರೀರಾಮ, ಹಿಂದೂ ಧರ್ಮ, ಸಂಸ್ಕೃತಿಯ ಹಾಗೂ ಸಂಪ್ರದಾಯದ ಬಗ್ಗೆ ಮಾತನಾಡಿದರೆ ಏನು ತಿಳಿಯಲು ಸಾಧ್ಯ? ಎಂದು ವಿಧಾನಸಭಾ ಉಪನಾಯಕ ಅರವಿಂದ ಬೆಲ್ಲದ ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಟಲಿ ತಳಿಗಳಿಗೆ ಕೇವಲ ಪೋಪ್ ಮತ್ತು ಚರ್ಚ್ ಬಗ್ಗೆ ಮಾತನಾಡಿದರೆ ಮಾತ್ರ ತಿಳಿಯುತ್ತದೆ ಹಾಗೂ ಖುಷಿ ಆಗುತ್ತದೆ. ಅದನ್ನು ಬಿಟ್ಟು ನಮ್ಮ ಶ್ರೀರಾಮ ಮತ್ತು ವಿಶ್ವನಾಥ ದೇವರ ಬಗ್ಗೆ ಕಿಂಚಿತ್ತು ಪರಿಜ್ಞಾನವಿಲ್ಲ. ಇಟಲಿ ತಳಿಗಳ (ಗಾಂಧಿ ಕುಟುಂಬದ) ಡಿಎನ್‌ಎದಲ್ಲಿಯೇ ಹಿಂದುತ್ವದ ಬಗ್ಗೆ ಅರಿವಿಲ್ಲ ಎಂದು ಟೀಕಿಸಿದರು.
ನೆಹರೂ ಪ್ರಧಾನಿಯಾಗಿದ್ದಾಗ ಸರ್ದಾರ್ ವಲ್ಲಭಭಾಯಿ ಪಟೇಲರು ಹಿಂದೂಧರ್ಮದ ಜಾಗೃತಿಗಾಗಿ ಸೋಮನಾಥ ದೇವಸ್ಥಾನದ ಪುನರುತ್ಥಾನ ಮಾಡಿದರು. ಆಗ ಅದರ ಉದ್ಘಾಟನೆಗೆ ಪ್ರಧಾನಿ ನೆಹರೂ ಹೋಗದೇ, ರಾಜೇಂದ್ರ ಪ್ರಸಾದ್ ಅವರನ್ನೂ ಹೋಗಲು ಬಿಡಲಿಲ್ಲ. ಕಾಂಗ್ರೆಸ್‌ನವರಿಗೆ ಮೊದಲಿನಿಂದಲೂ ಹಿಂದೂ ಧರ್ಮ ಹಾಗೂ ವಿಚಾರಧಾರೆಯ ಬಗ್ಗೆ ಯಾವುದೇ ಗೌರವ ಮತ್ತು ಅಭಿಮಾನವಿಲ್ಲ. ನಾವು ಎಷ್ಟೇ ಹೇಳಿದರೂ ಅವರಿಗೆ ಹಿಂದುತ್ವದ ಬಗ್ಗೆ ಅರಿವು ಮೂಡುವುದಿಲ್ಲ.
ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಸಂಕಲ್ಪಿಸಿ: ಎಚ್.ಡಿ.ದೇವೇಗೌಡ ಮನವಿ
ಆದರೆ ಕಾಂಗ್ರೆಸ್‌ನ ಕೆಲವು ನಾಯಕರು ಗೊಂದಲಕ್ಕೆ ಬಿದ್ದಿದ್ದು, ನಾವು ರಾಮನ ಭಕ್ತರು, ನಾವು ಸಹ ಗಾಂಧಿ ರಾಮರಾಜ್ಯ ಪಾಲನೆ ಮಾಡುತ್ತೇವೆ ಎಂದು ಆಗಾಗ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು. ಹಿರಿಯ ರಾಜಕಾರಣಿ ವೀರಪ್ಪ ಮೋಯ್ಲಿ ಅವರು ಮೋದಿಯವರ ಉಪವಾಸ ವ್ರತ ಹಾಗೂ ಅವರ ಪತ್ನಿಯ ಬಗ್ಗೆ ಟೀಕೆ ಮಾಡಿರುವುದು ಅಪ್ರಬುದ್ಧತೆ ತೋರಿಸುತ್ತದೆ. ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ಕಾಂಗ್ರೆಸ್‌ನವರು ಎಷ್ಟು ಜನರು ತಮ್ಮ ಪತ್ನಿಯರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ? ಅವರೆಲ್ಲಾ ಯಾರ್‍ಯಾರೋ ಜತೆ ಕಾಣಿಸಿಕೊಳ್ಳುವುದನ್ನು ಎಲ್ಲರೂ ನೋಡಿದ್ದಾರೆ ಎಂದು ಬೆಲ್ಲದ ಟೀಕಿಸಿದರು.